ದಿನದ ಅಪರಾಧಗಳ ಪಕ್ಷಿನೋಟ 25ನೇ ಜೂನ್ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿದಿನಾಂಕ 24.06.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

– ಜೂಜಾಟ ಕಾಯ್ದೆ : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಜೂಜಾಟ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ. 24.06.2020 ರಂದು ಸಂಜೆ 5.30  ಗಂಟೆಯಲ್ಲಿ ಬೆನ್ನವಾರ ಗ್ರಾಮದಿಂದ ಮುಳ್ಳೂರು ಗ್ರಾಮಕ್ಕೆ ಹೋಗುವ ಮಣ್ಣು ರಸ್ತೆಯ ಪಕ್ಕದಲ್ಲಿರುವ ಮಾವಿನ ತೋಪಿನಲ್ಲಿ ೧. ಸೋಮಣ್ಣ ಬಿನ್ ವೆಂಕಟೇಶ್‌, ಸಂಗನಹಳ್ಳಿ ಗ್ರಾಮ, ೨. ನರೇಶ್‌ ಬಿನ್ ಮುನಿರಾಜು, ಯರ್‍ರಣ್ಣಕುಂಟೆ ಗ್ರಾಮ,  ೩. ಪಾಂಡುರಂಗನ್‌ ಬಿನ್ ವೆಂಕಟೇಶ್‌, ಆವಲುಕುಪ್ಪ ಗ್ರಾಮ, ೪. ಮಂಜುನಾಥ ಬಿನ್ ವೆಂಕಟೇಶ್‌ ನಾಯ್ಡು, ಗುಡಿಪಲ್ಲಿ ಗ್ರಾಮ, ಆಂದ್ರಪ್ರದೇಶ ಮತ್ತು ೫. ವೆಂಕಟೇಶ್‌, ಶಾಂತಿಪುರಂ, ಚಿತ್ತೂರು, ಆಂದ್ರಪ್ರದೇಶ ರವರು ಜೂಜಾಟವಾಡುತ್ತಿದ್ದವರ ಮೇಲೆ  ಆಸಾಮಿಗಳ ಮೇಲೆ ದಾಳಿ ಶ್ರೀಮತಿ ರಾಜೇಶ್ವರಿ.ಟಿ., ಪ್ರೋ.ಪಿ.ಎಸ್.ಐ ರವರು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಆರೋಪಿಗಳನ್ನು ಹಾಗೂ ಆಟಕ್ಕೆ ಪಣವಾಗಿಟ್ಟಿದ್ದ ಹಣ 27,400/- ರೂಗಳನ್ನು ಮತ್ತು 52 ಇಸ್ಪೀಟ್ ಕಾರ್ಡ ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.

Leave a Reply

Your email address will not be published. Required fields are marked *