ದಿನದ ಅಪರಾಧಗಳ ಪಕ್ಷಿನೋಟ 24ನೇ ಫೆಬ್ರವರಿ 2021

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 23.02.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಜೂಜಾಟ ಕಾಯ್ದೆ : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಜೂಜಾಟ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 23.02.2021 ರಂದು ಮಧ್ಯಾಹ್ನ 03.00 ಗಂಟೆಯಲ್ಲಿ  ಪೀಲವಾರ ಗ್ರಾಮದ  ಕುಂಟಮುನಿಯಪ್ಪರವರ ಜಮೀನಿನ ಬಳಿ ಒಂದು ಮರದ ಕೆಳಗೆ 1) ಮಂಜುನಾಥ ಬಿನ್ ಶ್ರೀರಾಮಪ್ಪ, ವಾಸ-ಪೀಲವಾರ ಗ್ರಾಮ, ಕ್ಯಾಸಂಬಳ್ಳಿ ಹೋಬಳಿ, ಕೆ.ಜಿ.ಎಫ್ ತಾಲ್ಲೂಕು, 2) ಸೆಲ್ವರಾಜ್ ಬಿನ್ ವೆಂಕಟಸ್ವಾಮಿ, ವಾಸ-ಯಲ್ಲಾಗ್ರಹಾರ ಗ್ರಾಮ, ವಿ.ಕೋಟೆ ಮಂಡಲ, ಕುಪ್ಪಂ ತಾಲ್ಲೂಕು, ಚಿತ್ತೂರು ಜಿಲ್ಲೆ,  3) ದೊರೈಸ್ವಾಮಿ ರೆಡ್ಡಿ ಬಿನ್ ಗಂಟ್ಲರೆಡ್ಡಿ, ವಾಸ-ಬೂಲಪಲ್ಲಿ ಗ್ರಾಮ,  ರಾಮಕುಪ್ಪಂ ಮಂಡಲ,  ಕುಪ್ಪಂ ತಾಲ್ಲೂಕು, ಚಿತ್ತೂರು ಜಿಲ್ಲೆ,  4) ಗೋವಿಂದ ಟಿ.ಎಂ ಬಿನ್ ಮುನಿಸ್ವಾಮಿಚಾರಿ, ವಾಸ-ವೆಂಕಟಪುರ ಗ್ರಾಮ, ರಾಮಕುಪ್ಪಂ ಮಂಡಲ,  ಕುಪ್ಪಂ ತಾಲ್ಲೂಕು, ಚಿತ್ತೂರು ಜಿಲ್ಲೆ,  5) ಪಿ.ರಾಜ ಬಿನ್ ಪೆರುಮಾಲಗೌಂಡರ್, ವಾಸ-ಬೆನ್ನವಾರ ಗ್ರಾಮ, ಕ್ಯಾಸಂಬಳ್ಳಿ ಹೋಬಳಿ, ಕೆ.ಜಿ.ಎಫ್ ತಾಲ್ಲೂಕು,  06) ಗಜೇಂದ್ರ ಬಿನ್ ರಾಜಪ್ಪ, ವಾಸ-ಬೋಯಿನಪಲ್ಲಿ ಗ್ರಾಮ, ಶಾಂತಿಪುರಂ ಮಂಡಲ, ಕುಪ್ಪಂ ತಾಲ್ಲೂಕು, ಚಿತ್ತೂರು ಜಿಲ್ಲೆ,  07) ಶ್ರೀರಾಮ ಬಿನ್ ವಲಚಪ್ಪ, ರಾಮಕುಪ್ಪಂ ಮಂಡಲ,  ಕುಪ್ಪಂ ತಾಲ್ಲೂಕು, ಚಿತ್ತೂರು ಜಿಲ್ಲೆ, 8) ಕೇಶವ ಬಿನ್ ಸುಬ್ಬರಾಯಪ್ಪ, ವಾಸ-ಪೀಲವಾರ ಗ್ರಾಮ, ಕ್ಯಾಸಂಬಳ್ಳಿ ಹೋಬಳಿ, ಕೆ.ಜಿ.ಎಫ್ ತಾಲ್ಲೂಕು, 9) ನವೀನ್ ಕುಮಾರ್ ಬಿನ್ ಸುಬ್ಬರಾಯಪ್ಪ, ವಾಸ-ಪೀಲವಾರ ಗ್ರಾಮ, ಕ್ಯಾಸಂಬಳ್ಳಿ ಹೋಬಳಿ, ಕೆ.ಜಿ.ಎಫ್ ತಾಲ್ಲೂಕು 10) ಶ್ರೀನಿವಾಸ ಬಿನ್ ವೆಂಕಟರಾಮ, ವಾಸ-ಪೀಲವಾರ ಗ್ರಾಮ, ಕ್ಯಾಸಂಬಳ್ಳಿ ಹೋಬಳಿ, ಕೆ.ಜಿ.ಎಫ್ ತಾಲ್ಲೂಕು, 11) ನರೇಶ್ ಬಿನ್ ಲೇಟ್ ಜಮುನ, ವಾಸ-ಪೀಲವಾರ ಗ್ರಾಮ, ಕ್ಯಾಸಂಬಳ್ಳಿ ಹೋಬಳಿ, ಕೆ.ಜಿ.ಎಫ್ ತಾಲ್ಲೂಕು, 12) ವಿನಯ್ ಬಿನ್ ಶ್ರೀನಿವಾಸ್, ಕ್ಯಾಸಂಬಳ್ಳಿ ಹೋಬಳಿ, ಕೆ.ಜಿ.ಎಫ್ ತಾಲ್ಲೂಕು, 13) ನಾಗರಾಜ್ ಬಿನ್ ಗೆಂಗಲಯ್ಯ, ವಾಸ-ರಾಮಕುಪ್ಪಂ ಗ್ರಾಮ, ಕುಪ್ಪಂ ತಾಲ್ಲೂಕು, ಚಿತ್ತೂರು ಜಿಲ್ಲೆ ರವರು ಅಂದರ್-ಬಾಹರ್ ಜೂಜಾಟ ಆಡುತ್ತಿದ್ದವರನ್ನು ಪಿ.ಎಸ್.ಐ ಶ್ರೀಮತಿ. ರಾಜೇಶ್ವರಿ ಮತ್ತು ಸಿಬ್ಬಂದಿಯವರು ದಾಳಿಮಾಡಿ ಸ್ಥಳದಲ್ಲಿದ್ದ 31,340/-  ರೂ, 52  ಇಸ್ಪೀಟ್ ಕಾರ್ಡಗಳನ್ನು,  07 ದ್ವಿ-ಚಕ್ರ ವಾಹನಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸುರತ್ತಾರೆ.

ರಸ್ತೆ ಅಪಘಾತಗಳು : 02

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವಿಜಿಯಮ್ಮ ಕೊಂ ಅಪ್ಪಿ, ಡಿ ಹೊಸಮನೆಗಳು, ಬಂಗಾರಪೇಟೆ ತಾಲ್ಲೂಕು ರವರ ಗಂಡ ಅಪ್ಪಿ ಬಿನ್ ಕೃಷ್ಣಪ್ಪ, 55 ವರ್ಷ ರವರು KA-08-U-6100 HONDA SHINE  ದ್ವಿ ಚಕ್ರ ವಾಹನದಲ್ಲಿ ದಿನಾಂಕ 23.02.2021 ರಂದು ಮಧ್ಯಾಹ್ನ 2.00 ಗಂಟೆಯಲ್ಲಿ ಕಾಮಸಮುದ್ರಂ ಕಡೆಯಿಂದ ಬಂಗಾರಪೇಟೆ ಕಡೆಗೆ ಮೂಗನಹಳ್ಳಿ ಗ್ರಾಮದ ಕೆರೆಯ ಸಮೀಪ ಹೋಗುತ್ತಿದ್ದಾಗ, ಎದುರುಗಡೆಯಿಂದ KA-50-N-4050 ಕಾರಿನ ಚಾಲಕ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಅಪ್ಪಿ ರವರ  ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ  ಅಪ್ಪಿ ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಮೃತಪಟ್ಟಿರುತ್ತಾರೆ.

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಯೋಜನಾಥ್ ಬಿನ್ ಮುನಿಯಿಪ್ಪ, ನತ್ತ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ತಮ್ಮ ರಾಜು ಎನ್.ಎಂ, 28 ವರ್ಷ ರವರು ದಿನಾಂಕ:23.02.2021 ರಂದು ಬೆಳಗ್ಗೆ 11:00 ಗಂಟೆಯಲ್ಲಿ ದ್ವಿಚಕ್ರವಾಹನ ಸಂಖ್ಯೆ ಕೆಎ-07-ಇಡಿ-4194 ರಲ್ಲಿ ರಕ್ಷಿತ ಬಿನ್ ಶ್ರೀನಿವಾಸ್, 22 ವರ್ಷ, ಕೊತ್ತೂರು ಗ್ರಾಮ, ಮುಳಬಾಗಿಲು ತಾಲ್ಲೂಕು ರವರನ್ನು ದ್ವಿಚಕ್ರವಾಹನದ ಹಿಂಬದಿಯಲ್ಲಿ ಕುಳ್ಳರಿಸಿಕೊಂಡು ಕೋಲಾರ ಮುಖ್ಯ ರಸ್ತೆಯಿಂದ ನಾಗಶೆಟ್ಟಿಹಳ್ಳಿ ಗ್ರಾಮದ ಕಡೆ ಹೋಗುವ ರಸ್ತೆಯಲ್ಲಿ ಹೋಗುತ್ತಿದ್ದಾಗ  ನಾಗಶೆಟ್ಟಿಹಳ್ಳಿ ಗ್ರಾಮದ ಕಡೆಯಿಂದ ಬಂದ ದ್ವಿಚಕ್ರವಾಹನ ಸಂಖ್ಯೆ ಕೆಎ-02-ಇಟಿ-5684 ರ ಸವಾರ ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ದೂರುದಾರರ ತಮ್ಮ ಚಲಾಯಿಸುತ್ತಿದ್ದ  ದ್ವಿಚಕ್ರ ವಾಹನಕ್ಕೆ ಡಿಕ್ಕಿ ಪಡಿಸಿದ ಪರಿಣಾಮ, ರಾಜು ಎನ್.ಎಂ ಮತ್ತು ರಕ್ಷಿತ ರವರು ವಾಹನ ಸಮೇತ ಕೆಳಗೆ ಬಿದ್ದಾಗ ರಕ್ತಗಾಯಗಳಾಗಿರುತ್ತದೆ.

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಹೇಮಂತ್‌ ಕುಮಾರ್‌ ಬಿನ್ ಸಂಪಂಗಿ, ಕಾರಹಳ್ಳಿ, ಬಂಗಾರಪೇಟೆ ರವರ ತಂಗಿ ಕುಮಾರಿ ಪವಿತ್ರ, 24 ವರ್ಷ ರವರು ದಿನಾಂಕ 22.02.2021 ರಂದು ಬೆಳಿಗ್ಗೆ 09.00 ಗಂಟೆಗೆ ಕೋಲಾರದ ಗೋಕುಲ್ ಕಾಲೇಜಿಗೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೋದವಳು ಮನೆಗೆ  ವಾಪಸ್ಸು ಬಾರದೇ ಕಾಣೆಯಾಗಿರುತ್ತಾರೆ.

– ಸಾಧಾರಣ ಕಳ್ಳತನ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಚಂದ್ರಶೇಖರ್‌ ಬಿನ್ ವೆಂಕಟಪ್ಪ, ಐತಾಂಡಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 16.02.2021 ರಂದು ಸಂಜೆ 04.30 ಗಂಟೆಗೆ ಬಂಗಾರಪೇಟೆಯ ನಾಗರಾಜ ಖಾಸಗಿ ಆಸ್ಪತ್ರೆಯ ಮುಂಭಾಗ ಇರುವ ನಂದಿನಿ ಹಾಲಿನ ಪಾರ್ಲರ್ ಬಳಿ ಹಿರೋ ಸ್ಪ್ಲೆಂಡರ್ ದ್ವಿಚಕ್ರ ವಾಹನ ಸಂಖ್ಯೆ KA-08-H-7154 ಅನ್ನು ನಿಲ್ಲಿಸಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆಕೊಡಿಸಿಕೊಂಡು ವಾಪಸ್ಸು ಬಂದು ನೋಡಲಾಗಿ 15,000/- ರೂಗಳ ಬೆಲೆ ಬಾಳುವ ದ್ವಿಚಕ್ರ  ವಾಹನವನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ.

ಅಸ್ವಾಭಾವಿಕ ಮರಣ ಪ್ರಕರಣ :  03

ಉರಿಗಾಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಸರಸ್ವತಿ, ಪಿಟ್ಟರ್ಸ್ ಬ್ಲಾಕ್, ಉರಿಗಾಂ ರವರ ಗಂಡ ಪುಣ್ಯಮೂರ್ತಿ, 52 ವರ್ಷ ರವರು ಅತಿಯಾದ ಮದ್ಯಪಾನದ ಚಟ ಬೆಳೆಸಿಕೊಂಡಿದ್ದು,  ಕುಡಿಯಲು ಹಣ ಸಿಕ್ಕಿಲ್ಲವೆಂದು ಜೀವನದಲ್ಲಿ ಜಿಗುಪ್ಸೆಹೊಂದಿ ದಿನಾಂಕ:23.02.2021 ರಂದು ಬೆಳಿಗ್ಗೆ 10.30 ರಿಂದ 11.00 ಗಂಟೆಯ ನಡುವೆ ಮನೆಯ ಮೇಲ್ಚಾವಣಿಯ ಕಬ್ಬಿಣದ ಆಂಗಲ್ ಗೆ ಲುಂಗಿಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಪದ್ಮಾ, ವಸಂತ್‌ನಗರ, ಬೆಮೆಲ್ ನಗರ ರವರು 02 ತಿಂಗಳ ಹಿಂದೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಮಗಳು ರಾಜಲಕ್ಷ್ಮಿರವರ ಮನೆಗೆ ಹೋಗಿ ಅಲ್ಲಿಯೇ ವಾಸವಿದ್ದು, ದೂರುದಾರರ ಗಂಡ ಬಿ.ವಿ. ವೆಂಕಟಪ್ಪ, 70 ವರ್ಷ ರವರು ಬೆಮಲ್ನಗರ ವಸಂತನಗರದಲ್ಲಿರುವ ಅವರ ಮನೆಯಲ್ಲಿ ವಾಸವಿದ್ದುಕೊಂಡು ಆಗಾಗ ಅವರ ಸ್ವಂತ ಗ್ರಾಮವಾದ ಬೋಯಿಸೊಣ್ಣೇನಹಳ್ಳಿಗೆ ಹೋಗಿ ಮನೆ ಮತ್ತು ಜಮೀನುಗಳನ್ನು ನೋಡಿಕೊಂಡು ಬರುತ್ತಿದ್ದು, ದಿನಾಂಕ.22-02-2021 ರಂದು ಬೆಳಿಗ್ಗೆ 09-30 ಗಂಟೆಗೆ ಬಿ.ವಿ. ವೆಂಕಟಪ್ಪ ರವರು  ಗ್ರಾಮವಾದ ಬೋಯಿಸೊಣ್ಣೇನಹಳ್ಳಿಯಲ್ಲಿರುವ ಅವರ ಮನೆಗೆ ಹೋಗಿದ್ದು, ದೂರುದಾರರು ಮನೆಯಲ್ಲಿಲ್ಲದ ಕಾರಣ ಬಿ.ವಿ. ವೆಂಕಟಪ್ಪ ರವರು ಒಬ್ಬಂಟಿಯಾಗಿದ್ದುದ್ದರಿಂದ ಮನಸ್ಸಿಗೆ ಬೇಸರ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ಮದ್ಯಪಾನ ಸೇವನೆ ಮಾಡಿ, ಮನೆಯ ಹಾಲ್ನ ಮೇಲ್ಚಾವಣಿಗೆ ಅಳವಡಿಸಿದ್ದ ಕಬ್ಬಿಣದ ಹುಕ್ಕಿಗೆ ಹಗ್ಗದಿಂದ ನೇಣುಹಾಕಿಕೊಂಡು ಮೃತಪಟ್ಟಿರುತ್ತಾರೆ.

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಪಾರ್ವತಮ್ಮ, ಬತ್ಲಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಗಂಡ ವೆಂಕಟೇಶಪ್ಪ ಬಿನ್ ವೆಂಕಟಸ್ವಾಮಿ, 55  ವರ್ಷ ರವರು ದಿನಾಂಕ 22.02.2021 ರಂದು ರಾತ್ರಿ 9.30  ಗಂಟೆಗೆ  ಮನೆಯ ಕಡೆ ಬರುವಾಗ ಆನೆ ದಾಳಿ ಮಾಡಿದ್ದರಿಂದ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *