ದಿನದ ಅಪರಾಧಗಳ ಪಕ್ಷಿನೋಟ 24 ನೇ ಮೇ 2018

– ಕೊಲೆ  ಪ್ರಯತ್ನ : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಯತ್ನ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 23.05.2018 ರಂದು ದೂರುದಾರರಾದ ಶ್ರೀ.  ಪ್ರದೀಪ್‌ ಬಿನ್‌ ಶಿವಕುಮಾರ್‌  ವಿವೇಕಾನಂದ ನಗರ ಬಂಗಾರಪೇಟೆ ರವರು ನೀಡಿದ ದೂರಿನಲ್ಲಿ ಆರೋಪಿ ಆಶೋಕ್‌ಬಾಬು ಎಂಬುವರು ದೂರುದಾರರಿಗೆ  2 ತಿಂಗಳ ಹಿಂದೆ ದೂರವಾಣಿ  ಮೂಲಕ  ಬಂಗಾರಪೇಟೆಯಲ್ಲಿ ಅಂಗಡಿ ಮಳಿಗೆಗಳನ್ನು ಕಟ್ಟುವ ಸಲುವಾಗಿ ಖಾಲಿ ನಿವೇಶನಬೇಕೆಂದು ತಿಳಿಸಿ ದಿನಾಂಕ :22-05-2018 ರಂದು ರಾತ್ರಿ ಸುಮಾರು 9-00 ಗಂಟೆಯಲ್ಲಿ ಆರೋಪಿ ದೂರುದಾರರಿಗೆ ಪೋನ್‌ ಮಾಡಿ  ಕೋಲಾರ ಮುಖ್ಯ ರಸ್ತೆಯಲ್ಲಿರುವ ಜೈನ್ ಇಂಟರ್ ನ್ಯಾಷನಲ್ ಸ್ಕೂಲ್ ಸಮೀಪ ಬರಲು ತಿಳಿಸಿದ್ದು ದೂರುದಾರರು  ಆರೋಪಿ ಬಳಿ ಹೋದಾಗ ಹಣದ ವಿಚಾರದಲ್ಲಿ ಜಗಳಕಾದು  ಕೊಲೆ ಮಾಡುವ ಉದ್ದೇಶದಿಂದ ಯಾವುದೋ ಒಂದು ರಾಡ್ ನಿಂದ ತಲೆಯ ಹಿಂಭಾಗಕ್ಕೆ ಹೊಡೆದು ರಕ್ತಗಾಯಪಡಿಸಿ  ದೂರುದಾರರ ಮೇಲೆ  ಟಾಟಾ ಸುಮೋ ಹತ್ತಿಸಿ ಸಾಯಿಸುವುದಾಗಿ ಪ್ರಾಣಬೆದರಿಕೆ ಹಾಕಿರುತ್ತಾರೆ.

– ರಸ್ತೆ ಅಪಘಾತಗಳು :‍ 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌  ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ.23.05.2018 ರಂದು  ದೂರುದಾರರಾದ ಶ್ರೀ. ಮಣಿ ಬಿನ್‌ ದೊರೈಸ್ವಾಮಿ ಅಂಬೇಡ್ಕರ್‌ ನಗರ ಬಂಗಾರಪೇಟೆ ರವರು ನೀಡಿದ ದೂರಿನಲ್ಲಿ ದೂರುದಾರರು ಲಗೇಜ್ ಆಟೋದಲ್ಲಿ ಅಂಡ್ರರ್ಸಪೇಟೆಗೆ ಬಾಡಿಗೆಗೆ ಹೋಗಿ, ಮದ್ಯಾಹ್ನ 1-45 ಗಂಟೆಗೆ ರಾಬರ್ಟ್ ಸನ್ ಪೇಟೆಗೆ ಬರಲು ಬಿ.ಎಂ.ರಸ್ತೆಯ ಗೌತಮ್ ನಗರ ಬಳಿ ಆಟೋವನ್ನು ಚಲಾಯಿಸಿಕೊಂಡು ಬರುತ್ತಿದಾಗ, ಎದುರುಗಡೆ ದ್ವಿಚಕ್ರ ವಾಹನವನ್ನು  ಸ್ಕೂಟರ್‌‌ನ್ನು  ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ದೂರುದಾರರ ಲಗೇಜ್ ಆಟೋಗೆ  ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪ್ರಯುಕ್ತ  ದ್ವಿಚಕ್ರ ವಾಹನದಲ್ಲಿದ್ದ ಹೆಣ್ಣು ಮಗುವಿಗೆ ರಕ್ತಗಾಯವಾಗಿತ್ತು.

Leave a Reply

Your email address will not be published. Required fields are marked *