ದಿನದ ಅಪರಾಧಗಳ ಪಕ್ಷಿನೋಟ 25ನೇ ಜುಲೈ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿದಿನಾಂಕ  24.07.2020 ರಂದು  ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು :02

ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಕಾಣೆಯಾಗಿರುವ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ಪಿರ್ಯಾದಿ ಶಂಕರ್‍, ಚಾಮಾನಹಳ್ಳಿ, ಕಾಮಸಮುದ್ರ ರವರ ಹೆಂಡತಿ ಶ್ರೀಮತಿ ಲಾವಣ್ಯ, ೨೫ ವರ್ಷ ರವರು ದಿನಾಂಕ 22.07.2020 ರಂದು ಬೆಳಿಗ್ಗೆ ಸುಮಾರು 10.30 ಗಂಟೆಯಲ್ಲಿ ಬಂಗಾರಪೇಟೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಸಂಜೆಯಾದರು ಮನೆಗೆ ವಾಪಸ್ ಬಾರದೇ ಕಾಣೆಯಾಗಿರುತ್ತಾಳೆ.

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 22-07-2020 ರಂದು ಸಂಜೆ 5.30 ಗಂಟೆಗೆ ಈ ಕೇಸಿನ ಪಿರ್ಯಾದಿ ವೆಂಕಟೇಶ್, ಕಲುವಳ್ಳಿ ಗ್ರಾಮ, ಕೆಂಪಾಪುರ ಅಂಚೆ ಕೆ.ಜಿ.ಎಫ್ ರವರ  ಮಗಳಾದ ಪ್ರಿಯಾಂಕ 18 ವರ್ಷ ರವರು ಹಾಲು ತೆಗೆದುಕೊಂಡು ಬರುವುದಾಗಿ ಹೇಳಿ ಹೋದವಳು ಮನೆಗೆ ವಾಪಸ್ಸು ಬರದೆಯಿದ್ದು ಗ್ರಾಮದಲ್ಲಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಸ್ನೇಹಿತರ ಮನೆಗಳಲ್ಲಿ, ನೆಂಟರ ಮನೆಗಳಲ್ಲಿ ಇದುವರೆಗೂ ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ.

– ಹಲ್ಲೆ :  0೨

ಕಾಮುಸಮುದ್ರ  ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಕೇಸು ಪ್ರತಿ ಕೇಸು ದಾಖಲಾಗಿರುತ್ತದೆ.  ತನಿಮೊಡುಗು ಗ್ರಾಮದ  ಸರ್ವೆ ನಂ 16 ರ ಜಮೀನು ವಿಚಾರದಲ್ಲಿ ತನಿಮೊಡುಗು ಗ್ರಾಮದ ಪ್ರಕಾಶ್ ಮತ್ತು ಸಂಪಂಗಿ ರವರುಗಳು ಪರಸ್ಪರ ಹೊಡದಾಡಿಕೊಂಡು ಗಲಾಟೆ ಮಾಡಿಕೊಂಡಿರುತ್ತಾರೆ.

– ಸಾಧಾರಣ ಕಳ್ಳತನ :01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ  ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ದಾಖಲಾಗಿರುತ್ತದೆ.  ಪಿರ್ಯಾದಿದಾರರಾದ ಶ್ರೀ. ಮಹಬೂಬ್, ಬೌರಿಲಾಲ್‌ಪೇಟೆ ರವರು ತಮ್ಮ ದ್ವಿಚಕ್ರ ವಾಹನ ಹಿರೋ ಪ್ಲಜರ್ ಸಂ. ಕೆಎ-08-ಯು-0995 ನ್ನು ವಾಸದ ಮನೆಯ ಮುಂಬಾಗ ನಿಲ್ಲಿಸಿದನ್ನು ದಿನಾಂಕ. 21.07.2020 ರಂದು ರಾತ್ರಿ 10.00 ಗಂಟೆಯಿಂದ ರಾತ್ರಿ 11.30 ಗಂಟೆ ಮಧ್ಯೆ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.

Leave a Reply

Your email address will not be published. Required fields are marked *