ದಿನದ ಅಪರಾಧಗಳ ಪಕ್ಷಿನೋಟ 24ನೇ ಅಕ್ಟೋಬರ್ 2020

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 23.10.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

ರಸ್ತೆ ಅಪಘಾತಗಳು : 01

ಉರಿಗಾಂ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಆಸ್ಟಿನ್ ಐಜಾಕ್, ಟಾಪ್‌ ಲೈನ್, ಚಾಂಪಿಯನ್‌ರೀಫ್ಸ್‌, ಕೆ.ಜಿ.ಎಫ್ ರವರು ದ್ವಿಚಕ್ರವಾಹನ ಸುಜುಕಿ ಆಕ್ಸಿಸ್-125 ಸಂಖ್ಯೆ ಕೆ.ಎ 08 ವಿ-2114 ವಾಹನದಲ್ಲಿ ರಾಬರ್ಟ್ ಸನ್ ಪೇಟೆ ಕಡೆಯಿಂದ ಎನ್.ಟಿ ಬ್ಲಾಕ್ ಮುರುಗನ ದೇವಸ್ಥಾನ  ಬಳಿ ಹೋಗುತ್ತಿರುವಾಗ, ಎದುರುಗಡೆಯಿಂದ ಎಸ್.ಎಸ್.ಎನ್ ಖಾಸಗಿ ಬಸ್ ಸಂಖ್ಯೆ ಕೆ.ಎ 11 ಎ-5666 ಅನ್ನು ಅದರ ಚಾಲಕ ಬಾಬು ಎಂಬಾತನು ಅತಿವೇಗವಾಗಿ ಮತ್ತು ನಿರ್ಲಕ್ಷ್ಯತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಪಡಿಸಿದಾಗ  ದೂರುದಾರರು ವಾಹನ ಸಮೇತ ಕೆಳಗೆ ಬಿದ್ದು ರಕ್ತಗಾಯಗಳಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ :  01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ  ಶ್ರೀಮತಿ. ಕೃಷ್ಣಾಬಾಯಿ ಕೊಂ ಮಂಜುನಾಥ, ದೊಡ್ಡಚಿನ್ನಹಳ್ಳಿ ಗ್ರಾಮ, ಬಂಗರಪೇಟೆ ತಾಲ್ಲೂಕು ರವರ ಗಂಡ ಮಂಜುನಾಥ. ಎಸ್. ಕೆ, 50 ವರ್ಷ  ರವರಿಗೆ 20 ವರ್ಷಗಳಿಂದ ಮದ್ಯಪಾನ ಸೇವನೆ ಮಾಡುವ ಅಭ್ಯಾಸವಿದ್ದು ಹಾಗೂ 5 ವರ್ಷಗಳಿಂದ ಸಕ್ಕರೆ ಖಾಯಿಲೆ ಮತ್ತು ಕಿಡ್ನಿ ತೊಂದರೆ ಇದ್ದುದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 22-10-2020 ರಂದು ರಾತ್ರಿ 11-00 ಗಂಟೆಯಲ್ಲಿ ಮಂಜುನಾಥ ರವರು ಅಜ್ಜಪನಹಳ್ಳಿ ಕ್ರಾಸ್ ನಿಂದ -ದೊಡ್ಡಚಿನ್ನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯ ಮಧ್ಯೆ ಇರುವ ನೀಲಿಗಿರಿ ತೋಪಿನ ಬಳಿ ಆಟೋದಲ್ಲಿ ವಿಷಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *