ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಚಂದ್ರಶೇಖರ್ ಬಿನ್ ವೆಂಕಟರಾಮಪ್ಪ, ಪಾಲೂರಹಳ್ಳಿ ಗ್ರಾಮ, ಮುಳಬಾಗಿಲು ತಾಲ್ಲೂಕು ರವರು ದಿನಾಂಕ-24-12-2019 ರಂದು ಮದ್ಯಾಹ್ನ 3.00 ಗಂಟೆಯಲ್ಲಿ ಚಿಕ್ಕಮ್ಮ ಪುಷ್ಪಮ್ಮ ರವರೊಂದಿಗೆ ದ್ವಿಚಕ್ರ ವಾಹನ ಹಿರೋ ಹೊಂಡಾ ಸ್ಲೇಂಡರ್ ಪ್ಲಸ್ ಸಂಖ್ಯೆ KA-07-EA-0037 ರಲ್ಲಿ ಗುಟ್ಟಹಳ್ಳಿ- ಬೇತಮಂಗಲ ಮುಖ್ಯರಸ್ತೆ ಕೆ.ಇ.ಬಿ ಪವರ್ ಸ್ಟೇಷನ್ ಬಳಿ ರಸ್ತೆಯಲ್ಲಿ ಹೋಗುತ್ತಿದ್ದಾಗ, ದ್ವಿಚಕ್ರ ವಾಹನ ಸಂಖ್ಯೆ TN-20-AA-7977 ರ ಚಾಲಕ ತನ್ನ ದ್ವಿಚಕ್ರ ವಾಹನದಲ್ಲಿ ಒಬ್ಬ ಹೆಂಗಸನ್ನು ಕುಳ್ಳರಿಸಿ ಕೊಂಡು ಇದ್ದಕ್ಕಿದಂತೆ ಅತಿವೇಗ ಮತ್ತು ಅಜಾಗೂರೂಕತೆಯಿಂದ ರಸ್ತೆ ಮೇಲೆಗೆ ತಿರುಗಿಸಿ ದೂರುದಾರರ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ದೂರುದಾರರು ಮತ್ತು ಹಿಂಬದಿಯಲ್ಲಿ ಕುಳಿತಿದ್ದ ಪುಷ್ಪಮ್ಮ ರವರು ವಾಹನ ಸಮೇತ ಕೆಳಗೆ ಬಿದಿದ್ದು, ರಕ್ತಗಾಯಗಳಾಗಿರುತ್ತದೆ.
– ಹಲ್ಲೆ : 01
ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ.ತ್ಯಾಗರಾಜ್ ಬಿನ್ ಜಗನ್ನಾಥನ್, ಸ್ವಿಮ್ಮಿಂಗ್ ಬಾತ್ ಲೈನ್, ಉರಿಗಾಂ, ಕೆ.ಜಿ.ಎಫ್ ರವರು ದಿನಾಂಕ:25.12.2019 ರಂದು ಸಂಜೆ 5.00 ಗಂಟೆಯಲ್ಲಿ ಸ್ವಿಮ್ಮಿಂಗ್ ಬಾತ್ ಲೈನಿನಲ್ಲಿರುವ ಇರುದಿ ಆಂಡವರ್ ಕುರುಚುಡಿಯ ಮುಂಭಾಗದಲ್ಲಿ ಅದೇ ಲೈನಿನ ಇಳಂಗೋವನ್ ರವರ ಮಗ ನವೀನ್ @ ಮೋನ, ಕಿಶೋರ್, ಮೂರ್ತಿ, ರಾಜೇಶ್ ಮತ್ತು ರಾಜನ್ ರವರೊಂದಿಗೆ ಮಾತುಕತೆ ನಡೆಸುತ್ತಿದ್ದಾಗ, ಇಳಂಗೋವನ್ ರವರ ಮಗ ನವೀನ್ @ ಮೋನಾ, ಕಿಶೋರ್ ಮತ್ತು ಮೂರ್ತಿ ಎಂಬುವರು ದೂರುದಾರರೊಂದಿಗೆ ಹಳೇ ದ್ವೇಷದಿಂದ ಕೆಟ್ಟ ಮಾತುಗಳಿಂದ ಬೈದು, ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದು, ಜಗಳ ಬಿಡಿಸಲು ಬಂದ ರಾಜೇಶ್ ರವರಿಗೆ ಮೂರೂ ಜನ ಕೈಗಳಿಂದ ಹೊಡೆದಿರುತ್ತಾರೆ.