ದಿನದ ಅಪರಾಧಗಳ ಪಕ್ಷಿನೋಟ 24ನೇ ಜುಲೈ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ  23.07.2020 ರಂದು

ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ಮಹಿಳೆ ಮೇಲೆ ನಡೆದ ದೌರ್ಜನ್ಯ ಪ್ರಕರಣ : 01

ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಾಯ್ದೆ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ಪಿರ್ಯಾದಿ ಶ್ರೀಮತಿ ಪರಿಮಳ ಕೋಂ ವಸಂತಕುಮಾರ್‌, ಜಾನುಗುಟ್ಟ ಗ್ರಾಮ ರವರು ೨೦೧೫ ರಲ್ಲಿ ವಸಂತಕುಮಾರ್ ರವರೊಂದಿಗೆ ಮದುವೆಯಾಗಿದ್ದು,  ಮದುವೆ ಸಮಯದಲ್ಲಿ ವರದಕ್ಷಿಣೆಯಾಗಿ ಸುಮಾರು 12 ಗ್ರಾಂ ತೂಕದ ಚಿನ್ನದ ಕತ್ತಿನ ಚೈನು, ಸುಮಾರು 05 ಗ್ರಾಂ ತೂಕದ ಚಿನ್ನದ ಉಂಗುರ, ಸುಮಾರು 25 ಗ್ರಾಂ ತೂಕದ ಚಿನ್ನದ ಬ್ರಾಸ್‌ಲೆಟ್ ಹಾಗೂ ನಗದು ಹಣ ಒಂದು ಲಕ್ಷ ರೂಪಾಯಿ ಕೊಟ್ಟು, ಮದುವೆ ವೆಚ್ಚವೆಲ್ಲ ಸುಮಾರು 10 ಲಕ್ಷ ರೂಗಳನ್ನು ಖರ್ಚು ಮಾಡಿ ಮದುವೆ ಮಾಡಿಕೊಟ್ಟಿದ್ದು ಮದುವೆಯಾದ ಸುಮಾರು ಒಂದೆರಡು ತಿಂಗಳ ಕಾಲ ಅನ್ಯೋನ್ಯವಾಗಿ ಸಂಸಾರ ಮಾಡಿಕೊಂಡಿದ್ದು ನಂತರ ಆರೋಪಿ ವಸಂತಕುಮಾರ್‍ ರವರು ನಿಮ್ಮ ತವರು ಮನೆಯವರು ನ್ಯಾಯವಾಗಿ ವರದಕ್ಷಿಣೆ ಕೊಟ್ಟಿಲ್ಲ ಬೇರೆ ಕಡೆ ಮದುವೆಯಾಗಿದ್ದರೆ ಹೆಚ್ಚಿನ ವರದಕ್ಷಿಣೆ ಕೊಡುತ್ತಿದ್ದರು ಎಂದು ಕೆಟ್ಟ ಮಾತುಗಳಿಂದ ಬೈದ್ದು ಕೈಗಳಿಂದ ಹೊಡೆದು ಕಾಲಿನಿಂದ ಒದ್ದು ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆ ನೀಡಿ ತವರು ಮನೆಯಿಂದ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಪೀಡಿಸುತ್ತಿದ್ದು,  ಅದೇ ಪಿರ್‍ಯಾದಿಯ ಅತ್ತೆ ವಿಜಯಲಕ್ಷ್ಮಿ, ನಾದಿನಿ ವನಿತಾ, ಮೈದರವರುಗಳಾದ ನವೀನ್ ಕುಮಾರ್, ಸುನೀಲ್ ಕುಮಾರ್, ಅನೀಲ್ ಕುಮಾರ್ ರವರು ಸಹ ವರದಕ್ಷಿಣೆ ತಂದಿಲ್ಲವೆಂದು ಕೆಟ್ಟ ಮಾತುಗಳಿಂದ ಬೈದ್ದು ಪೀಡಿಸುತ್ತಿದ್ದು, ದಿನಾಂಕ 23.07.2020 ರಂದು ದೂರು ನೀಡಲು ಪಿರ್ಯಾದಿಯ ತಾಯಿ ಗೌರಮ್ಮ. ತಮ್ಮ ಪಿಲಿಪ್ ಕುಮಾರ್, ದೊಡ್ಡಭಾವ ಶ್ರೀನಿವಾಸ್, ಚಿಕ್ಕಭಾವ ಪ್ರತಾಪ್ ರವರು ಕಾಮಸಮುದ್ರಂ ರೈಲ್ವೆ ನಿಲ್ದಾಣದ ಬಳಿ ಇದ್ದಾಗ ಆರೋಪಿಗಳು ಪಿರ್‍ಯಾದಿ ಹಾಗೂ ಪಿರ್‍ಯಾದಿ ಜೊತೆ ಇದ್ದವರ ಮೇಲೆ ಹಲ್ಲೆ ಮಾಡಿರುತ್ತಾರೆ.

 

Leave a Reply

Your email address will not be published. Required fields are marked *