ದಿನದ ಅಪರಾಧಗಳ ಪಕ್ಷಿನೋಟ 25 ನೇ ಜೂನ್‌ 2019

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:24.06.2019 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

–ಕನ್ನ ಕಳುವು : 01

ಚಾಂಪಿಯನ್‌ ರೀಪ್ಸ್ ಪೊಲೀಸ್ ಠಾಣೆಯಲ್ಲಿ ಕನ್ನ ಕಳುವುಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ದಿನ ದಿನಾಂಕ.24.06.2019 ರಂದು ಮದ್ಯಾಹ್ನ 12-30 ಗಂಟೆಗೆ ಈ ಕೇಸಿನ ಪಿರ್ಯಾದಿ ತುಳಸಿ, ಸಿ.ಟೈಲ್ ಬ್ಲಾಕ್‌ ಚಾಂಪಿಯನ್‌ ರೀಪ್ಸ್ ಕೆ.ಜಿ.ಎಫ್ ರವರು ಮನಗೆ ಬೀಗ ಹಾಕಿಕೊಂಡು ಕೆಜಿಎಫ್ ಮಾರುಕಟ್ಟೆಗೆ ಹೋಗಿ ವಾಪಸ್ಸು ಮದ್ಯಾಹ್ನ 1-45 ಗಂಟೆಗೆ ಬಂದು ನೋಡಲಾಗಿ ಮೈನ್ ಡೋರ್ ಗೆ ಹಾಕಿದ್ದ ಬೀಗವನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ, ಮನೆ ಒಳಗೆ ಹೋಗಿ ರೋಂನಲ್ಲಿದ್ದ ಗಾಡ್ರೇಜ್ ಬೀರುವಿನ ಡೋರ್‌ ಹಾಗೂ ಲಾಕರ್ ಅನ್ನು ಒಡೆದು ಅದರಲ್ಲಿದ್ದ ನಗದು ಹಣ ರೂ 85,000-00, ಹಾಗೂ ಚಿನ್ನ ಮತ್ತು ಬೆಳ್ಳಿ ವಡುವೆಗಳನ್ನು (ಸದರಿ ವಸ್ತುಗಳ ಬೆಲೆ ಸುಮಾರು 2,00,520.00 ರೂಗಳಾಗಿರುತ್ತೆ) ಕಳುವು ಮಾಡಿಕೊಂಡು ಹೋಗಿರುತ್ತಾರೆ.

– ಜೂಜಾಟ ಕಾಯ್ದೆ :01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಜೂಜಾಟ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 24.06.2019 ರಂದು 15.30 ಗಂಟೆಯಲ್ಲಿ ಬಂಗಾರಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀ. ದಯನಂದ್ ಹಾಗೂ ತಮ್ಮ ಸಿಬ್ಬಂದಿಗಳೊಂದಿಗೆ ಠಾಣಾ ಸರಹದ್ದಿನ ಗೊರವನಹಳ್ಳಿ ಗೇಟ್ ಸಮೀಪವಿರುವ ಪ್ಯಾರಾಸಾಬ್ ಎಂಬುವರ ನೀಲಗಿರಿ ತೋಪಿನಲ್ಲಿ ಆರೋಪಿಗಳಾದ ೧.ಅಮರೇಶ್, ಗೊರವನಹಳ್ಳಿ ವಾಸಿ, ೨.ಗೋವಿಂದಪ್ಪ, ಹುನಸನಹಳ್ಳಿ ವಾಸಿ, ೩.ಮಂಜುನಾಥ್, ನಾತಹಳ್ಳಿ ಗ್ರಾಮ ವಾಸಿ, ೪.ನಾರಾಯಣಸ್ವಾಮಿ, ಗೊರವನಹಳ್ಳಿ ವಾಸಿ ಹಾಗೂ ೫. ಪ್ರಕಾಶ್, ರಾಮಪುರ ವಾಸಿ ರವರುಗಳು ಕಾನೂನು ಬಾಹೀರವಾಗಿ ಇಸ್ಪೀಟ್ ಎಲೆಗಳನ್ನಿಟ್ಟುಕೊಂಡು, ಹಣವನ್ನು ಪಣವಾಗಿಟ್ಟು, ಅಂದರ್-ಬಾಹರ್ ಎಂದು ಹೇಳುತ್ತಾ, ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆದು, ಸ್ಥಳದಲ್ಲಿ ಜೂಜಾಟವಾಡಲು ಉಪಯೋಗಿಸಿದ 52 ಇಸ್ಪೀಟ್ ಎಲೆಗಳು, ನಗದು ಹಣ 1,870/- ರೂಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡು, ಆರೋಪಿಗಳ ವಿರುದ್ದ ಕಾನೂನು ಕ್ರಮ ಜರುಗಿಸಿರುತ್ತೆ.

Leave a Reply

Your email address will not be published. Required fields are marked *