ದಿನದ ಅಪರಾಧಗಳ ಪಕ್ಷಿನೋಟ 26ನೇ ಫೆಬ್ರವರಿ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 25.02.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಕೊಲೆ ಪ್ರಯತ್ನ :  01

ಚಾಂಪಿಯನ್‌ರೀಫ್ಸ್‌ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ವಸಂತ ಕೊಂ ಹಾರಿಜಾನ್‌, ಇ.ಟಿ ಬ್ಲಾಕ್, ಕೆ.ಜಿ.ಎಫ್ ರವರು ನೀಡಿದ ದೂರಿನಲ್ಲಿ,   ದಿನಾಂಕ: 25-02-2021 ರಂದು ಮಧ್ಯಾಹ್ನ 02-30 ಗಂಟೆಯಲ್ಲಿ  ಅಲ್ವಿನ್‌ ರವರು ವಿಜಯ್ ರವರೊಂದಿಗೆ  ದಾಸ್ ಕೋಯಿಲ್ ಬಳಿ ಮಾತನಾಡುತ್ತಾ ನಿಂತುಕೊಂಡಿದ್ದಾಗ, ಅಲ್ವಿನ್ ರವರಿಗೆ ವಿಜಯ್‌ ರವರು ಮಧ್ಯ ಸೇವನೆ ಮಾಡಲು ಹಣವನ್ನು ಕೇಳಿದ್ದು, ಹಣ ಇಲ್ಲವೆಂದು ತಿಳಿಸಿದಾಗ ಬೀರು ಬಾಟಲನ್ನು ತೋರಿಸಿ ಸಾಯಿಸಿಬಿಡುತ್ತೇನೆ ಹೇಳಿ ಬೀರು ಬಾಟಲಿನಿಂದ ಅಲ್ವಿನ್ ರವರ ಎಡ ಕುತ್ತಿಗೆಗೆ ಚುಚ್ಚಿ ಕೊಲೆ ಮಾಡಲು ಪ್ರಯತ್ನಿಸಿತ್ತಾನೆ.

ಅಸ್ವಾಭಾವಿಕ ಮರಣ ಪ್ರಕರಣ :  02

ಬೇತಮಂಗಲ ಪೊಲೀಸ್ ಠಾಣೆಯಲ್ಲಿ 02 ಅಸ್ವಾಭಾವಿಕ ಮರಣ ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರದ ಶ್ರೀಮತಿ. ಮಾರಿಯಮ್ಮ, ಅನಂತರಾಮಪುರ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಮಗ  ಅರುಣ್, 19  ವರ್ಷ ರವರು  ಕರೋನಾ ಖಾಯಿಲೆ ಬಂದಾಗಿನಿಂದ  ಯಾವುದೇ ಸಂಪಾದನೆ,  ಕೆಲಸ ವಿಲ್ಲದೇ  ಮನೆಯಲ್ಲಿ ಇದ್ದು  ಯಾವುದೋ ವಿಚಾರಕ್ಕೆ  ಜೀವನದಲ್ಲಿ ಜಿಗುಪ್ಸೆ ಹೊಂದಿ  ದಿನಾಂಕ 25-02-2021 ರಂದು ಬೆಳಿಗ್ಗೆ 9.00 ಗಂಟೆಯಿಂದ  ಸಂಜೆ  5.30 ಗಂಟೆಯ ಮದ್ಯೆ ಸೀರೆಯಿಂದ ಮನೆ ಮೇಲ್ಚಾವಣಿಗೆ  ಹಾಕಿದ್ದ  ಕಬ್ಬಿಣದ ಪೈಪಿಗೆ  ನೇಣು ಬಿಗಿದು ಕೊಂಡು  ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ದೂರುದಾರರಾದ ಶ್ರೀ. ಶಂಕರಪ್ಪ ಬಿನ್ ರಮಣ, ಗೊಲ್ಲಗುರುವೇನಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಮಗಳಾದ  ಸರಸ್ಪತಿ, 17 ವರ್ಷ ರವರಿಗೆ  ಮೂರ್ಚೆ ರೋಗ ಬರುತ್ತಿದ್ದು,  ದಿನಾಂಕ-23-02-2021 ರಂದು ಮದ್ಯಾನ ಮೂರ್ಚೆರೋಗ ಬಂದು ಅಥವಾ ಕಾಲು ತೊಳೆಯಲು ರಾಮಸಾಗರ ಕೆರೆ ಕಡೆ ಹೋದಾಗ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *