ದಿನದ ಅಪರಾಧಗಳ ಪಕ್ಷಿನೋಟ 26 ನೇ ಸೆಪ್ಟೆಂಬರ್‌ 2019

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:25.09.2019 ರಂದು  ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ಅಸ್ವಾಭಾವಿಕ ಮರಣ ಪ್ರಕರಣ : 01

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ ಸುಮತಿ, ಸಂಜಯ್‌ ಗಾಂಧಿನಗರ, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್ ರವರ  ತಾಯಿಯಾದ ಮುನಿಯಮ್ಮ 50 ರವರು 4 ವರ್ಷಗಳಿಂದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ.24.09.2019 ರಂದು ರಾತ್ರಿ 7-00 ಗಂಟೆಗೆ ಕರೆಂಟ್ ಹೋದಾಗ,  ಮುನಿಯಮ್ಮ ರವರು ಸೀಮೆ ಎಣ್ಣೆ ದೀಪವನ್ನು ಮೈಮೇಲೆ ಹಾಕಿಕೊಂಡಿದ್ದರಿಂದ ಆಕೆಯು ತೊಟ್ಟಿದ್ದ ನ್ಶೆಟಿಗೆ ಬೆಂಕಿ ಅಂಟಿಕೊಂಡು ಮೈಯಲ್ಲಾ ಸುಟ್ಟು ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಕೆ.ಜಿ.ಎಫ್ ಸರ್ಕಾರಿ ಆಸ್ವತ್ರೆಗೆ  ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾದೆ ದಿನಾಂಕ.25.09.2019 ರಂದು ಬೆಳಿಗ್ಗೆ 8-10 ಗಂಟೆಗೆ ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *