ದಿನದ ಅಪರಾಧಗಳ ಪಕ್ಷಿನೋಟ 24 ನೇ ಜನವರಿ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:23.01.2020 ರಂದು     ದಾಖಲಾಗಿರುವ   ಅಪರಾಧ ಪ್ರಕರಣಗಳ ವಿವರಗಳು.

– ಹಲ್ಲೆ : 01

ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 22.01.2020 ರಂದು ರಾತ್ರಿ ಸುಮಾರು 8.00 ಗಂಟೆಯಲ್ಲಿ ಈ ಕೇಸಿನ ದೂರುದಾರರಾದ ಮುಂಜುನಾಥ ಬಿನ್ ಮುನಿಯಪ್ಪ, ಪಲಮೊಡಗು, ಬಂಗಾರಪೇಟೆ ತಾಲ್ಲೂಕು ರವರು ಮನೆಯ ಬಳಿ ಆರೋಪಿ ನಾರಾಯಣಸ್ವಾಮಿ ದೂರುದಾರರ ತಂದೆ ಮುನಿಯಪ್ಪ ರವರ ಬಳಿ ಜಗಳ ಮಾಡುತ್ತಿದ್ದಾಗ ದೂರುದಾರರು ಕೇಳಿದ್ದಕ್ಕೆ ಆರೋಪಿ ಪಿರ್ಯಾದಿಗೆ ಕೆಟ್ಟ ಮಾತುಗಳಿಂದ ಬೈದು, ಒಂದು ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ : 01

ಬೆಮಲ್ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ದೂರುದಾರರಾದ ಲೋಕನಾಥರೆಡ್ಡಿ, ಕುಪ್ಪಸ್ವಾಮಿ ಲೇಔಟ್, ವಿಜಯನಗರ, ಬೆಮಲ್ ನಗರ ರವರ ಮಗನಾದ ಎಂ.ಎಲ್. ರಘುವೀರ್, ವಯಸ್ಸು 25 ವರ್ಷ ರವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿ, ಕೆಲಸಕ್ಕೆ ಹೋಗಲು ಇಷ್ಟವಿಲ್ಲದೆ ಮನೆಯಲ್ಲಿಯೇ ಇದ್ದು, ಪಿರ್ಯಾದಿದಾರರು ಆತನ ಮಗ ರಘುವೀರ್ ಗೆ ನೀನು ಇಂಜಿನಿಯರಿಂಗ್ ಓದಿ ಮನೆಯಲ್ಲಿ ಕೆಲಸವಿಲ್ಲದೆ ಇರುವುದು ಸರಿಯಲ್ಲ, ಎಲ್ಲಾದರೂ ಕೆಲಸಕ್ಕೆ ಹೋಗು ಎಂದು ಹೇಳಿದರು ರಘುವೀರ್ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇದ್ದು ಆನ್ ಲೈನ್ ನಲ್ಲಿ ಸಾಪ್ಟ್ ವೇರ್ ಕೋರ್ಸ್ ಮಾಡಿಕೊಂಡಿದ್ದು, ಆತನು ಮಾಡುತ್ತಿರುವ ಕೋರ್ಸ್ ಪಿರ್ಯಾದಿಗೆ ಇಷ್ಟವಿಲ್ಲದೆ, ರಘುವೀರ್ ಗೆ ಸುಮಾರು ಬಾರಿ ಕೆಲಸಕ್ಕೆ ಹೋಗು ಎಂದು ಹೇಳಿದಾಗ, ಅವರ ಮೇಲೆ ಕೋಪ ಮಾಡಿಕೊಂಡು ಬೇಸರ ಮಾಡಿಕೊಳ್ಳುತ್ತಿದ್ದು, ದಿನಾಂಕ:21-01-2020 ರಂದು ಬೆಳಿಗ್ಗೆ ಸುಮಾರು 09-00 ಗಂಟೆಯಲ್ಲಿ ಪಿರ್ಯಾದಿ ಮತ್ತು ಅವರ ಹೆಂಡತಿ ಸಿ. ಪದ್ಮ ರವರು ಅವರ ಸಂಬಂಧಿಕರ ಊರಾದ ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕು ರಾಮಜೋಗಿ ಹಳ್ಳಿಯಲ್ಲಿ ಜಾತ್ರೆಗೆ ಹೋಗಿದ್ದು, ಅದೇ ದಿನ ಸಂಜೆ ಸುಮಾರು 5-30 ಗಂಟೆಯಲ್ಲಿ ಪಿರ್ಯಾದಿಯ ಹೆಂಡತಿ ಪದ್ಮ ರವರು ಮಗ ರಘುವೀರ್ ಗೆ ಮೊಬೈಲ್ ಗೆ ಕರೆ ಮಾಡಿ ಊಟ ಆಯಿತ ಎಂದು ಕೇಳಿದ್ದು, ಅದಕ್ಕೆ ರಘುವೀರ್ ಹೋಟೇಲ್ ನಿಂದ ಊಟವನ್ನು ತರಸಿಕೊಂಡು ತಿಂದಿರುವುದಾಗಿ ತಿಳಿಸಿದ್ದು, ನಂತರ ದಿನಾಂಕ.22-01-2020 ಸಂಜೆ ಸುಮಾರು 5-00 ಗಂಟೆಗೆ ಪಧ್ಮ ರವರು ರಘುವೀರ್ ಗೆ ಪೋನ್ ಮಾಡಲಾಗಿ ಆತನ ಮೊಬೈಲ್ ಪೋನ್ ಸ್ವಿಚ್ ಆಫ್ ಆಗಿದ್ದು, ನಂತರ ಮತ್ತೆ ಪಿರ್ಯಾದಿ ಹೆಂಡತಿ ರಾತ್ರಿ 10-00 ರಿಂದ ದಿನಾಂಕ.23-01-2020 ರಂದು ಬೆಳಿಗ್ಗೆ ಸುಮಾರು 06-00 ಗಂಟೆಯವರೆಗೂ ಆಗಾಗ ಪೋನ್ ಮಾಡುತ್ತಿದ್ದರೂ ಸಹ ಪೋನ್ ಸ್ವಿಚ್ ಆಫ್ ಆಗಿದ್ದರಿಂದ ಪಿರ್ಯಾದಿ ಹೆಂಡತಿ ಪದ್ಮ ರವರು ಅವರ ಪಕ್ಕದ ಮನೆ ವಾಸಿ ಶಿವಪ್ರಕಾಶ್ ರವರಿಗೆ ಪೋನ್ ಮಾಡಿ ಮನೆಯ ಬಳಿ ಹೋಗಿ ನೋಡಲು ತಿಳಿಸಿದ್ದು, ಶಿವಕುಮಾರ್ ಮತ್ತು ಪುಷ್ಪ ರವರು ಹೋಗಿ ನೋಡಲಾಗಿ ಎಂ.ಎಲ್ ರಘುವೀರ್ ರವರು ಮನೆಯ ಮಹಡಿ ಮೇಲಿನ ರೂಮಿನ ಮೇಲ್ಚಾವಣಿಯ ಸಿಮೆಂಟ್ ಶೀಟ್ ಗಳಿಗೆ ಅಳವಡಿಸಿದ್ದ ಕಬ್ಬಿಣದ ಪೈಪಿಗೆ ಹಾಕಿದ್ದ ಸೀಲಿಂಗ್ ಫ್ಯಾನ್ ಗೆ ಲುಂಗಿಯಿಂದ ನೇಣು ಹಾಕಿಕೊಂಡಿದ್ದು, ನೇಣು ಹಾಕಿಕೊಂಡಿದದ್ ಲುಂಗಿ ಅರಿದು ಹೋಗಿ, ರಘುವೀರ್ ಸ್ಟೂಲ್ ಮತ್ತು ಕಬ್ಬಿಣದ ಚೇರ್ ಗಳ ಮೇಲೆ ಬಿದ್ದು ಮೃತಪಟ್ಟಿರುತ್ತಾನೆ.. ಮೃತ ರಘುವೀರ್ ರವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಕೆಲಸಕ್ಕೆ ಹೋಗಲು ಇಷ್ಟವಿಲ್ಲದೆ ಮನಸ್ಸಿಗೆ ಬೇಸರ ಮಾಡಿಕೊಂಡು ದಿನಾಂಕ.22-01-2020 ರಂದು ಸಂಜೆ ಸುಮಾರು 5-00 ಗಂಟೆಯಿಂದ ದಿನಾಂಕ.23-01-2020 ರಂದು ಬೆಳಿಗ್ಗೆ ಸುಮಾರು 6-30 ಗಂಟೆಯ ಮಧ್ಯೆ ಮೃತಪಟ್ಟಿರುತ್ತಾನೆ.

Leave a Reply

Your email address will not be published. Required fields are marked *