ದಿನದ ಅಪರಾಧಗಳ ಪಕ್ಷಿನೋಟ 24ನೇ ಮಾರ್ಚ್ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 23.03.2018 ರಂದು  ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ರಸ್ತೆ ಅಪಘಾತಗಳು :‍ ‌01

ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ.  ದೂರುದಾರರಾದ ಶ್ರೀ. ಅಕ್ರಂ ಬಿನ್ ಇಸ್ಮಾಯಿಲ್, ಉರಿಗಾಂಪೇಟೆ, ಕೆ.ಜಿ.ಎಫ್ ರವರು  ದಿನಾಂಕ 19.03.2018 ರಂದು ಸಂಜೆ 6.50 ಗಂಟೆಗೆ ಜೀವ ರವರೊಂದಿಗೆ ಕ್ಯಾಸಂಬಳ್ಳಿ-ಕೆ.ಜಿ.ಎಫ್ ಮುಖ್ಯ ರಸ್ತೆಯಲ್ಲಿ ಗುಟ್ಟಹಳ್ಳಿ ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಕ್ಯಾಸಂಬಳ್ಳಿ ಕಡೆಯಿಂದ KA04-EY-8427 ದ್ವಿಚಕ್ರವಾಹನದ ಸವಾರ ವಾಹನವನ್ನು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಜೀವ ಹಾಗೂ ದೂರುದಾರನಿಗೆ ಡಿಕ್ಕಿಹೊಡೆದು ದ್ವಿಚಕ್ರವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿರುತ್ತಾನೆ. ಇಬ್ಬರಿಗೂ ರಕ್ತಗಾಯಗಳಾಗಿರುತ್ತದೆ.

ಅಸ್ವಾಭಾವಿಕ ಮರಣ : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಾರಾಯಣಪ್ಪ ಬಿನ್ ಮುನಿವೆಂಕಟಪ್ಪ, ಬೀರನಕುಪ್ಪ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ  ಮಗ ಸತೀಶ್, 20 ವರ್ಷ  ಎಂಬುವನು ಕನಮನಹಳ್ಳಿ ಗ್ರಾಮದ ವಾಸಿ ಸುಜಾತ ರವರನ್ನು ಪ್ರೀತಿಸುತ್ತಿದ್ದು, ಇತ್ತೀಚೆಗೆ ಅವರ ಮದ್ಯೆ ಮನಃಸ್ತಾಪಗಳಾಗಿದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 23.03.2018 ರಂದು ಬೆಳಿಗ್ಗೆ 10.20 ಗಂಟೆಗೆ ಸತೀಶ್‌ ಮನೆಯ ಮೇಲ್ಚಾವಣಿಯ ಕಬ್ಬಿಣದ ಹುಕ್ಕಿಗೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.

Leave a Reply

Your email address will not be published. Required fields are marked *