ದಿನದ ಅಪರಾಧಗಳ ಪಕ್ಷಿನೋಟ 26ನೇ ಮಾರ್ಚ್ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 25.03.2020 ರಂದು  ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 

– ಅಕ್ರಮ ಮದ್ಯ ಮಾರಾಟ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಕ್ರಮ ಮದ್ಯ ಮಾರಟ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 25.03.2020 ರಂದು ಸಂಜೆ ೭.೦೦ ಗಂಟೆಗೆ ಈ ಕೇಸಿನ ಪಿರ್ಯಾದಿದಾರರಾದ ಶ್ರೀ. ಜಗದೀಶ್ ರೆಡ್ಡಿ, ಪಿಎಸ್‌ಐ, ಬಂಗಾರಪೇಟೆ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯೊಂದಿಗೆ ಠಾಣಾ ಸರಹದ್ದಿನ ನಗರ ಗಸ್ತಿನಲ್ಲಿದ್ದಾಗ, ದಿನ್ನಕೊತ್ತೂರು ಗ್ರಾಮದ ವಾಸಿಯಾದ ಆರೋಪಿ ಸಾವಿತ್ರಮ್ಮ, ೪೨ ವರ್ಷ ರವರು ತಮ್ಮ ಮನೆಯ ಹಿಂಭಾಗದಲ್ಲಿ ಯಾವುದೇ ಅನುಮತಿಯಿಲ್ಲದೇ ಸಾರ್ವಜನಿಕರ ಮಧ್ಯಸೇವನೆಗೆ ಸ್ಥಳಾವಕಾಶ ಮಾಡಿಕೊಟ್ಟಿದ್ದು, ಪಂಚರ ಸಮಕ್ಷಮ ದಾಳಿ ಮಾಡಿ, ಆರೋಪಿ ಸಾವಿತ್ರಮ್ಮ ವಿರುದ್ದ ಕ್ರಮ ಜರುಗಿಸಿರುತ್ತೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.  ಈ ಕೇಸಿನ ಪಿರ್ಯಾದಿ ಸುಗುಣ ಕೋಂ ವೆಂಕಟೇಶ್, ರಾಮಯ್ಯ ಕಾಂಪೌಂಡ್, ಉರಿಗಾಂಪೇಟೆ, ರಾಬರ್ಟ್‌‌ಸನ್‌ಪೇಟ ರವರ ಮಗಳಾದ ಸೋನಿ, 19ವರ್ಷ ರವರು ದಿನಾಂಕ.23.03.2020 ರಂದು ಬೆಳಗ್ಗೆ 11.30 ಗಂಟೆಗೆ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋದವಳು ಇನ್ನೂ ಮನೆಗೆ ವಾಪಸ್ಸು ಬಾರದೇ ಕಾಣೆಯಾಗಿರುತ್ತಾಳೆ.

– ಅಸ್ವಾಭಾವಿಕ ಮರಣ ಪ್ರಕರಣ : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ದೂರುದಾರರಾದ ಬಸಪ್ಪ, ದೇವರಗುಟ್ಟಹಳ್ಳಿ ಕಾಮಸಮುದ್ರ ರವರ ತಂದೆಯಾದ ಮೂಗಪ್ಪ ೬೫ ವರ್ಷ ರವರು ದಿನಾಂಕ 25.03.2020 ರಂದು ಬೆಳಿಗ್ಗೆ 6-00 ಗಂಟೆಯಿಂದ 6-30 ಗಂಟೆಯಲ್ಲಿ ಎಂದಿನಂತೆ ತಮ್ಮ ತೊಟದ ಬಳಿ ಹೋಗುತ್ತಿದ್ದಾಗ ಮಾರ್ಗ ಮದ್ಯದಲ್ಲಿ ಒಂದು ಕಾಡಾನೆ ಏಕಾಏಕಿ  ಮೂಗಪ್ಪ ರವರ ಮೇಲೆ ದಾಳಿ ಮಾಡಿದ್ದು, ಪಿರ್ಯಾದಿದಾರರ ತಂದೆಯ ಎರಡು ತೊಡೆಗಳಿಗೆ ಬಲವಾದ ರಕ್ತ ಗಾಯವಾಗಿರುತ್ತೆ ಹಾಗೂ ಮರ್ಮಾಂಗಗಳಿಗೆ ಸಹ ಗಾಯಗಳಿರುತ್ತೆ, ನಂತರ ಪಿರ್ಯಾದಿದಾರರು ತಮ್ಮ ತಂದೆಯವರನ್ನು ಬಂಗಾರಪೇಟೆಯ ಸರ್ಕಾರಿ ಅಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದು, ವೈದ್ಯಾದಿಕಾರಿಗಳು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *