ದಿನದ ಅಪರಾಧಗಳ ಪಕ್ಷಿನೋಟ 24ನೇ ಮಾರ್ಚ್ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 23.03.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಹಲ್ಲೆ : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವೆಂಕಟೇಶ್ ಬಿನ್ ನಾಗರಾಜ್‌, ಕಾಮಸಮುದ್ರಂ  ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ತಮ್ಮ ಪಾಪಣ್ಣ ರವರು ದಿನಾಂಕ 22.03.2021 ರಂದು ರಾತ್ರಿ 8.00 ಗಂಟೆಯಲ್ಲಿ ಬೆಂಗಳೂರಿನಿಂದ ಬಂದಿದ್ದು ಸಂಸಾರದ ವಿಚಾರದಲ್ಲಿ ಮಾತನಾಡುತ್ತಿದ್ದಾಗ  ಶೋಭಾ, ಪಾಪಮ್ಮ ಮತ್ತು ರವಿ ರವರು ದೂರುದಾರರ ಮೇಲೆ ಜಗಳಕ್ಕೆ ಬಂದು ಕೆಟ್ಟಮಾತುಗಳಿಂದ ಬೈದು, ಕಚ್ಚಿ ಮತ್ತು ರಾಡ್‌ನಿಂದ ಹೊಡೆದು ರಕ್ತಗಾಯಪಡಿಸಿದ್ದು, ಪಾಪಣ್ಣ ರವರಿಗೂ ಸಹ ಕೆಟ್ಟ ಮಾತುಗಳಿಂದ ಬೈದ್ದು ಕೈಗಳಿಂದ ಹೊಡೆದು, ಪ್ರಾಣ ಬೆದರಿಕೆ ಹಾಕಿರುತ್ತಾರೆ.

ಮಹಿಳೆ ಮೇಲೆ ನಡೆದ ದೌರ್ಜನ್ಯ ಪ್ರಕರಣ : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಶೋಭಾ ಕೊಂ ವೆಂಕಟೇಶ್‌, ಕಾಮಸಮುದ್ರಂ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರಿಗೆ 13 ವರ್ಷಗಳ ಹಿಂದೆ ವೆಂಕಟೇಶ್ ರವರ ಜೊತೆ ಮದುವೆಯಾಗಿದ್ದು, 3 ವರ್ಷಗಳಿಂದ  ವೆಂಕಟೇಶ್ ರವರು ದೂರುದಾರರಿಗೆ ತವರು ಮನೆಯಿಂದ ಒಡವೆಗಳು ಹಾಕಿಕೊಂಡು ಬಾ ಎಂದು ಹಿಂಸೆ ನೀಡುತ್ತಿದ್ದು, ದೂರುದಾರರು ಸ್ವಸಹಾಯ ಸಂಘಗಳಲ್ಲಿ 1ಲಕ್ಷ 20 ಸಾವಿರ ರೂ ಸಾಲವನ್ನು ತೆಗೆದು ಕೊಟ್ಟಿದ್ದು ಸದರಿ ಹಣವನ್ನು ವೆಂಕಟೇಶ್‌ ರವರು ಖರ್ಚು ಮಾಡಿಕೊಂಡಿದ್ದು,  ಹಣವನ್ನು ಕೇಳಿದಾಗ ತವರು ಮನೆಗೆ ಹೋಗು ಎಂದು ಮಾನಸಿಕವಾಗಿ & ದೈಹಿಕವಾಗಿ ಹಿಂಸೆ ನೀಡಿದ್ದು, ದಿನಾಂಕ 22.03.2021 ರಂದು ರಾತ್ರಿ  8.00 ಗಂಟೆಯಲ್ಲಿ ದೂರುದಾರರೊಂದಿಗೆ ವೆಂಕಟೇಶ್‌, ಭಾಗ್ಯ ರವರು ಜಗಳ ಮಾಡಿ ಹೊಡೆದಿದ್ದು, ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿ ಮನೆಗೆ ಹೋದಾಗ, ಯಾಕೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದು ಎಂದು ವೆಂಕಟಮ್ಮ ಮತ್ತು ಪಾಪಣ್ಣ  ರವರು  ಕೆಟ್ಟಮಾತುಗಳಿಂದ ಬೈದ್ದು ಕೈಗಳಿಂದ ಹೊಡೆದಿರುತ್ತಾರೆ.

– ಅಬಕಾರಿ ಕಾಯ್ದೆ : 01

 ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 23.03.2021 ರಂದು ಮಧ್ಯಾಹ್ನ 02.30 ಗಂಟೆಯಲ್ಲಿ ಶ್ರೀಮತಿ ಜ್ಯೋತಿ ಕೋಂ ಲೇಟ್ ಶ್ರೀನಿವಾಸ್ ರವರು ಕಾರಹಳ್ಳಿ ಗ್ರಾಮದ ಕೆರೆಯ ಕೋಡಿಯ ಸಮೀಪ ತನ್ನ ಚಿಲ್ಲರೆ ಅಂಗಡಿಯಲ್ಲಿ ಯಾವುದೇ ಅನುಮತಿಯಿಲ್ಲದೇ ಸಾರ್ವಜನಿಕರಿಗೆ ಮಧ್ಯಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದು, ದೂರುದಾರರಾದ ಶ್ರೀ. ಜಗದೀಶ್‌ ರೆಡ್ಡಿ, ಪಿ.ಎಸ್.ಐ ಮತ್ತು ಸಿಬ್ಬಂದಿಯವರು ದಾಳಿ ಮಾಡಿ, ಸ್ಥಳದಲ್ಲಿದ್ದ 1) BANGALORE WHISKY 180 ml ನ 02 ಪಾಕೇಟ್ ಗಳು, ಖಾಲಿಯಾಗಿರುವ BANGALORE WHISKY 180 ml ನ 02 ಪಾಕೇಟ್ ಗಳು, ಖಾಲಿಯಾಗಿರುವ 04 ನೀರಿನ ಪಾಕೆಟ್ ಗಳು, ತುಂಬಿರುವ 04 ನೀರಿನ ಪಾಕೆಟ್ ಗಳು ಮತ್ತು 04 ಪ್ಲಾಸ್ಟಿಕ್ ಲೋಟಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

Leave a Reply

Your email address will not be published. Required fields are marked *