ದಿನದ ಅಪರಾಧಗಳ ಪಕ್ಷಿನೋಟ 24 ನೇ ಜೂನ್‌ 2019

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:23.06.2019 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

–ರಸ್ತೆ ಅಪಘಾತಗಳು : 01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 23.06.2019 ರಂದು ಈ ಕೇಸಿನ ದೂರುದಾರರಾದ ಚಂದ್ರಪ್ಪ, ಚಿಕ್ಕಕಳವಂಚಿ ಗ್ರಾಮ, ಕಾಮಸಮುದ್ರ ಹೋಬಳಿ ರವರು ಮತ್ತು ತಾಯಿ ಶಾಂತಮ್ಮ, ಅಜ್ಜಿ ಲಕ್ಷ್ಮಮ್ಮ ರವರುಗಳು ತನ್ನ ಚಿಕ್ಕಪ್ಪ ಮಂಜುನಾಥ್‌.ವಿ, 35 ವರ್ಷ, ರವರ ಶೇರ್‍ ಆಟೋದಲ್ಲಿ ಬೆಳಿಗ್ಗೆ 10.00 ಗಂಟೆ ಸಮಯದಲ್ಲಿ ಎಂ.ಆರ್‍.ಕೊತ್ತೂರು ಬಳಿ ಹೋಗುತ್ತಿದ್ದಾಗ, ದೂರುದಾರರ ಚಿಕ್ಕಪ್ಪ ಮಂಜುನಾಥ್ ರವರು ತನ್ನ ಶೇರ್ ಪ್ಯಾಸೆಂಜರ್ ಆಟೋವನ್ನು ಅತಿವೇಗವಾಗಿ ಚಲಾಯಿಸುತ್ತಿದ್ದಾಗ, ಎಂ ಅರ್. ಕೊತ್ತೂರು ಗ್ರಾಮದ ಒಂದು ಮನೆಯ ಹತ್ತಿರ ಯಾವುದೋ ಪ್ಯಾಸೆಂಜರ್ ಆಟೋ ನಿಂತಿದ್ದು ಅದರ ಮುಂದೆ ಒಂದು ಬಿಳಿ ಬಣ್ಣದ ಬುಲೋರೋ ಕಾರು ಸಹ ರಸ್ತೆಯ ಎಡ ಬಾಗದಲ್ಲಿ ನಿಂತಿದ್ದು, ದೂರುದಾರರ ಚಿಕ್ಕಪ್ಪ ಆಟೋವನ್ನು ಅತಿವೇಗದಿಂದ ಚಲಾಯಿಸಿ ಅವುಗಳನ್ನು ಓವರ್ ಟೇಕ್ ಮಾಡಲು ಆಟೋವಿನ ಹ್ಯಾಂಡಲ್ ನ್ನು ಏಕಾಏಕಿ ಬಲಕ್ಕೆ ತಿರುಗಿಸಿದ್ದರಿಂದ ಆಟೋ ನಿಯಂತ್ರಣ ತಪ್ಪಿ ಬಲಬಾಗಕ್ಕೆ ಪಲ್ಟಿ ಹೊಡೆದ ಪರಿಣಾಮ ಆಟೋದಲ್ಲಿದ್ದ ದೂರುದಾರರು, ತಾಯಿ ಶಾಂತಮ್ಮ, ಅಜ್ಜಿ ಲಕ್ಷ್ಮಮ್ಮರವರಿಗಾಗಲಿ ಯಾವುದೇ ಗಾಯಗಳಾಗಿರುವುದಿಲ್ಲ ದೂರುದಾರರ ಚಿಕ್ಕಪ್ಪ ಮಂಜುನಾಥ್.ವಿ ರವರಿಗೆ ಆಟೋವಿನ ಸ್ಟೇರಿಂಗ್ ಹ್ಯಾಂಡಲ್ ನ ಎಡಭಾಗದ ಕಬ್ಬಿಣದ ಹ್ಯಾಂಡಲ್ ಎಡಬುಜದ ಬಾಗದಲ್ಲಿ ತಗುಲಿ ತೀರ್ವ ತರದ ರಕ್ತಗಾಯವಾಗಿ ಜ್ಞಾನತಪ್ಪಿ ಬಿದ್ದವರನ್ನು ಚಿಕಿತ್ಸೆಗಾಗಿ ಕೆಜಿಎಫ್ ಜನರಲ್ ಆಸ್ಪತ್ರೆಗೆ ಸಾಗಿಸಿದ್ದು ವೈದ್ಯರು ಮಂಜುನಾಥ್ ರವರನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ

– ಜೂಜಾಟ ಕಾಯ್ದೆ :01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಜೂಜಾಟ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 23.06.2019 ರಂದು ಬೆಳಿಗ್ಗೆ 10.45 ಗಂಟೆಯಲ್ಲಿ ಈ ಕೇಸಿನ ದೂರುದಾರರಾದ ಶ್ರೀ.ಮನೋಜ್ ಕುಮಾರ್‍ ನಾಯಕ್, ಪ್ರೊಬೇಷನರಿ ಡಿವೈಎಸ್‌ಪಿ, ಕೆ.ಜಿ.ಎಫ್ ರವರು ಬಂಗಾರಪೇಟೆ ಪೊಲೀಸ್ ಠಾಣಾ ಸರಹದ್ದಿನ, ಬಂಗಾರಪೇಟೆ ಪಟ್ಟಣದ ಸಿ ರಹೀಂ ಕಾಂಪೌಂಡ್ ಬಳಿಯಿರುವ ರೈಲ್ವೆ ಗೇಟ್ ನ ಗೇಟ್ ಮೆನ್ ಕಟ್ಟಡದ ಹಿಂಭಾಗದಲ್ಲಿ, ಆರೋಪಿಗಳಾದ ಅಕ್ರಂ ಪಾಷ, ಸಿ.ರಹೀಂ ಕಾಂಪೌಂಡ್‌, ಬಂಗಾರಪೇಟೆ, ನಸೀರ್‍ ಪಾಷ, ಅತ್ತಿಗಿರಿಕೊಪ್ಪ ಮತ್ತು ಸಂಪಂತ್, ಸೇಠ್‌ ಕಾಂಪೌಂಡ್‌, ಬಂಗಾರಪೇಟೆ ರವರುಗಳು ಯಾವುದೇ ಪರವಾನಿಗಿ ಇಲ್ಲದೇ ಮೊಬೈಲ್ ನಿಂದ ಆನ್ ಲೈನ್ ನ ಅಂಕಿಗಳ ಮೇಲೆ, 63, 60, 38, 50 ಎಂದು ಕೂಗುತ್ತಾ, 100, 500 ರೂಗಳು ಎಂದು ಹೇಳಿಕೊಂಡು, ಹಣವನ್ನು ಪಣವಾಗಿಟ್ಟು, ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ, ಆರೋಪಿಗಳನ್ನು ವಶಕ್ಕೆ ಪಡೆದು, ಸ್ಥಳದಲ್ಲಿ ಆನ್ ಲೈನ್ ನ ಅಂಕಿಗಳ ಮೇಲೆ ಜೂಜಾಟವಾಡಲು ಉಪಯೋಗಿಸಿದ ಸ್ಯಾಮ್ ಸಂಗ್ ಆಂಡ್ರಾಯ್ಡ್ ಮೊಬೈಲ್ ಪೋನ್, ನಗದು ಹಣ 7,420-00 ರೂಗಳು, ಒಂದು ಚಿಕ್ಕ ಪುಸ್ತಕವನ್ನು ಅಮಾನತ್ತುಪಡಿಸಿಕೊಂಡು, ಆರೋಪಿಗಳ ವಿರುದ್ದ ಕಾನೂನು ಕ್ರಮ ಜರುಗಿಸಿರುತ್ತೆ.

–ಅಕ್ರಮ ಮದ್ಯ ಮಾರಾಟ : 01

ಈ ಕೇಸಿನ ದೂರುದಾರರಾದ ನಾರಾಯಾಣಸ್ವಾಮಿ, ಹೆಡ್‌ ಕಾನ್ಸ್‌ಟೇಬಲ್ ಮತ್ತು ಸತೀಶ್‌ ರೆಡ್ಡಿ, ಪೊಲೀಸ್ ಕಾನ್ಸ್ಟೇಬಲ್ ಬೇತಮಂಗಲ ಪೊಲೀಸ್ ಠಾಣೆ ರವರುಗಳು ದಿನಾಂಕ:23.06.2019 ರಂದು ಪಿಟಿಶನ್ ವಿಚಾರಣೆಗೆ ಸುವರ್ಣಹಳ್ಳಿ ಗ್ರಾಮಕ್ಕೆ ಹೋಗಿ ವೆಂಗಸಂದ್ರ ಗ್ರಾಮದ ಕಡೆ ಬರುವಾಗ, ಆರೋಪಿ ಗಂಗಾಧರ, 38 ವರ್ಷ, ಅನ್ನಸಾಗರ ಗ್ರಮದ ವಾಸಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದು ಸದರಿ ಆರೋಪಿಯನ್ನು ವಶಕ್ಕೆ ಪಡೆದು, ಸದರಿ ಮದ್ಯದ ಬಾಟಲ್ ಗಳನ್ನು ಅಮಾನತ್ತು ಪಡಿಸಿ ಮುಂದಿನ ಕ್ರಮಕ್ಕಾಗಿ ಠಾಣೆಯಲ್ಲಿ ಹಾಜರು ಪಡಿಸಿರುತ್ತಾರೆ ಇತ್ಯಾದಿ

Leave a Reply

Your email address will not be published. Required fields are marked *