ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 25.01.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.
– ಕನ್ನ ಕಳುವು : 01
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 25.01.2021 ರಂದು ಬೆಳಿಗ್ಗೆ ಸುಮಾರು 10.30 ಗಂಟೆಯಿಂದ 11.30 ಗಂಟೆ ಮಧ್ಯೆ ಪಿರ್ಯಾದಿದಾರರಾದ ನಾರಾಯಣಸ್ವಾಮಿ, ಕಾರಹಳ್ಳಿ ಬಂಗಾರಪೇಟೆ ರವರು ಮನೆಯಲ್ಲಿದ್ದ ಕಬೋರ್ಡ್ ಮತ್ತು ಬೀರುವಿನ ಬೀಗವನ್ನು ಯಾರೋ ದುಷ್ಕರ್ಮಿಗಳು ಹೊಡೆದು ಸುಮಾರು 306 ಗ್ರಾಂ ತೂಕವುಳ್ಳ, 2 ಲಕ್ಷ ರೂ ಬೆಲೆ ಬಾಳುವ 1) 3 ಎಳೆ ಚೈನ್ 50 ಗ್ರಾಂ, 2) ಚೈನಾ ಪದಕ 70 ಗ್ರಾಂ, 3) ಬ್ರಾಸ್ ಲೈಟ್ 44 ಗ್ರಾಂ, 4) ಕತ್ತಿನ ಚೈನ್ 24 ಗ್ರಾಂ, 5) 4 ಉಂಗುರಗಳು 32 ಗ್ರಾಂ, 6) ಓಲೆ, ಮಾಟಿ 16 ಗ್ರಾಂ, 7) ತಾಳಿ ಚೈನ್ 40 ಗ್ರಾಂ, 8) ಆಂಗಲ್ಸ್ ಸೆಟ್ 18 ಗ್ರಾಂ, ಆಂಗಲ್ಸ್ ಚೈನ್ 06 ಗ್ರಾಂ, 9) ಉಂಗುರ 06 ಗ್ರಾಂ ಮತ್ತು ನಗದು ಹಣ 1,50,000-00 ರೂಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
– ದೊಂಬಿ : 01
ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 2019 ನೇ ಸಾಲಿನಲ್ಲಿ ಈ ಕೇಸಿನ ಪಿರ್ಯಾದಿ ಅನಿಲ್ ಕುಮಾರ್ ಬಿನ್ ಮನೋಹರ್, ೩೩ ವರ್ಷ, ಸಂಜಯ್ಗಾಂಧಿನಗರ, ರಾಬರ್ಟ್ಸನ್ಪೇಟೆ ರವರ ಅತ್ತೆ ಮುನಿಯಮ್ಮ ರವರು ತೀರಿಕೊಂಡು ಹೆಣ ಸಾಗಿಸುವ ಸಮಯದಲ್ಲಿ ಗಾಯಾಳು ಬ್ಯಾಂಡ್ ಜೊತೆಯಲ್ಲಿದ್ದಾಗ ಅದೇ ಸಂಜಯ್ಗಾಂಧಿನಗರ ವಾಸಿಯಾದ ನಾಗ ಎಂಬುವನು ವಿನಾಕಾರಣ ಗಲಾಟೆಮಾಡಿ ಚಾಕುವಿನಿಂದ ಹೊಡೆದಿದ್ದು ಈ ವಿಚಾರವಾಗಿ ನಾಗ ರವರ ಮೇಲೆ ಕೇಸು ದಾಖಲಾಗಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ. ಪಿರ್ಯಾದಿ ಅನಿಲ್ ರವರು ದಾರಿಯಲ್ಲಿ ಹೋಗಿ ಬರುವಾಗ ನಾಗ ಮತ್ತು ಅವರ ಕುಟುಂಬಸ್ಥರು ಅನೀಲ್ ನನ್ನು ನೋಡಿ ಗುರಾಯಿಸುತ್ತಾ ನೋಡಿಕೊಳ್ಳುತ್ತೇವೆಂದು ಹೇಳುತ್ತಿದ್ದು, ದಿನಾಂಕ 24.01.2021 ರಂದು ರಾತ್ರಿ 8:45 ಗಂಟೆಯ ಸಮಯದಲ್ಲಿ ಅನಿಲ್ ತನ್ನ ಮಕ್ಕಳ ಜೊತೆ ಅವರ ಮನೆಯ ಮುಂದೆ ಆಟವಾಡುತ್ತಿದ್ದಾಗ ಆ-1 ಸರವಣ ಕುಮಾರ್, ಆ-2 ನಾಗ,ಆ-3 ಅರುಣ್, ಆ-4 ಸತ್ತಿ, ಆ-5 ಅಭಿಶೇಕ್ ಮತ್ತು ಆ-6 ನವೀನ್ ಎಂಬುವರು ಜೊತೆಯಾಗಿ ನಡೆದುಕೊಂಡು ಬಂದು ಆ ಪೈಕಿ ಆ-2 ನಾಗ ಅಲ್ಲಿದ್ದ ಅನಿಲ್ ನನ್ನು ನೋಡಿ ಗುರಾಯಿಸಿ ಕೆಟ್ಟ ಮಾತುಗಳಿಂದ ಹಲ್ಲೆ ಮಾಡಿ, ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.
– ಇತರೆ : 01
ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಐಟಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ಪಿರ್ಯಾದಿ ಬಬ್ಲೂ ಮೀನಾ, ರೈಲ್ವೇ ಕ್ವಾಟ್ರಸ್, ಬಂಗಾರಪೇಟೆ ರವರಿಗೆ ಆಗಾಗ Phonepe ಕಸ್ಟಮರ್ ಎಂದು ಕರೆಗಳು ಹಾಗೂ ಸಂದೇಶಗಳು ಬರುತ್ತಿದ್ದರಿಂದ ದಿನಾಂಕ:17.12.2020 ರಂದು ಮದ್ಯಾಹ್ನ 12.45 ರಿಂದ 1.37 ಗಂಟೆಯ ಮಧ್ಯೆ ಯಾರೋ ಅನಾಮಧೇಯ ವ್ಯಕ್ತಿಗಳು ಕರೆ ಮಾಡುತ್ತಿದ್ದರಿಂದ ಸದರಿ ಕರೆಗಳನ್ನು ರದ್ದು ಪಡಿಸಿ ಬ್ಲಾಕ್ ಮಾಡುವ ಸಲುವಾಗಿ ಗೂಗಲ್ ನಲ್ಲಿ ಫೋನ್ ಪೇ ಕಸ್ಟಮರ್ ಕೇರ್ ನಂಬರನ್ನು ಹುಡುಕಲಾಗಿ ಮೊಬೈಲ್ ನಂ.9330361696 ಪತ್ತೆಯಾಗಿದ್ದು, ಸದರಿ ಮೊಬೈಲ್ ಗೆ ಪಿರ್ಯಾದಿಯ ಮೊಬೈಲ್ ಫೋನ್ ನಂ.9001741233 ನಿಂದ ಕರೆ ಮಾಡಲಾಗಿ ಪಿರ್ಯಾದಿದಾರರಿಗೆ ಫೋನ್ ಪೇ ಕಸ್ಟಮರ್ ಕೇರ್ ನಂಬರೆಂದು ನಂಬಿಸಿ, ಮೊಬೈಲ್ ನಂಬರ್ 9339243517 ನಿಂದ ಸಂಧೇಶವನ್ನು ಕಳುಹಿಸಿ ANYDESK APP ನ್ನು ಡೌನ್ ಲೋಡ್ ಮಾಡಿಕೊಂಡು ಪಿರ್ಯಾದಿಯ ಬ್ಯಾಂಕ್ ಖಾತೆಯಲ್ಲಿ ಬ್ಯಾಲೆನ್ಸ್ ಹಣವನ್ನು ಪರಿಶೀಲಿಸಿಕೊಳ್ಳುವಂತೆ ತಿಳಿಸಿದ್ದು,ಅದರಂತೆ ಪಿರ್ಯಾದಿಯು ANYDESK APP ನ್ನು ಡೌನ್ ಲೋಡ್ ಮಾಡಿಕೊಂಡು ಬ್ಯಾಲೆನ್ಸ್ ನ್ನು ಚೆಕ್ ಮಾಡಿದ ನಂತರ ಪಿರ್ಯಾದಿಯ ಬ್ಯಾಂಕ್ ಖಾತೆಯಲ್ಲಿದ್ದ 9001/-, 9001/-, 41233/-, 9001/-, 9001/- ಹಾಗೂ 3901/- ರೂಪಾಯಿಗಳು ಸೇರಿ ಒಟ್ಟು ಮೊತ್ತ 81,138-00 ರೂಪಾಯಿಗಳನ್ನು ವರ್ಗಾವಣೆ ಮಾಡಿಕೊಂಡು ಮೋಸ ಮಾಡಿರುತ್ತಾರೆ.
– ಮಹಿಳೆ ಮೇಲೆ ನಡೆದ ದೌರ್ಜನ್ಯ ಪ್ರಕರಣ : 01
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ಪಿರ್ಯಾದಿದಾರರು ಶ್ರೀಮತಿ ಸುಮ, ಕಾರಹಳ್ಳಿ ಬಂಗಾರಪೇಟೆ ರವರು 11 ವರ್ಷಗಳ ಹಿಂದೆ ಆರೋಪಿ ಸಂತೋಷ್ ರವರನ್ನು ಮದುವೆಯಾಗಿದ್ದು, ಮದುವೆಯಾದಾಗಿನಿಂದಲೂ ಆರೋಪಿಯು ಕುಡಿದು ಬಂದು ಪಿರ್ಯಾದಿಯೊಂದಿಗೆ ಜಗಳ ಮಾಡುವುದು, ಅನುಮಾನ ಪಡುವುದು ಮಾಡುತ್ತಿದ್ದು, ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಿದ್ದು, ದಿನಾಂಕ 22.01.2021 ಮತ್ತು 23.01.2021 ರಂದು ಪಿರ್ಯಾದಿಯೊಂದಿಗೆ ಗಲಾಟೆ ಮಾಡಿ, ಕೈಯಿಂದ ಬೆನ್ನಿನ ಮೇಲೆ ಹೊಡೆದು, ಕೆಟ್ಟ ಮಾತುಗಳಿಂದ ಬೈದಿರುತ್ತಾನೆ.