ದಿನದ ಅಪರಾಧಗಳ ಪಕ್ಷಿನೋಟ 25ನೇ ಜುಲೈ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 24.07.2018 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಕನ್ನ ಕಳುವು : 01
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕನ್ನ ಕಳುವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಲಕ್ಷ್ಮಣ್‌ಕುಮಾರ್, ಮ್ಯಾನೇಜರ್, ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಕಂಪನಿ (ಲಿ), ಡಿವಿಷನಲ್ ಆಫಿಸ್, ಬಿ.ಎಂ. ರಸ್ತೆ, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್ ರವರು ದಿನಾಂಕ:23.07.2018 ರಂದು ಗ್ರಾಹಕರಿಂದ ಜಮೆಯಾಗಿದ್ದ 1,32,032/- ರೂ ಹಣವನ್ನು ಕಛೇರಿಯ ಕಬ್ಬಿಣದ ಗಾಡ್ರೇಜ್ ಸೇಪರ್ ನಲ್ಲಿಟ್ಟು ಬೀಗ ಹಾಕಿ, ರಾತ್ರಿ 7.30 ಗಂಟೆಗೆ ಕಛೇರಿಗೆ ಬೀಗ ಹಾಕಿಕೊಂಡು ಹೋಗಿ, ದಿನಾಂಕ:24.07.2018 ರಂದು ಬೆಳಿಗ್ಗೆ 10.00 ಗಂಟೆಗೆ ದೂರುದಾರರು ಹಾಗೂ ನೌಕರರು ಕಛೇರಿಗೆ ಬಂದು ನೋಡಿದಾಗ, ಯಾರೋ ಕಳ್ಳರು ಕಚೇರಿಯ ಬಾಗಿಲಿಗೆ ಹಾಕಿದ್ದ ಬೀಗಗಳನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು, ಒಳಗಡೆ ಇಟ್ಟಿದ್ದ ಕಬ್ಬಿಣದ ಗಾಡ್ರೇಜ್ ಸೇಪರ್ ಲಾಕರ್ ನ್ನು ಹೊಡೆದು  ಅದರೊಳಗಿದ್ದ 1,32,032/- ರೂ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

– ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು : 01
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ನಾಗಮ್ಮ ಕೊಂ ಕೃಷ್ಣಪ್ಪ, ಬೈರನಾಯಕನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಗಂಡ ಕೃಷ್ಣಪ್ಪ ರವರು 20 ವರ್ಷಗಳ ಹಿಂದೆ ಮಾಲಮ್ಮ ರವರನ್ನು ಕರೆದುಕೊಂಡು ಬಂದು ಮನೆಯಲ್ಲಿ ಜೊತೆಯಲ್ಲಿಟ್ಟುಕೊಂಡು ಸಂಸಾರ ಮಾಡುತ್ತಿದ್ದು, ಎಲ್ಲರೂ ಅನ್ಯೋನ್ಯವಾಗಿ ಜೀವನ ಮಾಡಿಕೊಂಡಿದ್ದು, ಒಂದು ವರ್ಷದಿಂದ ಕೃಷ್ಣಪ್ಪ ಮತ್ತು ಮಾಲಮ್ಮ ರವರು ದೂರುದಾರರು ಮತ್ತು ಆಕೆಯ ಮಗನಿಗೆ ಮನೆಯಿಂದ ಆಚೆ ಹೋಗಿ ಎಂದು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದು, ದಿನಾಂಕ 24.07.2018 ರಂದು ಮದ್ಯಾಹ್ನ 1-00 ಗಂಟೆಯಲ್ಲಿ ಕೃಷ್ಣಪ್ಪ ಮತ್ತು ಮಾಲಮ್ಮ ರವರು ದೂರುದಾರರಿಗೆ ಕೆಟ್ಟಮಾತುಗಳಿಂದ ಬೈದು ಮನೆಯಿಂದ ಸೀಮೆಎಣ್ಣೆ ಬಾಟಲನ್ನು ತಂದು ದೂರುದಾರರ ಮೇಲೆ ಸುರಿದು ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ.

– ಹಲ್ಲೆ : 01
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸುಭಾಷ್‌ ಚಂದ್ರ ಮೂರ್ತಿ ಬಿನ್ ನಾರಾಯಣಪ್ಪ, ಡಿ.ಕೆ ಹಳ್ಳಿ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ: 23.07.2018 ರಂದು ಮದ್ಯಾಹ್ನ 1-30 ಗಂಟೆಯಲ್ಲಿ ಬಂಗಾರಪೇಟೆ ತಾಲ್ಲೂಕು ಕಛೇರಿಯ ಹಿಂಬಾಗದ ಗೇಟಿನ ಬಳಿ ಜೆರಾಕ್ಸ್ ಅಂಗಡಿಯಲ್ಲಿ ಕುಳಿತುಕೊಂಡಿರುವಾಗ, ಕವರನಹಳ್ಳಿ ಗ್ರಾಮದ ಬ್ಯಾಟಪ್ಪ ರವರು ಅಲ್ಲಿಗೆ ಬಂದು ನನ್ನ ಜಮೀನು ವಿಚಾರದಲ್ಲಿ ತಲೆ ಹಾಕಬೇಡ ಎಂದು ಹೇಳಿ ಕೆಟ್ಟಮಾತುಗಳಿಂದ ಬೈದು, ಕೈಗಳಿಂದ ಮತ್ತು ಕಾಲಿನಿಂದ ಒದ್ದು ನೋವುಂಟು ಮಾಡಿರುತ್ತಾರೆ.

Leave a Reply

Your email address will not be published. Required fields are marked *