ದಿನದ ಅಪರಾಧಗಳ ಪಕ್ಷಿನೋಟ 24 ನೇ ಮೇ 2019

ರಸ್ತೆ ಅಪಘಾತಗಳು :  01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಕುಮಾರ್‌ ಬಿನ್ ಮುನಿನಾರಾಯಣಶೆಟ್ಟಿ, ರಾಮಕುಪ್ಪಂ, ಕುಪ್ಪಂ ತಾಲ್ಲೂಕು, ಆಂದ್ರಪ್ರದೇಶ ರವರು ನೀಡಿರುವ ದೂರಿನಲ್ಲಿ, ದಿನಾಂಕ 20.05.2019 ರಂದು ಬೆಳಿಗ್ಗೆ 10.15 ಗಂಟೆಗೆ ಶ್ರೀನಿವಾಸಶೆಟ್ಟಿ, ರಾಜ್‌ಪೇಟ್‌ ರಸ್ತೆ, ಕ್ಯಾಸಂಬಳ್ಳ ಹೋಬಳಿ, ಕೆ.ಜಿ.ಎಫ್ ತಾಲ್ಲೂಕು ರವರು ರಾಜಪೇಟೆ ರಸ್ತೆಯಲ್ಲಿ ಗಣೇಶ್ ಹೋಟೆಲ್ ಮುಂದೆ AP03-TG-0484 APE ಆಟೋ ಹತ್ತುತ್ತಿದ್ದಾಗ, ವಿ.ಕೋಟೆ ಕಡೆಯಿಂದ ಶಾಂತಿಪುರಂ ಕಡೆಗೆ ಹೋಗುತ್ತಿದ್ದ AP03-TA-0833 ನೋಂದಣಿ ಸಂಖ್ಯೆಯ 407 ಟೆಂಪೋವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಆಟೋಗೆ ಡಿಕ್ಕಿಹೊಡೆದಿದ್ದು, ಆಟೋ ಹತ್ತುತ್ತಿದ್ದ ಶ್ರೀನಿವಾಸಶೆಟ್ಟಿ ಮತ್ತು ಆಟೋ ಚಾಲಕ ಲೋಕೇಶ್‌, ಸಿಗನಿಕುಪ್ಪ ಗ್ರಾಮ, ವಿ.ಕೋಟ ಮಂಡಲ್, ಆಂದ್ರಪ್ರದೇಶ ರವರಿಗೆ ರಕ್ತಗಾಯಗಳಾಗಿರುತ್ತೆ.

 –ಹಲ್ಲೆ : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಂಬಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮುಸ್ಜೀದ್ ಖಾನ್ ಬಿನ್ ರೆಹಮಾನ್‌ ಖಾನ್, ಭಾರತೀಪುರ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್ ರವರು ದಿನಾಂಕ 23-05-2019 ರಂದು ಬೆಳಿಗ್ಗೆ 11-00 ಗಂಟೆಯಲ್ಲಿ ತಮ್ಮ ಮನೆಯ ಬಳಿ ನಿಂತುಕೊಂಡಿದ್ದಾಗ, ಆರೋಪಿಗಳಾದ ಅಶು, ಮಕ್ಸೂದ್‌, ಶಹಬಾಜ್‌ ಮತ್ತು ಖಬೀರ್‌ ರವರು ದೂರುದಾರರ ಅಣ್ಣ ನ್ಯಾಮತ್‌ ಖಾನ್‌ ರವರ ಮಗ ಯಾಸೀನ್ ಖಾನ್ ರವರನ್ನು ಹಣ ಕೊಡುವಂತೆ ಕೇಳುತ್ತಿದ್ದಾಗ,  ನ್ಯಾಮತ್ ಖಾನ್ ರವರು ಆರೋಪಿಗಳಿಗೆ “ಯಾಕೆ ಅವನ ಬಳಿ ಹಣ ಕೇಳುತ್ತಿದ್ದೀರಿ, ಅವನ ಬಳಿ ಹಣ ಎಲ್ಲದೆ ಎಂದು ಕೇಳಿದಾಗ” ಆರೋಪಿಗಳು ನೀನ್ಯಾವನೋ ಕೇಳೋದಕ್ಕೆ, ಎಂದು ಕೈಗಳಿಂದ ನ್ಯಾಮತ್ ಖಾನ್ ರವರಿಗೆ ಹೊಡೆದಿದ್ದು, ದೂರುದಾರರು ಮತ್ತು ಇನ್ನೊಬ್ಬ ಅಣ್ಣ ಸಬೀರ್ ಖಾನ್ ರವರು ಜಗಳ ಬಿಡಿಸಲು ಅಡ್ಡ ಹೋದಾಗ, ಅವರಿಗೆ ಕೈಗಳಿಂದ ಮತ್ತು ಕಬ್ಬಿಣದ ರಾಡ್ ನಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.

Leave a Reply

Your email address will not be published. Required fields are marked *