ದಿನದ ಅಪರಾಧಗಳ ಪಕ್ಷಿನೋಟ 25ನೇ ಡಿಸೆಂಬರ್ 2020

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 24.12.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಸಾಧಾರಣ ಕಳ್ಳತನ : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ಈ ಕೇಸಿನ ಪಿರ್ಯಾದಿ ಅರ್ಜುನನ್, ವಿವೇಕನಗರ ರಾಬರ್ಟ್‌‌ಸನ್‌ಪೇಟೆ ವಾಸಿ ರವರು ದಿನಾಂಕ 18.12.2020 ರಂದು ರಾತ್ರಿ ಸುಮಾರು 08:30 ಗಂಟೆಗೆ ಊಟಮಾಡಿ ತನ್ನ ಬಳಿ ಇರುವ ಒಂದು ಸ್ಯಾಮ್ಸಂಗ್ ಜೆ-3 ಮೊಬೈಲ್ ಮತ್ತು  62000 ರೂ ನಗದು ಹಣವನ್ನು ಮನೆಯಲ್ಲಿನ ದೇವರ ಫೋಟೊ ಬಳಿ ಇಟ್ಟು. ಹಾಗೆಯೇ 08 ಗ್ರಾಂ ತೂಕದ ಉಂಗುರವನ್ನು ಟೇಬಲ್ ಮೇಲೆ ಇಟ್ಟು ಟಿ.ವಿ ನೋಡಿಕೊಂಡು ಹಾಗೆಯೇ ಮಲಗಿಬಿಟ್ಟಿದ್ದು. ಪಿರ್ಯಾದಿಗೆ  ಮನೆಯ ಬಾಗಿಲು ಒಳಗಿನ ಬೀಗ ಹಾಕಿರುವ ಬಗ್ಗೆ ಜ್ಞಾಪಕವಿಲ್ಲದೆ ಇದ್ದು, ನಂತರ ರಾತ್ರಿ 11;30 ಗಂಟೆಗೆ ಪಿರ್ಯಾದಿ ಶೌಚಾಲಯಕ್ಕೆ ಹೋಗೊಣವೆಂತ ಲೈಟ್ ಹಾಕಿ ನೋಡಿದಾಗ ದೇವರ ಫೋಟೊ ಬಳಿ ಇಟ್ಟಿದ್ದ ಮೊಬೈಲ್, ಹಣ ಹಾಗೂ ಟೇಬಲ್ ಮೇಲೆ ಇಟ್ಟಿದ್ದ ಉಂಗುರ ಸಹ ಕಾಣಲಿಲ್ಲ ಯಾರೋ ನಮಗೆ ಗೊತ್ತಿರುವವರೊ ಅಥವಾ ಅಪರಿಚಿತರೋ ಮನೆಯ ಒಳಗೆ ಬಂದು ತನಗೆ ಗೊತ್ತಿಲ್ಲದೆ ಮನೆಯಲ್ಲಿಟ್ಟಿದ್ದ ಒಂದು ಸ್ಯಾಮ್ಸಂಗ್ ಜೆ-3 ಮೊಬೈಲ್ ಮತ್ತು 62000 ರೂ ನಗದುಹಣ ಹಾಗೂ 08 ಗ್ರಾಂ ತೂಕದ ಬಂಗಾರದ ಉಂಗುರವನ್ನು ಕಳುವುಮಾಡಿಕೊಂಡು ಹೋಗಿರುತ್ತಾರೆಂದು ದೂರು ನೀಡಿರುತ್ತಾರೆ.

Leave a Reply

Your email address will not be published. Required fields are marked *