ದಿನದ ಅಪರಾಧಗಳ ಪಕ್ಷಿನೋಟ 24ನೇ ಆಗಸ್ಟ್ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 23.08.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಕೊಲೆ ಪ್ರಯತ್ನ :  02

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ 02 ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರಾದ ಶ್ರೀ. ಕೃಷ್ಣಯ್ಯ ಬಿನ್ ಕೆಂಚಪ್ಪ, ಮೂತನೂರು ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ:22.08.2020 ರಂದು ಸಂಜೆ 5.00 ಗಂಟೆಯಲ್ಲಿ ಮೂತನೂರು ಗ್ರಾಮದ ಸರ್ವೇ ನಂ 16/ಪಿ 73 ರ ಜಮೀನಿನಲ್ಲಿ ಗಿಡ ಗಂಟಿಗಳನ್ನು ಕಟಾವು ಮಾಡುತ್ತಿದ್ದಾಗ, ದೂರುದಾರರ ಅಣ್ಣ ರಾಮಪ್ಪ, ಆತನ ಹೆಂಡತಿ ಸಂದ, ಆತನ ಮಕ್ಕಳಾದ ಪೊನ್ನಸ್ವಾಮಿ ಮತ್ತು ಚರಣ್ ರವರು ಬಂದು ದೂರುದರರನ್ನು ಕೆಟ್ಟಮಾತುಗಳಿಂದ ಬೈದು, ಈ ಜಮೀನಿನಲ್ಲಿ ಯಾಕೆ ಗಿಡ ಮರಗಳನ್ನು ಕತ್ತರಿಸುವುದು ಎಂದು ಹೇಳಿ, ಕೊಲೆ ಮಾಡುವ ಉದ್ದೇಶದಿಂದ ಕೈಗಳಿಂದ ಮತ್ತು ಮಚ್ಚಿನಿಂದ ಹೊಡೆದು ರಕ್ತ ಗಾಯ ಪಡಿಸಿರುತ್ತಾರೆ.

ದೂರುದಾರರಾದ ಶ್ರೀ. ರಾಮಪ್ಪ ಬಿನ್ ಕೆಂಚಪ್ಪ, ಮೂತನೂರು ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ಹೆಂಡತಿ ಸಂದ ರವರೊಂದಿಗೆ ದಿನಾಂಕ:22.08.2020 ರಂದು ಸಂಜೆ 4.30 ಗಂಟೆಯಲ್ಲಿ ಮೂತನೂರು ಗ್ರಾಮದ ಸರ್ವೇ ನಂ 16/ಪಿ 73 ರ ಜಮೀನಿನಲ್ಲಿ ಕಲ್ಲು-ಕಸಕಡ್ಡಿಗಳನ್ನು ತೆಗೆಯುತ್ತಿದ್ದು, ದೂರುದಾರರ ಮಗ ಚರಣ್ ರವರು ಮೇಲಿನ ತೋಟದಲ್ಲಿ ಆಟವಾಡಿಕೊಂಡಿದ್ದಾಗ, ಕೃಷ್ಣಯ್ಯ ಬಿನ್ ಕೆಂಚಪ್ಪ ರವರು ಚರಣ್ ರವರನ್ನು ಕೆಟ್ಟ ಮಾತುಗಳಿಂದ ಬೈಯುತ್ತಿದ್ದು, ದೂರುದಾರರು ಮತ್ತು ಸಂದ ರವರು ಯಾಕೆ ಚರಣ್ ರವರಿಗೆ ಬೈಯ್ಯುವುದು ಎಂದು ಕೇಳಿದ್ದಕ್ಕೆ, ಕೆಟ್ಟ ಮಾತುಗಳಿಂದ ಬೈದ್ದು, ಕೊಲೆ ಮಾಡುವ ಉದ್ದೇಶದಿಂದ ದೂರುದಾರರಿಗೆ ಮತ್ತು ಸಂದ ಹಾಗೂ ಚರಣ್ ರವರಿಗೆ ಮಚ್ಚಿನಿಂದ ಹೊಡೆದು ರಕ್ತ ಗಾಯಪಡಿಸಿ, ಪ್ರಾಣ ಬೆದರಿಕೆ ಹಾಕಿರುತ್ತಾರೆ.

– ಹಲ್ಲೆ : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ನ್ಯಾತಮ್ಮ ಕೊಂ ಓಬಯ್ಯ, ಎಂ. ಗೊಲ್ಲಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 23.08.2020 ರಂದು ಬೆಳಿಗ್ಗೆ 11.00 ಗಂಟೆಯಲ್ಲಿ ಮನೆಯ ಬಳಿ ಇದ್ದಾಗ, ಆರೋಪಿಗಳಾದ ದೂರುದಾರರ ಮಗ ರಾಮಕೃಷ್ಣ ಮತ್ತು ಮೊಮ್ಮಗ ರಜನಿಕಾಂತ್ ರವರು ಬಂದು ದೂರುದಾರರಿಗೆ ಜಮೀನಿನಲ್ಲಿ ಭಾಗಕೊಡು, ಇಲ್ಲದಿದ್ದರೆ ನಿನ್ನನ್ನು ಇಲ್ಲಿಯೇ ಸಾಯಿಸಿಬಿಡುತ್ತೇನೆಂದು ಬೆದರಿಕೆ ಹಾಕಿ, ಕೆಟ್ಟ ಮಾತುಗಳಿಂದ ಬೈದು, ಕೋಲಿನಿಂದ ಹೊಡೆದಿರುತ್ತಾರೆ.

Leave a Reply

Your email address will not be published. Required fields are marked *