ದಿನದ ಅಪರಾಧಗಳ ಪಕ್ಷಿನೋಟ 26ನೇ ಆಗಸ್ಟ್‌ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 25.08.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

– ಸುಲಿಗೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಸುನಿತಾ ಕೊಂ ತ್ಯಾಗರಾಜ್, ಎನ್. ಕೊತ್ತೂರು ಗ್ರಾಮ, ಮುಳಬಾಗಿಲು ತಾಲ್ಲೂಕು ರವರು ದ್ವಿಚಕ್ರ ವಾಹನ ಸಂಖ್ಯೆ ಕೆ.ಎ-07-ಇ.ಎ-0575 ಪ್ಯಾಷನ್ ಪ್ರೋ ದ್ವಿಚಕ್ರ ವಾಹನದಲ್ಲಿ ಹಿಂಬದಿ ಕುಳಿತುಕೊಂಡು, ದೂರುದಾರರ ಗಂಡ ವಾಹನ ಚಲಾಯಿಸಿಕೊಂಡು ಮದ್ಯದಲ್ಲಿ ಮಕ್ಕಳನ್ನು ಕುಳ್ಳರಿಸಿಕೊಂಡು ದಿನಾಂಕ: 25.08.2020 ರಂದು ಬೆಳಿಗ್ಗೆ 11.30 ಗಂಟೆಯಲ್ಲಿ ಕಮ್ಮಸಂದ್ರ ಗ್ರಾಮದ ಬಳಿ ಹೋಗುತ್ತಿರುವಾಗ, ದೂರುದಾರರ ವಾಹನದ ಹಿಂಬದಿಯಿಂದ ಬಂದ ಯಾವುದೋ ಪಲ್ಸರ್ ವಾಹನ ದ್ವಿಚಕ್ರ ವಾಹನ ಸವಾರ ದೂರುದಾರರ ದ್ವಿಚಕ್ರ ವಾಹನ ಪಕ್ಕದಲ್ಲಿ ಬಂದು ಏಕಾಏಕಿ ದೂರುದಾರರ ಕತ್ತಿನಲ್ಲಿದ್ದ ಒಂದು ಲಕ್ಷ ರೂ ಬೆಲೆ ಬಾಳುವ ಬಂಗಾರದ ತಾಳಿ ಚೈನ್ ಗೆ ಕೈ ಹಾಕಿ ಕಿತ್ತುಕೊಂಡು ಆತನ ವಾಹನವನ್ನು ಅತಿವೇಗವಾಗಿ ಚಲಾಯಿಸಿಕೊಂಡು ಬೇತಮಂಗಲದ ಕಡೆಗೆ ಹೊರಟು ಹೋಗಿರುತ್ತಾನೆ.

 

 

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮುರುಗೇಶ್ ಬಿನ್ ರಾಮಕೃಷ್ಣ, ತಮಟಮಾಕನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ:21.08.2020 ರಂದು ಬೆಳಿಗ್ಗೆ 5-45 ಗಂಟೆಯಿಂದ 6-45 ಗಂಟೆಯಲ್ಲಿ ಜಾನುಗುಟ್ಟೆ ಗ್ರಾಮದ ಅನುಷಾ ರವರನ್ನು ಮದುವೆ ಮಾಡಿಕೊಂಡಿದ್ದು, ನಂತರ ಅದೇ ದಿನ ಬೆಳಿಗ್ಗೆ 8.00 ಗಂಟೆಗೆ ಅನುಷಾ ರವರು ಮನೆಯಿಂದ ಕಾಣೆಯಾಗಿರುತ್ತಾರೆ.

Leave a Reply

Your email address will not be published. Required fields are marked *