ದಿನದ ಅಪರಾಧಗಳ ಪಕ್ಷಿನೋಟ 25ನೇ ನವೆಂಬರ್ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಕ 24.11.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

ರಸ್ತೆ ಅಪಘಾತಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಚಂದ್ರಪ್ಪ ಬಿನ್ ನರಸಿಂಹಪ್ಪ, ರಾಮಲಿಂಗಾಪುರ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ತಾಯಿ ಶ್ರೀಮತಿ ದೊದ್ದಮ್ಮಯ್ಯ @ ಪೆದ್ದಮ್ಮಯ್ಯ ಕೋಂ ನರಸಿಂಹಪ್ಪ, 75 ವರ್ಷ ರವರು ದಿನಾಂಕ 23.11.2020 ರಂದು ಸಂಜೆ 6.00 ಗಂಟೆಯಿಂದ 6.30 ಗಂಟೆ ಮಧ್ಯೆ ಸಕ್ಕನಹಳ್ಳಿ-ರಾಮಲಿಂಗಾಪುರ ಮಧ್ಯೆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ, ಯಾವುದೋ ಒಂದು ಅಪರಿಚಿತ ವಾಹನದ ಚಾಲಕನು ಆತನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಶ್ರೀಮತಿ ದೊಡ್ಡಮ್ಮಯ್ಯ @ ಪೆದ್ದಮ್ಮಯ್ಯ ರವರಿಗೆ ಡಿಕ್ಕಿಪಡಿಸಿದ್ದರಿಂದ ಭಾರಿ ಗಾಯಗಳಾಗಿ ಮೃತಪಟ್ಟಿರುತ್ತಾರೆ.

 

– ಹಲ್ಲೆ : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವೆಂಕಟೇಶಪ್ಪ ಬಿನ್ ಮುನಿಯಪ್ಪ, ಮಡಿವಾಳ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ದಿನಾಂಕ 24.11.2020 ರಂದು ಬೆಳಿಗ್ಗೆ 07-30 ಗಂಟೆಯಲ್ಲಿ ಮನೆಯ ಬಳಿ ಇದ್ದಾಗ, ಜಯಕೃಷ್ಣಪ್ಪ, ಮನೋಜ್‌ ಮತ್ತು ಶಾಂತಮ್ಮ ರವರು ದೂರುದಾರರ ಮನೆಯ ಬಳಿ ಬಂದು ವಿನಾ ಕಾರಣ ಜಗಳ ಮಾಡಿ, ಕೆಟ್ಟ ಮಾತುಗಳಿಂದ ಬೈದು ಕೋಲಿನಿಂದ ಮತ್ತು ಕೈಗಳಿಂದ ಹೊಡೆದಿರುತ್ತಾರೆ.

 

Leave a Reply

Your email address will not be published. Required fields are marked *