ದಿನದ ಅಪರಾಧಗಳ ಪಕ್ಷಿನೋಟ 24ನೇ ಡಿಸೆಂಬರ್‌ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 23.12.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಸಾಧಾರಣ ಕಳ್ಳತನ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಪ್ರಕಾಶ್ ಬಿನ್ ನಾರಾಯಣಪ್ಪ, ಕದಿರೇನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು 40,000-00 ರೂ ಬೆಲೆ ಬಾಳುವ ದ್ವಿಚಕ್ರ ವಾಹನ ಬಜಾಜ್ ಪಲ್ಸರ್ ಸಂಖ್ಯೆ ಕೆಎ-08-ಎಸ್-7187 ನ್ನು ದಿನಾಂಕ 18.12.2020 ರಂದು ಬೆಳಿಗ್ಗೆ 10.30 ಗಂಟೆಗೆ ಮಾಗೊಂದಿ ರಸ್ತೆ, ಬೆಂಡಿಗಾನಹಳ್ಳಿ ಗೇಟ್ ಬಳಿ ನಿಲ್ಲಿಸಿ, ತೋಟದಲ್ಲಿ ಕೆಲಸ ಮಾಡಿಕೊಂಡು ಬರುವಷ್ಟರಲ್ಲಿ ಯಾರೋ ಕಳ್ಳವು ದ್ವಿಚಕ್ರವಾಹನವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಮೋಸ/ವಂಚನೆ : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಮೋಸಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ದಯಾನಂದ, ತಹಶೀಲ್ದಾರ್‌, ಬಂಗಾರಪೇಟೆ ತಾಲ್ಲೂಕು ರವರು ನೀಡಿದ ದೂರಿನಲ್ಲಿ,  ದಿನಾಂಕ 15.05.2015 ರಂದು ಶ್ರೀಮತಿ ವರಲಕ್ಷ್ಮಿ ಕೋಂ ಈಶ್ವರ್, ಬೋಡೆನಹಳ್ಳಿ ಮಃ ಗುಟ್ಟೂರು ಗ್ರಾಮ, ಕಾಮಸಮುದ್ರಂ ಹೋಬಳಿ ರವರು ಪರಿಶಿಷ್ಟ ಜಾತಿಗೆ ಸೇರಿದ ಭೋವಿ ಜಾತಿ ಪ್ರಮಾಣ ಪತ್ರವನ್ನು ಶಾಲಾ ದಾಖಲಾತಿ  ಮತ್ತು ಇತರೆ  ದಾಖಲಾತಿಗಳನ್ನು ನೀಡಿ ಪಡೆದಿದ್ದು ನಂತರ ದಿನಾಂಕ 18.07.2018 ರಂದು ಹಿಂದುಳಿದ ವರ್ಗಗಳ ‘ಅ’ ಪ್ರವರ್ಗಕ್ಕೆ ಸೇರಿದ ಪಳ್ಳಿ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡಿರುತ್ತಾರೆ.

Leave a Reply

Your email address will not be published. Required fields are marked *