ದಿನದ ಅಪರಾಧಗಳ ಪಕ್ಷಿನೋಟ 27ನೇ ಮಾರ್ಚ್ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 26.03.2020 ರಂದು 
ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

– ದೊಂಬಿ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಹದಿನೈದು ದಿನಗಳ ಹಿಂದೆ ಈ ಕೇಸಿನ ಪಿರ್ಯಾದಿದಾರರು ಅಫ್ಜಲ್ ಪಾಷ, ಪಿಲ್ಲಣ್ಣ ಗಾರ್ಡನ್‌, ಬೆಂಗಳೂರು ರವರು ತಮ್ಮ ಕುಟುಂಬದೊಂದಿಗೆ ಅವರ ಮಾವನ ಊರಾದ ಒಂಬತ್ತುಗುಳಿ ಗ್ರಾಮಕ್ಕೆ ಬಂದಿದ್ದು, ಈಗ್ಗೆ ಸುಮಾರು ಎರಡು ದಿನಗಳ ಹಿಂದೆ ಆ1 ವೆಂಕಟೇಶ್ & ಆ2 ವಿಶ್ವನಾಥ, ಒಂಬತ್ತುಗುಳಿ ಗ್ರಾಮ ವಾಸಿ ರವರು ಪಿರ್ಯಾದಿಗೆ ಕೊರೋನಾ ವೈರಸ್ ಇದೆಯೆಂದು ಹೇಳಿಕೊಳ್ಳುತ್ತಿದ್ದು, ದಿನಾಂಕ 26.03.2020 ರಂದು ಮದ್ಯಾಹ್ನ ಸುಮಾರು 1.15 ಗಂಟೆಯಲ್ಲಿ ಪಿರ್ಯಾದಿದಾರರು ಒಂಬತ್ತುಗುಳಿ ಗ್ರಾಮದಲ್ಲಿರುವ ಅಂಗಡಿಗೆ ಮಗುವಿಗೆ ತಿಂಡಿ ತರಲು ಹೋಗುತ್ತಿದ್ದಾಗ, ಆ1-ವೆಂಕಟೇಶ್ & ಆ2-ವಿಶ್ವನಾಥ, ಆ3-ವೆಂಕಟೇಶ, ಆ4-ವೇಣು, ಆ5-ಮಂಜುನಾಥ, ಆ6-ಮುರಳಿ, ಆ7-ರಾಜೇಶ್, ಆ8-ಶ್ಯಾಮ್ ಹಾಗೂ ಇತರರು ಏಕಾಏಕಿ ಪಿರ್ಯಾದಿಯ ಬಳಿ ಬಂದು, ನೀನು ಬೆಂಗಳೂರಿನಿಂದ ನಮ್ಮೂರಿಗೆ ಬಂದಿದ್ದೀಯಾ, ನಿನಗೆ ಕೊರೋನಾ ವೈರಸ್ ಇರಬಹುದು’ ಎಂದು ಹೇಳಿದ್ದು, ಆಗ ಪಿರ್ಯಾದಿಯು ‘ನನಗೆ ಕೊರೋನಾ ವೈರಸ್ ಇರುವುದಿಲ್ಲ, ನಾನು ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಬ್ಲಡ್ ಚೆಕಪ್ ಮಾಡಿಸಿಕೊಂಡಿದ್ದೇನೆ, ನನಗೆ ಯಾವುದೇ ಖಾಯಿಲೆಯಿಲ್ಲ’ ಎಂದು ಹೇಳಿದ್ದಕ್ಕೆ ಆರೋಪಿಗಳೆಲ್ಲರೂ ಗಲಾಟೆ ಮಾಡಿ, ಆರೋಪಿಗಳು ಕೆಟ್ಟ ಮಾತುಗಳಿಂದ ಬೈದು ಹಲ್ಲೆ ಮಾಡಿರುತ್ತಾರೆ.

– ಹಲ್ಲೆ : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ಪಿರ್ಯಾದಿದಾರರು ಸಂತೋಷ್ ಬಿನ್ ಸೆಲ್ವರಾಜ್, ೨ನೇ ಬ್ಲಾಕ್, ಆಂಡ್ರಸನ್‌ಪೇಟೆ ರವರು ದಿನಾಂಕ 26.03.2020 ರಂದು ಸಂಜೆ 6.00 ಗಂಟೆಯಲ್ಲಿ ಆಂಡ್ರಸನ್ ಪೇಟೆ ಬಿ.ಎಂ ರಸ್ತೆಯ ಶ್ರೀರಾಮರ ದೇವಾಲಯದ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ ಅಲ್ಲಿ ನಿಂತಿದ್ದ ಆರೋಪಿ ಗಳಾ ಲೂರ್ದ್‌ನಗರ ವಾಸಿ ಜಗನ್, ೨ನೇ ಬ್ಲಾಕ್‌ ವಾಸಿಗಳಾದ ಅರವಿಂದ್ ಮತ್ತು ಕಿರಣ್‌ ಎಂಬುವವರು ಕುಡಿಯಲು ಹಣ ಕೇಳಿದ್ದು, ಪಿರ್ಯಾದಿದಾರರು ತನ್ನ ಬಳಿ ಹಣ ಇಲ್ಲವೆಂದು ಹೇಳಿದಕ್ಕೆ ೩ ಜನ ಆರೋಪಿಗಳು ಪಿರ್‍ಯಾದಿ ಮೇಲೆ ಹಲ್ಲೆ ಮಾಡಿರುತ್ತಾರೆ.

– ಅಕ್ರಮ ಮದ್ಯ ಮಾರಾಟ : 01

ಉರಿಗಾಂ ಪೊಲೀಸ್ ಠಾಣೆಯಲ್ಲಿ ಅಕ್ರಮ ಮದ್ಯ ಮಾರಟ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬.೦೩.೨೦೨೦ ರಂದು ಆರೋಪಿ ಗಣೇಶ, ಪೆದ್ದಪಲ್ಲಿ ಗ್ರಾಮ, ಉರಿಗಾಂ ರವರು ಮದ್ಯದ ಪಾಕೇಟ್ ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಇಟ್ಟುಕೊಂಡು ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದು, ಈ ಮಾಹಿತಿ ತಿಳಿದು ಪಿರ್ಯಾದಿದಾರರಾದ ಶ್ರೀ.ಮುಸ್ಥಾಕ್ ಪಾಷ, ಪೊಲೀಸ್ ವೃತ್ತ ನಿರೀಕ್ಷಕರು, ರವರು ತಮ್ಮ ಸಿಬ್ಬಂದಿಯೊಂದಿಗೆ ದಿನಾಂಕ:26.03.2020 ರಂದು ಬೆಳಿಗ್ಗೆ 11:45 ಗಂಟೆಯಲ್ಲಿ ಆರೋಪಿಯ ಮೇಲೆ ದಾಳಿ, ಆರೋಪಿಯನ್ನು ವಶಕ್ಕೆ ಪಡೆದು ಆರೋಪಿ ಮತ್ತು ಮಾಲಿನೊಂದಿಗೆ ಠಾಣೆಗೆ ಹಾಜರಾಗಿ, ಸದರಿ ಆರೋಪಿಯ ವಿರುದ್ದ ಕಾನೂನು ಕ್ರಮ ಜರುಗಿಸಿರುತ್ತದೆ.

– ಅಸ್ವಾಭಾವಿಕ ಮರಣ ಪ್ರಕರಣ : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ.26.03.2020 ರಂದು ಬೆಳಗ್ಗೆ 11.00 ಗಂಟೆಯಲ್ಲಿ ಈ ಕೇಸಿನ ಪಿರ್ಯಾದಿ ಕೃಷ್ಣ, ಗಂಗಮ್ಮ ಟೆಂಪಲ್ ಸ್ಟ್ರೀಟ್, ರಾಬರ್ಟ್‌‌ಸನ್‌ಪೇಟೆ ರವರ ಮಗ ಸಂಜಯ್, ೧೦ ವರ್ಷ ರವರು ತಮ್ಮ ಮನೆಯಲ್ಲಿ ಉಯ್ಯಾಲೆ ಆಡುತ್ತಿರುವಾಗ ಸೀರೆ ಕತ್ತಿಗೆಗೆ ಸುತ್ತಿಕೊಂಡು ಕೆಳಗೆ ಬಿದ್ದು ಬಿದ್ದಿದ್ದು ಕೂಡಲೇ ಚಿಕಿತ್ಸೆಯ ಸಲುವಾಗಿ ಆಟೋದಲ್ಲಿ ಕೆ.ಜಿಎಫ್ ಜನರಲ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ, ವ್ಯೆದ್ಯರ ಬಳಿ ತೋರಿಸಿದ್ದು ವ್ಯೆದ್ಯರು ಸಂಜಯ್ ನನ್ನು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *