ದಿನದ ಅಪರಾಧಗಳ ಪಕ್ಷಿನೋಟ 27ನೇ ಏಪ್ರಿಲ್‌ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 26.04.2020 ರಂದು  ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

ಅಕ್ರಮ ಮದ್ಯ ಮಾರಾಟ : 01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 26.04.2020 ರಂದು ಬೆಳಿಗ್ಗೆ 7.15 ಗಂಟೆಯಲ್ಲಿ ಬೋಯಿಸೊನ್ನೇನಹಳ್ಳಿ ಗ್ರಾಮದ ವಾಸಿಗಳಾದ ಗೌತಮ್ ಬಿನ್ ಮುನಿವೆಂಕಟಪ್ಪ‌ ಮತ್ತು ಭರತ್‌ ಬಿನ್ ದನರಾಜ್‌ ರವರು ಕೆಂಪಾಪುರ ಗ್ರಾಮದಿಂದ ಬಜಾಜ್ ಪಲ್ಸರ್ ದ್ವಿಚಕ್ರ ವಾಹನದಲ್ಲಿ ಸಂಖ್ಯೆ ಕೆಎ53-ಇಜೆಡ್-4807 ರಲ್ಲಿ ಒಂದು ಪ್ಲಾಸ್ಟಿಕ್ ಬಿಂದಿಗೆಯನ್ನು ತೆಗೆದುಕೊಂಡು ಬರುತ್ತಿದ್ದು, ದೂರುದಾರರಾದ ಶ್ರೀ. ಜಬ್ಬೀರ್‌ ಪಾಷಾ, ಹೆಡ್‌ ಕಾನ್ಸ್‌ಟೆಬಲ್‌, ಚಾಂಪಿಯನ್‌ರೀಫ್ಸ್‌ ವೃತ್ತ ಕಛೇರಿ ರವರು ನಿಲ್ಲಿಸಿ ಬಿಂದಿಗೆಯನ್ನು ಪರಿಶೀಲಿಸಲಾಗಿ ಸುಮಾರು 10 ಲೀಟರ್ನಷ್ಟು ಸೇಂದಿ ಇದ್ದು, ವಿಚಾರಿಸಲಾಗಿ ಆಂಧ್ರದ ಗಡಿ ಭಾಗದ ಗ್ರಾಮಗಳಿಂದ ಶೇಖರಿಸಿಕೊಂಡು ಬಂದು ಕೆಜಿಎಫ್ ಹಾಗೂ ಇತರೆ ಗ್ರಾಮಗಳಿಗೆ ಮಾರಾಟ ಮಾಡುವ ಸಲುವಾಗಿ ತರುತ್ತಿರುವುದಾಗಿ ತಿಳಿಸಿದ್ದು, ಕರ್ನಾಟಕದಲ್ಲಿ ಎಲ್ಲಾ ರೀತಿಯ ಮಧ್ಯವನ್ನು ನಿಷೇಧ ಮಾಡಿದ್ದರೂ ಸಹಾ ಅಕ್ರಮವಾಗಿ ಸೇಂದಿಯನ್ನು ತರುತ್ತಿದ್ದರಿಂದ ಆರೋಪಿಗಳನ್ನು ಮತ್ತು ಮಾಲನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.

 

– ರಸ್ತೆ ಅಪಘಾತಗಳು : 01

ಚಾಂಪಿಯನ್‌ರೀಫ್ಸ್ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವೇಲಾಯುಧಂ ಬಿನ್ ಲೇಟ್ ಗೋವಿಂದನ್, ನಂ. 35, ಕೆ. ಬ್ಲಾಕ್, ಚಾಂಪಿಯನ್‌ರೀಫ್ಸ್, ಕೆ.ಜಿ.ಎಫ್. ರವರು ದಿನಾಂಕ: 18-04-2020 ರಂದು ಸಂಜೆ 07-00 ಗಂಟೆಯಲ್ಲಿ ಕೆ. ಬ್ಲಾಕ್‌ ನ ಬುದ್ದ ದೇವಾಲಯದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ, ಹೀರೋ ಸ್ಲ್ಪೆಂಡರ್ ಪ್ರೋ ದ್ವಿ ಚಕ್ರ ವಾಹನ ಸಂಖ್ಯೆ ಟಿಎನ್ 23 ಬಿ ಕ್ಯೂ 3416 ರ ಸವಾರ ವಿಘ್ನೇಶ್ ಆಂಡ್ರಸನ್ ಪೇಟೆಯ 2 ನೇ ಬ್ಲಾಕ್ ವಾಸಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ರಕ್ತಗಾಯಗಳಾಗಿರುತ್ತದೆ.

 

– ಹಲ್ಲೆ : 01

ಚಾಂಪಿಯನ್‌ರೀಫ್ಸ್‌ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ದಯಾಶಂಕರ್‌ ಬಿನ್ ರಾಜು, ಇ ಬ್ಲಾಕ್‌, ಚಾಂಪಿಯನ್‌ರೀಫ್ಸ್‌, ಕೆ.ಜಿ.ಎಫ್ ರವರು ದಿನಾಂಕ:26.04.2020 ರಂದು ಸಂಜೆ 4.00 ಗಂಟೆಯಲ್ಲಿ  ಕೆ.ಜಿ.ಎಫ್ ಎಂ.ಎಲ್.ಎ ರವರ ವತಿಯಿಂದ ಉಚಿತ ನೀರು ಸರಬರಾಜು ಮಾಡುವ ಟ್ಯಾಂಕರ್ ನ್ನು ಆರ್ ಬ್ಲಾಕ್ ವಾಸಿ ವಾಸು ಎಂಬುವವರು ಚಲಾಯಿಸಿಕೊಂಡು  ಜಿ ಬ್ಲಾಕ್ ಗೆ ತೆಗೆದುಕೊಂಡು ಬಂದಿದ್ದು ದೂರುದಾರರು ಟ್ಯಾಂಕರನಲ್ಲಿರುವ ನೀರನ್ನು ಜಿ ಬ್ಲಾಕ್ ವಾಸಿಗಳಿಗೆ ಸರಬರಾಜು ಮಾಡಲು ಜೋಸೆಫ್ ರವರ ಅಂಗಡಿ ಮುಂದಿನ ರಸ್ತೆಯಲ್ಲಿ ಹೋಗುತ್ತಿದ್ದಾಗ, ಲಿಯೋ ಮತ್ತು ಧರ್ಮ ಎಂಬುವವರು ದೂರುದಾರರ ಬಳಿ ಬಂದು “ನೀವು ಏಕೆ ನೀರನ್ನು ನಮ್ಮ ಏರಿಯಾದ ಜನರಿಗೆ ಸರಬರಾಜು ಮಾಡಲು ಬರುತ್ತಿದ್ದೀರಿ? ನೀವು ನಮ್ಮ ಏರಿಯಾಗೆ ಬರಬಾರದು” ಎಂದು ಹೇಳಿ  ಕೆಟ್ಟ ಮಾತುಗಳಿಂದ ಬೈದು, ಕೋಲು ಮತ್ತು ಚಾಕುವಿನಿಂದ ಹೊಡೆದು ರಕ್ತ ಗಾಯಪಡಿಸಿ, ಪ್ರಾಣ ಬೆದರಿಕೆ ಹಾಕಿರುತ್ತಾರೆ.

Leave a Reply

Your email address will not be published. Required fields are marked *