ದಿನದ ಅಪರಾಧಗಳ ಪಕ್ಷಿನೋಟ 27ನೇ ಡಿಸೆಂಬರ್‌ 2019

 – ದೊಂಬಿ : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೊಂಬಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಕಿಶೋರ್‌ ಕುಮಾರ್‌ ಬಿನ್ ಆನಂದರಾಜು, ಸ್ವಿಮ್ಮಿಂಗ್‌ ಬಾತ್‌ ಲೈನ್‌, ಉರಿಗಾಂ, ಕೆ.ಜಿ.ಎಫ್ ರವರು ದಿನಾಂಕ 25.12.2019 ರಂದು ಸಂಜೆ 7.00 ಗಂಟೆಗೆ ಸ್ನೇಹಿತನಾದ ಮೂರ್ತಿ ರವರೊಂದಿಗೆ ಕಿಂಗ್ ಜಾರ್ಜ್ ಹಾಲ್ ನ ಮುಂಭಾಗದ ಶ್ರೀ ಮಾರಿಯಮ್ಮ ದೇವಾಲಯದ ಬಳಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ, ಸ್ವಿಮ್ಮಿಂಗ್ ಬಾತ್ ಲೈನ್ ವಾಸಿಗಳಾದ ರಾಜೇಶ್, ದಿಲೀಪ್, ಕಾರ್ತಿಕ್, ಡೋಮಿನಿಕ್, ರಾಹುಲ್, ರೋಹಿತ್ ರವರು ಅಕ್ರಮ ಕೂಟ ಕಟ್ಟಿಕೊಂಡು ಕೈಗಳಲ್ಲಿ ಚಾಕು ಮತ್ತು ದೊಣ್ಣೆಯನ್ನು ಹಿಡಿದುಕೊಂಡು ಬಂದು ದೂರುದಾರರನ್ನು ಮತ್ತು ಆತನ ಸ್ನೇಹಿತನನ್ನು ತಡೆದು ನಿಲ್ಲಿಸಿ ಕೆಟ್ಟಮಾತುಗಳಿಂದ ಬೈದು, ದೊಣ್ಣೆಯಿಂದ ಹೊಡೆದು ಕೆಳಗೆ ತಳ್ಳಿ, ಚಾಕುವಿನಿಂದ ಹೊಡೆದು ರಕ್ತಗಾಯಪಡಿಸಿ, ಪ್ರಾಣ ಬೆದರಿಕೆ ಹಾಕಿರುತ್ತಾರೆ.

– ಜೂಜಾಟ ಕಾಯ್ದೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಜೂಜಾಟ ಕಾಯ್ದೆ ಅಡಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 27.12.2019 ರಂದು ಸಂಜೆ 7.30 ಗಂಟೆಯಲ್ಲಿ ಮಹದೇವಪುರ ಗ್ರಾಮದ ತಿಪ್ಪಾರೆಡ್ಡಿ ರವರ ಮಾವಿನ ತೋಪಿನಲ್ಲಿ ೧. ದೇವರಾಜ್‌ ಬಿನ್ ಶ್ರೀಮರಾಮಪ್ಪ, ೨. ಮುರಳಿ ಬಿನ್ ಕೃಷ್ಣಪ್ಪ, ೩. ಯುವರಾಜ್‌ ಬಿನ್ ವೆಂಕಟರಾಮಪ್ಪ, ಮಹದೇವಪುರ ಗ್ರಾಮದ ವಾಸಿಗಳು ಹಣವನ್ನು ಪಣವಾಗಿಟ್ಟು ಅಂದರ್‌ ಬಾಹರ್‌ ಜೂಜಾಟ ಆಡುತ್ತಿದ್ದವರ ಮೇಲೆ ಪಿ.ಎಸ್.ಐ ಶ್ರೀ. ಸುನೀಲ್‌ ಕುಮಾರ್‌ ಮತ್ತು ಸಿಬ್ಬಂದಿವರು ದಾಳಿ ಮಾಡಿ ಆರೋಪಿಗಳನ್ನು ಮತ್ತು 600/- ರೂಗಳನ್ನು ಅಮಾನತ್ತುಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

 

– ಅಸ್ವಾಭಾವಿಕ ಮರಣ ಪ್ರಕರಣ : 02

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ 02 ಅಸ್ವಾಭಾವಿಕ ಮರಣ ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರಾದ ಶ್ರೀಮತಿ. ರೇವತಿ, ಪಾರಾಂಡಹಳ್ಳಿ, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್ ರವರ ಗಂಡನಾದ ವೆಂಕಟೇಶ್, 41 ವರ್ಷ ರವರು ಕೂಲಿ ಮಾಡಿ  ಸಂಸಾರ ಸಾಗಿಸಲು  ಕಷ್ಠವಾಗಿದ್ದರಿಂದ  ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 26.12.2019 ರಂದು ಸಂಜೆ 4.00 ಗಂಟೆಗೆ ಬೆಡ್ ರೂಮ್  ನ ಮೇಲ್ಚಾವಣಿಗೆ ಅಳವಡಿಸಿದ್ದ ಫ್ಯಾನ್ ಗೆ ಪಂಚೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

ದೂರುದಾರರಾದ ಶ್ರೀಮತಿ ಇಂದ್ರಾದೇವಿ ಕೋಂ ಸಂತೋಷ್‌ರೆಡ್ಡಿ 4ನೇ ಪೇಸ್‌ ಯಲಹಂಕ, ಬೆಂಗಳೂರು ರವರು ನೀಢಿದ ದೂರಿನಲ್ಲಿ ಸಂತೋಷ್‌ರೆಡ್ಡಿ ರವರು ಸುಮಾರು ದಿನಗಳಿಂದ ಅವರ ತಾಯಿ ಮನೆ ರಾಬರ್ಟ್‌‌ಸನ್‌‌ಪೇಟೆ ಆಶೋಕ ನಗರ ರೆಡ್ಡಿ ಫೀಲ್ಡ್‌ನಲ್ಲಿ ವಾಸವಿದ್ದು, ಪ್ರತಿ ದಿನ ಮದ್ಯಪಾನ ಮಾಡುತ್ತಿದ್ದುತಾಯಿ ಮನೆಗೆ ಬಂದು ಮಲಗುತ್ತಿದ್ದರು ದಿನಾಂಕ 26.12.2019 ರಂದು ರಾತ್ರಿ 12.30 ಗಂಟೆಗೆ ದೂರುದಾರರ ಗಂಡನಾದ ಸಂತೋಷ್ ರೆಡ್ಡಿ 50 ವರ್ಷ ರವರು ರಕ್ತ ವಾಂತಿ ಮತ್ತು ಬೇದಿ ಮಾಡಿ ಮೃತಪಟ್ಟಿರುತ್ತಾರೆಂದು ದೂರು.

Leave a Reply

Your email address will not be published. Required fields are marked *