ದಿನದ ಅಪರಾಧಗಳ ಪಕ್ಷಿನೋಟ 26ನೇ ಏಪ್ರಿಲ್‌ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 25.04.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

ಅಸ್ವಾಭಾವಿಕ ಮರಣ ಪ್ರಕರಣ : 02

ಚಾಂಪಿಯನ್‌ರೀಫ್ಸ್‌ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 25-04-2020 ರಂದು ದೂರುದಾರರಾದ ಶ್ರೀಮತಿ. ವಸಂತಮಣಿ  ಕೋಂ ನಾಗಲಿಂಗಂ ಮನೆ ನಂ 1003 ಗಾಂದಿನಗರ ರಾಬರ್ಟ್‌‌ಸನ್‌‌ಪೇಟೆ ಕೆ.ಜಿ.ಎಫ್ ರವರು  ನೀಡಿದ ದೂರಿನಲ್ಲಿ  ದಿನಾಂಕ:23.04.200 ರಂದು  ದೂರುದಾರರ ಮಗ ಚಂದ್ರ 43 ವರ್ಷ ಎಂಬುವರಿಗೆ ಎದೆ ನೋವು ಬಂದಿರುವ ಕಾರಣ  ಮನೆಯಲ್ಲಿದ್ದ ಗ್ಯಾಸ್ಟಿಕ್ ಮಾತ್ರೆ ಮತ್ತು ಔಷದಿಯನ್ನು ಕುಡಿಸಿದ್ದು ದಿನಾಂಕ:24.04.2020 ರಂದು ಬೆಳಿಗ್ಗೆ ಚಂದರ್ ರವರು ಮರುಗೇಶ್ ರವರ ಹತ್ತಿರ ಗಾರೆ ಕೆಲಸಕ್ಕೆಂದು ಹೋಗಿ ಬಂದು ಸಂಜೆ 6-45 ಗಂಟೆಗೆ ಮನೆಗೆ ಬಂದ ಸಮಯದಲ್ಲಿ  ಪಿಟ್ಸ್ ಬಂದಿರುತ್ತದೆ. ಗಾಯಾಳುವನ್ನು  ಕೆ.ಜಿ.ಎಫ್. ಜನರಲ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿರುವಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ  ತಿಳಿಸಿರುತ್ತಾರೆ.

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ-25-04-2020 ರಂದು ದೂರುದಾರರಾದ  ಆಶೋಕ್‌ ಬಿನ್ ಯಾಮ್ಮಣ್ಣ  ಪಿಲ್ಲಗೊಂಡಲಹಳ್ಳ ಗ್ರಾಮ ರವರು ನೀಡಿ ದೂರಿನಲ್ಲಿ ದಿನಾಂಕ: 25.04.2020 ರಂದು ಬೆಳಿಗ್ಗೆ ಸುಮಾರು 7.45 ಗಂಟೆ ಸಮಯದಲ್ಲಿ ಬಯಲು ಶೌಚಾಲಯಕ್ಕೆ ವೆಂಕಟೇರಾಮೇಗೌಡ ಬಿನ್ ಲೇಟ್ ಮುನಿವೆಂಕಟೇಗೌಡ ರವರ  ಜಮೀನಿನ ಹೊಲದ ಕಡೆ ಹೋದಾಗ ಹೊಲದಲ್ಲಿ ಇದ್ದ ಹುಣಸೆ ಮರಕ್ಕೆ ಓಬಳರೆಡ್ಡಿ ಬಿನ್‌ ದೊಡ್ಡಮುನಿರೆಡ್ಡಿ ವಯಸ್ಸು 40 ವರ್ಷದ  ಟೈಲರ್‌ ಕೆಲಸ ದಿನ್ನಕೊತ್ತೋರು ಗ್ರಾಮ ಬೂದಿಕೋಟೆ ಹೋಬಳಿ ಎಂಬುವುರು ನೈಲಾನ್ ಹಗ್ಗದಿಂದ ನೇಣು ಹಾಕಿ ಕೊಂಡು ಮೃತ ಪಟ್ಟಿರುತ್ತಾರೆ.

Leave a Reply

Your email address will not be published. Required fields are marked *