ದಿನದ ಅಪರಾಧಗಳ ಪಕ್ಷಿನೋಟ 25 ಸೆಪ್ಟೆಂಬರ್ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 24.09.2020 ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಅಸ್ವಾಭಾವಿಕ ಮರಣ ಪ್ರಕರಣ :  02

        ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ಪಿರ್ಯಾದಿ ದೊರಬಾಬು, ಎನ್‌.ಜಿ.ಹುಲ್ಕೂರ್‍, ಬೇತಮಂಗಲ ರವರ ತಮ್ಮ  ಶಂಕರ್ 22 ವರ್ಷ ರವರು ಮಾನಸಿಕ ಆಸ್ವತ್ವನಾಗಿದ್ದು ಪಿಡ್ಸ್ ಖಾಯಿಲೆ ಸಹ ಇದ್ದು, ಹಲವಾರು ವರ್ಷಗಳಿಂದ ನಿಮಾನ್ಸ್ ಆಸ್ಪತ್ರೆ ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರು. ದಿನಾಂಕ-23-09-2020 ರಂದು ಸಂಜೆ 7.00 ಗಂಟೆಯಲ್ಲಿ  ಶಂಕರ್ ರವರಿಗೆ ಅವರ ತಾಯಿ ಸದರಿ ಖಾಯಿಲೆಗೆ 5 ಮಾತ್ರೆ ನೀಡಿದ್ದು ಅದನ್ನು ತಿಂದ ತಕ್ಷಣ ವಾಂತಿ ಮಾಡಿದ್ದರಿಂದ ಮತ್ತೆ 5 ಮಾತ್ರೆ ಕೊಟ್ಟಿದ್ದು 5 ನಿಮಿಷದ ನಂತರ ಹೊಟ್ಟೆಯನ್ನು ಹಿಡಿದುಕೊಂಡು ಕಿರುಚಾಡಲೂ ಪ್ರಾರಂಭಿಸಿದಾಗ ಅವರನ್ನು  ಚಿಕಿತ್ಸೆಗೆ  ತಾಯಲೂರು ಸಾರ್ವಜನಿಕ ಆಸ್ಪತ್ರೆಗೆ ಅಲ್ಲಿಂದ ಅಂಬೂಲೆನ್ಸ್ ನಲ್ಲಿ ಮುಳಬಾಗಿಲು ಸಾರ್ವಜನಿಕ ಆಸ್ಪತ್ರೆಗೆ ಹೋಗಿ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಮದ್ಯರಾತ್ರಿ 3.00 ಗಂಟೆಗೆ ಹೋಗಿ ಚಿಕಿತ್ಸೆಗೆ ದಾಖಲು ಮಾಡಿರುತ್ತೆ.  ಅಲ್ಲಿ ವೈದ್ಯರು ಚಿಕಿತ್ಸೆ ನೀಡಿದ್ದು ಚಿಕಿತ್ಸೆ ಪಲಕಾರಿಯಾಗದೇ ಸುಮಾರು 3.30 ಗಂಟೆಯಲ್ಲಿ ಶಂಕರ್ ರವರು  ಮೃತಪಟ್ಟಿರುತ್ತಾರೆ. ಮಾತ್ರೆಗಳ ಡೋಸ್ ಜಾಸ್ತಿಯಾಗಿ ಚಿಕಿತ್ಸೆ ಪಲಕಾರಿಯಾಗದೇ ಶಂಕರ್‌ ಮೃತಪಟ್ಟಿರುತ್ತಾರೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ.   ಈ ಕೇಸಿನ ಪಿರ್ಯಾದಿದಾರರಾದ ನಾರಾಯಣಸ್ವಾಮಿ, ಹುನ್ಕುಂದ ಗ್ರಾಮ ಬಂಗಾರಪೇಟೆ ವಾಸಿ ರವರ ಮಗಳಾದ ಸರಸ್ವತಮ್ಮ, 29 ವರ್ಷ ರವರಿಗೆ 3ನೇ ಡೆಲಿವರಿ ಸಮಯದಲ್ಲಿ ಮಗು ತೀರಿಕೊಂಡಿದ್ದು ಅಂದಿನಿಂದ  ಸರಸ್ವತಮ್ಮ ರವರು ಖಿನ್ನತೆಗೆ ಒಳಗಾಗಿ ಅಸ್ವಸ್ಥಳಾಗಿದ್ದು, ದಿನಾಂಕ 23.09.2020 ರಂದು ಮದ್ಯಾಹ್ನ 3-00 ಗಂಟೆಗೆ ಊಟ ಮಾಡಿ ಮನೆಯ 1ನೇ ಹಂತಸ್ಥಿನಲ್ಲಿರುವ ರೂಂ ಗೆ ಹೋಗಿ ಬಾಗಿಲಿಗೆ ಚಿಲಕ ಹಾಕಿಕೊಂಡು ಆರೋಗ್ಯ ಸರಿಯಿಲ್ಲದ ಕಾರಣ ಜೀವನದಲ್ಲಿ ಬೇಸರಗೊಂಡು ಚಾವಣಿಗೆ ಹಾಕಿದ್ದ ಪ್ಯಾನ್ ಗೆ ಸೀರೆಯಿಂದ ಕಟ್ಟಿ ಕುತ್ತಿಗೆಗೆ ಬಿಗಿದುಕೊಂಡು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುತ್ತಾರೆ.

Leave a Reply

Your email address will not be published. Required fields are marked *