ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 24.10.2020 ರಂದು ಸಂಜೆ 5.00 ಗಂಟೆಯಿಂದ ದಿನಾಂಕ 25.10.2020 ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.
– ಕೊಲೆ : ಇಲ್ಲ
– ಕೊಲೆ ಪ್ರಯತ್ನ : ಇಲ್ಲ
– ಡಕಾಯಿತಿ : ಇಲ್ಲ
– ಸುಲಿಗೆ : ಇಲ್ಲ
– ಕನ್ನ ಕಳುವು : ಇಲ್ಲ
– ಸಾಧಾರಣ ಕಳ್ಳತನ : ಇಲ್ಲ
– ಮೋಸ/ವಂಚನೆ : ಇಲ್ಲ
– ರಸ್ತೆ ಅಪಘಾತಗಳು : ಇಲ್ಲ
– ದೊಂಬಿ : 01
ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ದೊಂಬಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮೂರ್ತಿ ಬಿನ್ ಈರಪ್ಪ, ವಟ್ಟಿಗಲ್ಲು ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 22.10.2020 ರಂದು ಸಂಜೆ 6.30 ಗಂಟೆಯಲ್ಲಿ ಮನೆಯ ಮುಂದಿನ ರಸ್ತೆಯಲ್ಲಿರುವ ಮರಗಳನ್ನು ಕಟಾವು ಮಾಡಬೇಕೆಂದು ವೆಂಕಟರಾಮಪ್ಪ ರವರು ದೂರುದಾರರನ್ನು ಕೇಳಿದ್ದು, ದೂರುದಾರರು ಬೇಡವೆಂದು ಹೇಳಿದ್ದಕ್ಕೆ ವೆಂಕಟರಾಮಪ್ಪ, ನಾಗರಾಜ, ಗೋವಿಂದ, ಸಚಿನ್, ಪ್ರಶಾಂತ್, ವೆಂಕಟಪ್ಪ, ಗಾಯಿತ್ರಮ್ಮ, ನಾಗರಾಜ್, ಅಯ್ಯಪ್ಪ ರವರು ಅಕ್ರಮ ಗುಂಪು ಕಟ್ಟಿಕೊಂಡು ಕೈಗಳಲ್ಲಿ ದೊಣ್ಣೆ ಮತ್ತು ಕಲ್ಲುಗಳನ್ನು ತೆಗೆದುಕೊಂಡು ಬಂದು ದೂರುದಾರರಿಗೆ ಮತ್ತು ದೂರುದಾರರ ಮಗ ವಿನೋದ್ ಕುಮಾರ್ ರವರಿಗೆ ಹೊಡೆದು, ಕೆಟ್ಟಮಾತುಗಳಿಂದ ಬೈದಿರುತ್ತಾರೆ.
– ಜೂಜಾಟ ಕಾಯ್ದೆ : ಇಲ್ಲ
– ಅಪಹರಣ : ಇಲ್ಲ
– ಹಲ್ಲೆ : 03
ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ 03 ಹಲ್ಲೆ ಪ್ರಕರಣಗಳು ದಾಖಲಾಗಿರುತ್ತದೆ.
ದೂರುದಾರರಾದ ಶ್ರೀಮತಿ. ಅನುಸೂಯಮ್ಮ ಕೊಂ ಶ್ರೀನಿವಾಸ, ಡಿ. ಹೊಸಮನೆಗಳು, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 22.10.2020 ರಂದು ಸಂಜೆ 6.00 ಗಂಟೆಯಲ್ಲಿ ಮನೆಯಲ್ಲಿದ್ದಾಗ ವಿಜಿಯಮ್ಮ ಮತ್ತು ಉಮಾ ರವರು ಕೋಲಿನಿಂದ ದೂರುದಾರರ ಮನೆಯ ಕಿಟಕಿ ಮೇಲಿರುವ ಸಿಮೆಂಟ್ ಶೀಟ್ ಗಳನ್ನು ಹೊಡೆಯುತ್ತಿದ್ದಾಗ, ದೂರುದಾರರು ಕೇಳಿದ್ದಕ್ಕೆ ಹೇಮಂತ್ ಕುಮಾರ್, ಅಪ್ಪಿ, ವಿಜಿಯಮ್ಮ, ಉಮಾ ರವರು ದೂರುದಾರರಿಗೆ ಕೆಟ್ಟಮಾತುಗಳಿಂದ ಬೈದು, ಚೆನಿಕೆಯಿಂದ ಹೊಡೆದಿದ್ದು ಲೊಕೇಶ್ ರವರು ಅಡ್ಡ ಬಂದಿದ್ದಕ್ಕೆ ಕೋಲಿನಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.
ದೂರುದಾರರಾದ ಶ್ರೀಮತಿ ಕುಪ್ಪಮ್ಮ ಕೊಂ ಕೃಷ್ಣಪ್ಪ, ಡಿ ಹೊಸಮನೆಗಳು, ಬಂಗಾರಪೇಟೆ ತಾಲ್ಲೂಕು ರವರು ಹೊಸದಾಗಿ ಮನೆಯನ್ನು ನಿರ್ಮಾಣ ಮಾಡುತ್ತಿದ್ದು, ದಿನಾಂಕ 22.10.2020 ರಂದು ಸಂಜೆ 7.00 ಗಂಟೆಯಲ್ಲಿ ದೂರುದಾರರು, ದೂರುದಾರರ ಮಗಳಾದ ವಿಜಿಯಮ್ಮ, ಮೊಮ್ಮಗಳಾದ ಉಮಾ ರವರು ಮನೆಯಲ್ಲಿದ್ದಾಗ ಶ್ರೀನಿವಾಸ, ಅನುಸೂಯಮ್ಮ, ಲೋಕೇಶ್ ಮತ್ತು ರಾಜೇಶ್ ರವರು ಬಂದು ನಮ್ಮ ಮನೆ ಕಡೆ ಸಿಮೆಂಟ್ ಮಣ್ಣು ಬೀಳಿಸಿ ಗಲೀಜು ಮಾಡಬೇಡಿ ಎಂದರೆ ಗಲೀಜು ಮಾಡ್ತಿರಾ ಎಂದು ಕೂಗಿ, ದೂರುದಾರರ ಮನೆಯ ಕಾಂಪೌಂಡ್ ಒಳಗೆ ಅತಿಕ್ರಮ ಪ್ರವೇಶ ಮಾಡಿ, ಕೆಟ್ಟಮಾತುಗಳಿಂದ ಬೈದು, ಇಟ್ಟಿಗೆ ಕಲ್ಲು, ಚನಿಕೆ, ಗ್ರಾನೇಟ್ ಕಲ್ಲು ಮತ್ತು ದೊಣ್ಣೆಗಳಿಂದ ದೂರುದಾರರಿಗೆ, ವಿಜಿಯಮ್ಮ ಮತ್ತು ಉಮಾ ರವರಿಗೆ ಹೊಡೆದು ರಕ್ತಗಾಯಪಡಿಸಿರುತ್ತಾರೆ.
ದೂರುದಾರರಾದ ಶ್ರೀ. ವೆಂಕಟರಾಮಪ್ಪ ಬಿನ್ ವೆಂಕಟಪ್ಪ, ವಟ್ಟಿಗಲ್ಲು ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 22.10.2020 ರಂದು ಸಂಜೆ 4.30 ಗಂಟೆಯಲ್ಲಿ ಜಮೀನಿನಲ್ಲಿ ಸ್ವಚ್ಚತೆ ಮಾಡುತ್ತಿದ್ದಾಗ ಮೂರ್ತಿ, ಲಕ್ಷ್ಮಮ್ಮ , ವಿನೋದ್ ಕುಮಾರ್, ಶ್ರೀನಿವಾಸ್ ರವರು ಈ ಜಾಗ ನಮ್ಮದು ಎಂದು ತಕರಾರು ತೆಗೆದು ಕೆಟ್ಟಮಾತುಗಳಿಂದ ಬೈದು, ಪ್ರಾಣ ಬೆದರಿಕೆ ಹಾಕಿ, ಕೈಗಳಿಂದ, ದೊಣ್ಣೆ ಮತ್ತು ಕೋಲುಗಳಿಂದ ಹೊಡೆದಿರುತ್ತಾರೆ.
– ಮಹಿಳೆ ಮೇಲೆ ನಡೆದ ದೌರ್ಜನ್ಯ ಪ್ರಕರಣ : ಇಲ್ಲ
– ಅಬಕಾರಿ ಕಾಯ್ದೆ : ಇಲ್ಲ
– ಎನ್.ಡಿ.ಪಿ.ಎಸ್ ಕಾಯ್ದೆ : ಇಲ್ಲ
– ಇತರೆ : ಇಲ್ಲ
– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01
ಆಂಡ್ರಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಲಕ್ಷ್ಮಮ್ಮ ಕೊಂ ತಿಮ್ಮರಾಯಪ್ಪ, ತೂಕಲ್ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಮಗಳಾದ ಕುಮಾರಿ ಟಿ ಶಿಲ್ಪ, 28 ವರ್ಷ ಎಂಬುವರು ದಿನಾಂಕ: 23.10.2020 ರಂದು ಬೆಳಿಗ್ಗೆ 09.00 ಗಂಟೆಯಲ್ಲಿ ಬೇತಮಂಗಲಕ್ಕೆ ಹೋಗುವುದಾಗಿ ಮನೆಯಿಂದ ಹೋದವಳು ವಾಪಸ್ ಬಾರದೇ ಕಾಣೆಯಾಗಿರುತ್ತಾರೆ.
– ಅಸ್ವಾಭಾವಿಕ ಮರಣ ಪ್ರಕರಣ : ಇಲ್ಲ