ದಿನದ ಅಪರಾಧಗಳ ಪಕ್ಷಿನೋಟ 24ನೇ ಸೆಪ್ಟೆಂಬರ್ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 23.09.2020 ರಂದು ಸಂಜೆ 5.00 ಗಂಟೆಯಿಂದ ದಿನಾಂಕ 24.09.2020 ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಜೂಜಾಟ ಕಾಯ್ದೆ : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಜೂಜಾಟ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.   ದಿನಾಂಕ. 23.09.2020  ರಂದು  ಮಧ್ಯಾಹ್ನ 3.30 ಗಂಟೆಗೆ  ಬೀರಣಕುಪ್ಪ  ಗ್ರಾಮದ ಮುಖ್ಯ ರಸ್ತೆಯಿಂದ   ಅಲ್ಲಿಕುಂಟೆ ಕದಿರೇನಹಳ್ಳಿ ಗ್ರಾಮಕ್ಕೆ  ಹೋಗುವ  ರಸ್ತೆಯ   ಪಕ್ಕದಲ್ಲಿರುವ   ಶ್ರೀ ಚಂಗಾರೆಡ್ಡಿ  ರವರ ನೀಲಗಿರಿ  ತೋಪಿನಲ್ಲಿ ಎಂ.ಕೊತ್ತೂರು ಗ್ರಾಮದ ಜಯರಾಂ, ಪ್ರಶಾಂತ್‌, ಮುನಿರಾಜು, ಬೀರನಕುಪ್ಪ ಗ್ರಾಮದ ನಾರಾಯಣಪ್ಪ, ಕಳ್ಳಿಕುಪ್ಪ ಗ್ರಾಮದ ಅಮರನಾಥ್, ಪೊಟ್ಟೇಪಲ್ಲಿ ಗ್ರಾಮದ ಅಜಯ್‌ ಕುಮಾರ್‌ ರವರು ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳ ಮೂಲಕ ಅಂದರ್- ಬಾಹರ್ ಜೂಜಾಡುತ್ತಿದ್ದವರನ್ನು ಮತ್ತು ಸ್ಥಳದಲ್ಲಿದ್ದ 4,590/- ರೂ ಹಾಗೂ 52 ಇಸ್ಪೀಟ್ ಕಾರ್ಡಗಳನ್ನು ಪಿ.ಎಸ್.ಐ ಶ್ರೀ. ಮುನಿಯಪ್ಪ ಮತ್ತು ಸಿಬ್ಬಂದಿಯವರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ :  01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಾರಾಯಣಸ್ವಾಮಿ ಬಿನ್ ವೆಂಕಟರಾಮಪ್ಪ, ಉಕ್ಕುಂದ ಗ್ರಾಮ, ಬಂಗಾರಪೇಟೆ ರವರ ಮಗಳಾದ ಸರಸ್ವತಮ್ಮ, 29 ವರ್ಷ ರವರನ್ನು 9 ವರ್ಷಗಳ ಹಿಂದೆ ತಮಿಳುನಾಡಿನ ಕ್ರಿಷ್ಣಗಿರಿ ತಾಲ್ಲೂಕು ಪುದೂರು ಗ್ರಾಮದ ವಾಸಿಯಾದ ಸತೀಶ್ ಎಂಬುವರಿಗೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದು, ಇವರಿಗೆ 2 ಹೆಣ್ಣು ಮಕ್ಕಳಿದ್ದು, 3ನೇ ಗಂಡು ಮಗು ಡೆಲಿವರಿ ಸಮಯದಲ್ಲಿ ಮಗು ತೀರಿಕೊಂಡಿದ್ದು ಅಂದಿನಿಂದ ಸರಸ್ವತಮ್ಮ ರವರು ಖಿನ್ನತೆಗೆ ಒಳಗಾಗಿ ಅಸ್ವಸ್ಥಳಾಗಿದ್ದು ಆಕೆಯನ್ನು ದೂರುದಾರರು ತಮ್ಮ ಮನೆಗೆ ಕರೆದುಕೊಂಡು ಬಂದು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು, ದಿನಾಂಕ 23.09.2020 ರಂದು ಮದ್ಯಾಹ್ನ 3-00 ಗಂಟೆಗೆ ಸರಸ್ವತಮ್ಮ ರವರು ಮನೆಯ 1ನೇ ಹಂತಸ್ಥಿನಲ್ಲಿರುವ ರೂಂ ಗೆ ಹೋಗಿ ಚಾವಣಿಗೆ ಹಾಕಿದ್ದ ಪ್ಯಾನ್ ಗೆ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *