ದಿನದ ಅಪರಾಧಗಳ ಪಕ್ಷಿನೋಟ 25ನೇ ಆಗಸ್ಟ್ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 24.08.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಮೋಸ/ವಂಚನೆ : 02

ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಮೋಸಕ್ಕೆ ಸಂಬಂಧಿಸಿದ 02 ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರಾದ ಶ್ರೀ. ಶಿವಕುಮಾರ್ ಪಾಂಡೆ ಬಿನ್ ಓಂಪ್ರಕಾಶ್‌ ಪಾಂಡೆ, ಸ್ವರ್ಣನಗರ, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್ ರವರು ದಿನಾಂಕ:23.08.2020 ರಂದು ರಾತ್ರಿ 1.00 ಗಂಟೆಯಲ್ಲಿ ತನ್ನ ಜಿಯೋ ಮೊಬೈಲ್ ಫೋನ್ ನಂ.7676665790 ಗೆ 75/- ರೂಪಾಯಿಗಳನ್ನು ರೀಚಾರ್ಜ್ ಮಾಡಿದ್ದು, ಅದು ರೀಚಾರ್ಜ್ ಆಗದೇ ಇದ್ದುದರಿಂದ ಬೆಳಿಗ್ಗೆ 10.00 ಗಂಟೆಯಲ್ಲಿ ಗೂಗಲ್ ಪೇ ಕಸ್ಟಮರ್ ಕೇರ್ ನಲ್ಲಿದ್ದ ಮೊಬೈಲ್ ನಂಬರನ್ನು ಸರ್ಚ್ ಮಾಡಿ ಮೊ.ನಂ.09832748648 ಮತ್ತು 918777585465 ಗಳಿಗೆ ಸಂಪರ್ಕಿಸಲಾಗಿ ಅನಾಮಧೇಯ ವ್ಯಕ್ತಿಗಳು ದೂರುದಾರರನ್ನು ನಂಬಿಸಿ ದೂರುದಾರರ ಬ್ಯಾಂಕ್ ಖಾತೆಯಿಂದ 24,240/-, 16,920/- ಮತ್ತು 1,500/- ಒಟ್ಟು ಮೊತ್ತ 42,660/- ರೂಪಾಯಿಗಳನ್ನು ವರ್ಗಾವಣೆ ಮಾಡಿಕೊಂಡು ಮೋಸ ಮಾಡಿರುತ್ತಾರೆ.

ದೂರುದಾರರಾದ ಶ್ರೀ. ಬಾಬು.ಕೆ. ಬಿನ್ ಕರುಣಾನಿಧಿ, ಜೆ.ಕೆ.ಪುರಂ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರಿಗೆ ದಿನಾಂಕ:19.08.2020 ರಂದು ರಾತ್ರಿ ಮೊಬೈಲ್ ಫೋನ್ ಗೆ ಪೇಟಿಎಂ ಬ್ಯಾಂಕ್ ಖಾತೆಯಲ್ಲಿದ್ದ ಹಣದಲ್ಲಿ 5032/- ರೂಪಾಯಿಗಳು ಪೋನ್ಪೇನಲ್ಲಿ ಕಡಿತವಾದಂತೆ ಸಂದೇಶ ಬಂದಿದ್ದು, ದೂರುದಾರರು ಅದನ್ನು ನೋಡಿ ದಿನಾಂಕ.20.08.2020. ರಂದು ಬೆಳಿಗ್ಗೆ 10.00 ಗಂಟೆಯಲ್ಲಿ ಫೋನ್ಪೇ ಕಸ್ಟಮರ್ ಕೇರ್ ನಂಬರನ್ನು ಗೂಗಲ್ ನಲ್ಲಿ ಚೆಕ್ ಮಾಡಿದಾಗ ಆತನಿಗೆ ಕಸ್ಟಮರ್ ಕೇರ್ನಲ್ಲಿ ಮೊ.ನಂ. 08392084293 ಸಿಕ್ಕಿದ್ದು, ದೂರುದಾರರು ಆ ಮೊಬೈಲ್ ನಂಬರಿಗೆ ಕರೆ ಮಾಡಿ ಮಾಹಿತಿಗಳನ್ನು ಕೇಳಲಾಗಿ ಆತನು ಖಾತೆಯಲ್ಲಿ ಕಡಿತವಾಗಿರುವ ಹಣವನ್ನು ವಾಪಸ್ಸು ಕಳುಹಿಸುವುದಾಗಿ ನಂಬಿಸಿ, ದೂರುದರರಿಂದ ವಿವರಗಳನ್ನು ಪಡೆದುಕೊಂಡು ಅವರ ಪೇಟಿಎಂ ಬ್ಯಾಂಕ್ ಖಾತೆಯಲ್ಲಿದ್ದ ಹಣದಲ್ಲಿ ರೂ 5038/-, 5039/-, 5035/-, 5030/-, 5032/-, 5032/-, 5032/- ಮತ್ತು 5032/- ರೂಪಾಯಿಗಳಂತೆ ಒಟ್ಟು 40,270/- ರೂಪಾಯಿಗಳನ್ನು ವರ್ಗಾವಣೆ ಮಾಡಿಕೊಂಡು ಮೋಸ ಮಾಡಿರುತ್ತಾರೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮನುಷ್ಯ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ರುಕ್ಮಣಿ ಕೊಂ ನಾರಾಯಣಸ್ವಾಮಿ, ಚಿಕ್ಕಅಂಕಾಂಡಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಗಂಡ ಆರ್.ನಾರಾಯಣಸ್ವಾಮಿ ಬಿನ್ ರಾಮಪ್ಪ, 44 ವರ್ಷ ರವರು ದಿನಾಂಕ 20.08.2020 ರಂದು ಮದ್ಯಾಹ್ನ 12.00 ಗಂಟೆಗೆ ಆಂದ್ರಪ್ರದೇಶದ ತಿರುಮಲ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೊದವರು ಮನೆಗೆ ವಾಪಸ್ಸು ಬರದೇ ಕಾಣೆಯಾಗಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ : 02

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಜಯಂತಿ, ಕಂಗಾಂಡ್ಲಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಗಂಡ ರಘುನಾಥ, 34 ವರ್ಷ ರವರಿಗೆ ದಿನಾಂಕ-23-08-2020 ರಂದು ಸಂಜೆ 5.00 ಗಂಟೆಯಲ್ಲಿ ಮನೆಯಿಂದ ಹೊರಗೆ ಬರುವಾಗ ಎದೆಯ ನೋವೆಂದು ಹೇಳಿ ಮೆಟ್ಟಲುಗಳಿಂದ ಕುಸಿದು ಬಿದ್ದಿದ್ದು, ತಕ್ಷಣ ಚಿಕಿತ್ಸೆಗೆ ಕೆ.ಜಿ.ಎಪ್ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು ಪರೀಕ್ಷಿಸಿ ರಘುನಾಥ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರದ ಶ್ರೀ. ಆಂಜಪ್ಪ ಬಿನ್ ಕೃಷ್ಣಪ್ಪ, ಸಂಪಂಗಿಪುರ, ಬಂಗಾರಪೇಟೆ ತಾಲ್ಲೂಕು ರವರ ತಾಯಿ ಶ್ರೀಮತಿ. ಲಕ್ಷ್ಮಮ್ಮ, 55 ವರ್ಷ ರವರಿಗೆ ಹೊಟ್ಟೆನೋವು ಬರುತ್ತಿದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ.23-08-2020 ರಂದು ರಾತ್ರಿ 11-00 ಗಂಟೆಯಲ್ಲಿ ದಾಸರಹೊಸಹಳ್ಳಿ ಗ್ರಾಮದ ಅನಿಲ್ ಕುಮಾರ್ ಎಂಬುವರರಿಗೆ ಸೇರಿದ ವಸಂತನಗರ-ಬ್ಯಾಟರಾಯನಹಳ್ಳಿ ರಸ್ತೆಯಲ್ಲಿರುವ ಇಟ್ಟಿಗೆ ಫ್ಯಾಕ್ಟರಿಯ ಶೆಡ್ ನ ಮೇಲ್ಚಾವಣಿಯ ಸಿಮೆಂಟ್ ಶೀಟ್ ಗಳಿಗೆ ಅಳವಡಿಸಿದ್ದ ಮರಕ್ಕೆ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *