ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 24.04.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.
– ರಸ್ತೆ ಅಪಘಾತಗಳು : 01
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ-24-04-2020 ರಂದು ಈ ಕೇಸಿನ ಪಿರ್ಯಾದಿ ಆನಂದ, ವಾಸ: ಬಡಮಾಕನಹಳ್ಳಿ ಗ್ರಾಮ, ಇವರ ತಾಯಿ ಗಂಗಮ್ಮ, ೫೭ ವರ್ಷ, ರವರು ಬೆಳಿಗ್ಗೆ 11.30 ಗಂಟೆ ಸಮಯದಲ್ಲಿ ಹೊಲದ ಕಡೆ ಹೋಗಿ ಬರುತ್ತೇನೆ ಅಂತ ಮನೆಯಲ್ಲಿದ್ದ ಪಿರ್ಯಾದಿಗೆ ಹೇಳಿ ಬಡಮಾಕನಹಳ್ಳಿ ಗ್ರಾಮದ ಚೆಲುವಪ್ಪ ರವರ ಮನೆ ಮುಂದೆ ಬೇತಮಂಗಲದ ಕಡೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ ಅಂದರೆ ಬೇತಮಂಗಲ ಕಡೆಯಿಂದ ಆರೋಪಿ ಅಂಬರೀಶ್, ಬಡಮಾಕನಹಳ್ಳಿ ವಾಸಿ ರವರು ತನ್ನ ಟಾಟಾ ಎಸಿ ಸಂಖ್ಯೆ ಕೆ.ಎ.07.ಎ.9488 ರ ವಾಹನವನ್ನು ಅತಿವೇಗ ಮತ್ತು ಅಜಾಗೂರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ಪಿರ್ಯಾದಿ ತಾಯಿ ರವರಿಗೆ ಡಿಕ್ಕಿ ಪಡಿಸಿದ ಪ್ರಯುಕ್ತ ಅವರು ಕೆಳಗೆ ಬಿದ್ದು ಅವರ ತಲೆ ಮುಂಭಾಗ ಎಡ ಕಣ್ಣಿನ ಬಳಿ, ತೀರ್ವವಾದ ರಕ್ತಗಾಯಗಳು ಆಗಿದ್ದು ಬಲಗೈ ಹೆಬ್ಬೆರಳು ಕಟ್ ಆಗಿದ್ದು ಬಲತೊಡೆ ಪ್ಯಾಕ್ಚರ್ ಆಗಿರುತ್ತೆ. ಅದೇ ವಾಹನದಲ್ಲಿ ಪಿರ್ಯಾದಿ ತಾಯಿಯನ್ನು ಚಿಕಿತ್ಸೆಗೆ ಬೇತಮಂಗಲ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ನಂತರ ಅಲ್ಲಿಂದ ವೈದ್ಯರ ಸಲಹೆ ಮೇರೆಗೆ ಕೋಲಾರ ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ಹೋಗಿ ಚಿಕಿತ್ಸೆಗೆ ದಾಖಲು ಮಾಡಿದ್ದು ಪಿರ್ಯಾದಿ ತಾಯಿ ಗಂಗಮ್ಮ ರವರು ಚಿಕಿತ್ಸೆ ಪಲಕಾರಿಯಾಗದೇ ಸಂಜೆ 5.14 ಗಂಟೆಗೆ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾರೆ.