ದಿನದ ಅಪರಾಧಗಳ ಪಕ್ಷಿನೋಟ 25ನೇ ಮಾರ್ಚ್ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 24.03.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ಇತರೆ01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಕಟ್ಟಡವನ್ನು ನಾಶಪಡಿಸಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.  ದೂರುದಾರರಾದ ಶ್ರೀ. ರಾಜಾರಾಂ, ಪಿ.ಡಿ.ಓ, ಹುಲ್ಕೂರು ಗ್ರಾಮ ಪಂಚಾಯ್ತಿ ರವರು ನೀಡಿದ ದೂರಿನಲ್ಲಿ,  ಸಿದ್ದಾರೆಡ್ಡಿದಿನ್ನೆ ಗ್ರಾಮದಲ್ಲಿ ಸುಮಾರು ವರ್ಷಗಳ ಹಿಂದೆ ನಿರ್ಮಿಸಿದ್ದ ಸರ್ಕಾರಿ ಚಾವಡಿಯನ್ನು ದಿನಾಂಕ: 03.01.2021 ರಂದು ಭಾನುವಾರ ನಸುಕಿನ ಜಾವ ಸಿದ್ದಾರೆಡ್ಡಿದಿನ್ನೆ ಗ್ರಾಮದ ವಾಸಿಯಾದ ಸುಬ್ರಮಣಿ  ರವರು ಜೆಸಿಬಿಯಿಂದ ಉದ್ದೇಶಪೂರ್ವಕವಾಗಿ ಸಂಪೂರ್ಣವಾಗಿ ಧ್ವಂಸ ಮಾಡಿರುತ್ತಾರೆಂದು ದೂರು.

– ಅಬಕಾರಿ ಕಾಯ್ದೆ : 02

 ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 24.03.2021 ರಂದು ಬೆಳಿಗ್ಗೆ 11.20  ಗಂಟೆಯಲ್ಲಿ ಮುನಿವೆಂಕಟಪ್ಪ, ಕಾರಹಳ್ಳಿ ಗ್ರಾಮ ರವರು ಅವರ ಚಿಲ್ಲರೆ ಅಂಗಂಡಿಯ  ಬಳಿ ಯಾವುದೇ ಅನುಮತಿಯಿಲ್ಲದೇ ಸಾರ್ವಜನಿಕರ ಮಧ್ಯಸೇವನೆಗೆ ಸ್ಥಳಾವಕಾಶ ಮಾಡಿಕೊಟ್ಟಿದ್ದು, ದೂರುದಾರರಾದ ಶ್ರೀ. ಜಗದೀಶ್‌ರೆಡ್ಡಿ  ಹಾಗೂ ಸಿಬ್ಬಂದಿಯವರು ದಾಳಿ ಮಾಡಿ, ಸ್ಥಳದಲ್ಲಿದ್ದ, 1) Haywards cheers Whisky 90 ml ನ 02 ಪಾಕೇಟ್ ಗಳು, 2) Haywards Cheers Whisky 90 ml ನ 02 ಪಾಕೇಟ್ ಗಳು, 08 ನೀರಿನ ಪಾಕೆಟ್ ಗಳು, ನೀರಿರುವ 04 ಪಾಕೆಟ್ ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

ಚಾಂಪಿಯನ್‌ರಿಫ್ಸ್‌ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:24.03.2021 ರಂದು  ಸಂಜೆ 4.45 ಗಂಟೆಡಗೆ ಎಸ್.ಟಿ. ಬ್ಲಾಕ್ ನ ಸೈನಾಡ್ ಡಂಫ್ ಬಳಿಯಿರುವ ಸಾರ್ವಜನಿಕ ಸ್ಥಳದಲ್ಲಿ ಎಸ್. ಟಿ ಬ್ಲಾಕ್‌ ವಾಸಿಗಳಾದ ವಿಶಾಲ್ ಬಿನ್  ರಾಜ,  ಮತ್ತು ಆರ್ .ವಿಕಾಶ್ ಬಿನ್ ಜೋಸೆಫ್ ರಾಜಾ ರವರು ಮಧ್ಯಪಾನ ಸೇವನೆ ಮಾಡುತ್ತಿದ್ದವರನ್ನು ಮತ್ತು ಸ್ಥಳದಲ್ಲಿದ್ದ HAYWARDS 90 ಎಂ.ಎಲ್ ವಿಸ್ಕಿ 2 ಪಾಕೇಟ್ ಮತ್ತು ಎರಡು ಪ್ಲಾಸ್ಟಿಕ್ ಲೋಟಗಳನ್ನು ದೂರುದಾರರಾದ ಶ್ರೀಮತಿ. ಸವಿತಾ, ಮ.ಹೆಚ್.ಸಿ  ಮತ್ತು ವೇಣುಗೋಪಾಲ್, ಸಿ.ಪಿ.ಸಿ ರವರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.

Leave a Reply

Your email address will not be published. Required fields are marked *