ದಿನದ ಅಪರಾಧಗಳ ಪಕ್ಷಿನೋಟ 25 ನೇ ಡಿಸೆಂಬರ್‌ 2019

 – ರಸ್ತೆ ಅಪಘಾತಗಳು : 01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವೆಂಕಟಪ್ಪ ಬಿನ್ ಪೆದ್ದಪ್ಪ, ದೇವಗಾನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ:24-12-2019 ರಂದು ಬೆಳಿಗ್ಗೆ 11-30 ಗಂಟೆಯಲ್ಲಿ ದ್ವಿಚಕ್ರ ವಾಹನ ಹೀರೊಹೋಂಡ ಸ್ಪ್ಲೆಂಡರ್ ಸಂಖ್ಯೆ KA08-H.6968 ರಲ್ಲಿ ಮೊಮ್ಮಗ  ಉದಯ್ ಕುಮಾರ್ ನನ್ನು ಹಿಂಬದಿಯಲ್ಲಿ ಕುಳ್ಳಿರಿಸಿಕೊಂಡು ಬಂಗಾರಪೇಟೆ-ಕೆ.ಜಿ.ಎಫ್. ಮುಖ್ಯರಸ್ತೆ ಬೆಮಲ್ ಆಪೀಸರ್ಸ್ ಕ್ವಾಟ್ರಸ್ ಬಸ್ ನಿಲ್ದಾಣದ ಯೂಟರ್ನ್ ಬಳಿ ಚಲಾಯಿಸಿಕೊಂಡು ಹೋಗಿ ಬಲಕ್ಕೆ ತಿರುಗಿಸಿದಾಗ, ಹಿಂಬದಿಯಿಂದ ನೊಂದಣಿ ಸಂಖ್ಯೆಯಿಲ್ಲದ  ಹೋಂಡ ಆಕ್ಟೀವ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಕುಳ್ಳಿಸಿಕೊಂಡು ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ದೂರುದಾರರು ಮತ್ತು ಆತನ ಮೊಮ್ಮಗ ಉದಯ್ ಕುಮಾರ್ ಇಬ್ಬರೂ ವಾಹನ ಸಮೇತ ರಸ್ತೆಯ ಮೇಲೆ ಬಿದ್ದಾಗ ದೂರುದಾರರಿಗೆ ಮತ್ತು ಉದಯ್ ಕುಮಾರ್ ರವರಿಗೆ ಗಾಯಗಳಾಗಿರುತ್ತದೆ.

 

ಹಲ್ಲೆ : 01

ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಹೆಲೆನ್‌ ಬಿನ್ ಜಾನ್ಸನ್‌, ಸೌತ್‌ ಟ್ಯಾಂಕ್‌ ಬ್ಲಾಕ್‌, ಕೋರಮಂಡಲ್‌ ಪೋಸ್ಟ್‌, ಕೆ.ಜಿ.ಎಫ್ ರವರು ಮತ್ತು ಅವರ ಗಂಡ ಜಾನ್ಸನ್ ರವರು ಮನೆ ಬಳಿ ಇರುವ ಜಗವೋ ಜರೈವಾ ಪುಲ್ ಗಾಸ್ಪಲ್ ಚರ್ಚನಲ್ಲಿ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ದಿನಾಂಕ: 23.12.2019 ರಂದು ಸಂಜೆ  ಸಿರಿಯಲ್ ಸೆಟ್ ಹಾಕುತ್ತಿದ್ದಾಗ ಚರ್ಚ್ ನ  ಪಕ್ಕದ ಮನೆ ವಾಸಿಗಳಾದ ಚಿತ್ರಾ ಮತ್ತು ಆಕೆಯ ಗಂಡ ಭಾರತ್ ರವರು ಸಿರಿಯಲೈಟ್ಸ್ (ವಿದ್ಯುತ್ ದೀಪಾಲಂಕಾರ) ಅನ್ನು ತಮ್ಮ ಮನೆಯ ಕಡೆ  ಹಾಕಬೇಡಿ ಎಂದು ದೂರುದಾರರೊಂದಿಗೆ ಜಗಳ ಮಾಡಿ, ನಂತರ ರಾತ್ರಿ 07.30 ಗಂಟೆಯಲ್ಲಿ ಚಿತ್ರಾ, ಆಕೆಯ ಗಂಡ ಭಾರತ್, ಆಕೆಯ ಅಣ್ಣ ಮತ್ತು ತಮ್ಮ ರವರು ಸೇರಿ ಚರ್ಚ್ ಬಳಿ ಬಂದು ದೂರುದಾರರೊಂದಿಗೆ ಜಗಳ ಮಾಡಿ  ಕಲ್ಲುಗಳನ್ನು ಚರ್ಚ್ ಕಡೆ ಎಸೆದು ಚರ್ಚ್ ಕಿಟಕಿಯ ಗಾಜು ಹೊಡೆದು ಹಾಕಿದ್ದು, ದೂರುದಾರರು ಕೇಳಿದ್ದಕ್ಕೆ  ಚಿತ್ರಾ ಮತ್ತು ಆಕೆಯ ಕಡೆಯವರು ಕೆಟ್ಟ ಮಾತುಗಳಿಂದ ಬೈದು, ಚಾಕುವಿನಿಂದ ಹೊಡೆದು ರಕ್ತಗಾಯ ಪಡಿಸಿ,  ಜಾನ್ಸನ್ ರವರಿಗೂ ಕೈಗಳಿಂದ ಮತ್ತು ಚಾಕುವಿನಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.

Leave a Reply

Your email address will not be published. Required fields are marked *