ದಿನದ ಅಪರಾಧಗಳ ಪಕ್ಷಿನೋಟ 24ನೇ ಏಪ್ರಿಲ್ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 23.04.2020 ರಂದು  ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 

– ಕನ್ನಕಳುವು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಕನ್ನಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವೇಣುಗೋಪಾಲ್‌ ಬಿನ್ ನಾರಾಯಣಪ್ಪ, ಪಿಸಿ ಎಕ್ಸ್‌‌ಟೆಂಷನ್‌, ಕೋಲಾರ ರವರು ಕುಪ್ಪಂ ವಿ ಕೋಟೆ ಮುಖ್ಯ ರಸ್ತೆಯಲ್ಲಿರುವ  ಗಣೇಶ ಬಾರ್ ಅಂಡ್  ರೆಸ್ಟೋರೆಂಟ್ ನ್ನು ಕೋಲಾರದ ವಾಸಿ  ಶ್ರೀನಿವಾಸ ಮೂರ್ತಿ ರವರ ಬಳಿ  2019 ನೇ ಸಾಲಿನಲ್ಲಿ  ಪಡೆದುಕೊಂಡು  ನಿರ್ವಹಣೆ  ಮಾಡಿಕೊಂಡು ಬರುತ್ತಿದ್ದು, ಲಾಕ್ ಡೌನ್ ಆದ್ದರಿಂದ  ಬಾರ್ ಅಂಡ್  ರೆಸ್ಟೋರೆಂಟ್ ನ್ನು  ಮುಚ್ಚಿದ್ದು,  ದಿನಾಂಕ 21.03.2020 ರಿಂದ  ದಿನಾಂಕ 22.04.2010 ರಂದು ರಾತ್ರಿ 8.00 ಗಂಟೆ ಮದ್ಯೆ ಯಾರೋ ದುಷ್ಕರ್ಮಿಗಳು  ಬಾರ್ ಅಂಡ್ ರೆಸ್ಟೋರೆಂಟ್ ನ ಶೆಟರ್ ಗೆ ಹಾಕಿದ್ದ  ಬೀಗವನ್ನು  ಯಾವುದೋ ಆಯುಧದಿಂದ ಹೊಡೆದು, ಅಂಗಡಿ ತೆರೆದು ಹಾಗೇ ಬಿಟ್ಟು  ಹೋಗಿದ್ದು, ಬಾರ್ ನಲ್ಲಿ ಏನೇನು ಕಳುವಾಗಿದೆ  ಎಂದು ಗೊತ್ತಿರುವುದಿಲ್ಲವೆಂದು ನೀಡಿರುವ ದೂರು.

ಅಸ್ವಾಭಾವಿಕ ಮರಣ ಪ್ರಕರಣ : 02

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಜಾಕಿರ್‌ ಖಾನ್‌ ಬಿನ್ ಖಲೀಂವುಲ್ಲಾ ಖಾನ್‌, 1ನೇ ಬ್ಲಾಕ್, ಬೇತಮಂಗಲ ರವರ ತಮ್ಮ ಆದೀಲ್ ಖಾನ್, 35 ವರ್ಷ ರವರು ಮಾನಸಿಕ ಆಸ್ವಸ್ಥನಾಗಿದ್ದು, ದಿನಾಂಕ 19-04-2020 ರಂದು ಸಂಜೆ 6.00 ಗಂಟೆಯಲ್ಲಿ ಆದೀಲ್ ಖಾನ್ ರವರು ಮನೆಯಿಂದ ಹೊರಹೋಗಿದ್ದು, ಕತ್ತಲಿನಲ್ಲಿ ಮನೆಗೆ ಬರಲು ಬೇತಮಂಗಲದಿಂದ ಮನೆಗೆ ನೆಡೆದುಕೊಂಡು ಕಾಲುದಾರಿಯಲ್ಲಿ ಬರುವಾಗ ಕಾಲುದಾರಿಯ ಪಕ್ಕದಲ್ಲಿದ್ದ ಅಣ್ಣಾಮಲೈ ರವರ ಬಾವಿಯಲ್ಲಿ ಆಕಸ್ಮಿಕವಾಗಿ ಬಿದ್ದು ಮೃತಹೊಂದಿರುತ್ತಾನೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಪಿರ್ಯಾದಿದಾರರಾದ ಅಶೋಕ್, ಕೇತಗಾನಹಳ್ಳಿ ಬಂಗಾರಪೇಟೆ ರವರ ಅಕ್ಕ ಸುಮಿತ್ರ, ದೇಶಿಹಳ್ಳಿ ವಾಸಿ ರವರು ತಮ್ಮ ನಾಲ್ಕು ಜನ ಹೆಣ್ಣು ಮಕ್ಕಳನ್ನು ಕರೆದುಕೊಂಡು ದೇಶಿಹಳ್ಳಿಯಲ್ಲಿರುವ ಗಂಗಮ್ಮ ದೇವಾಲಯಕ್ಕೆ ಪೂಜೆಗೆ ಹೋಗಿ ಪೂಜೆ ಸಲ್ಲಿಸಿಕೊಂಡು, ಗಂಗಮ್ಮ ದೇವಾಲಯದ ಬಳಿ ನಿಂಬೆಹಣ್ಣು ದೀಪಗಳನ್ನು ಹಚ್ಚಿದ್ದು,  ಸುಮಿತ್ರ ರವರ ಮೂರನೇ ಮಗಳಾದ ನಯನಾ, 05 ವರ್ಷದ ಬಾಲಕಿ  ಆಟವಾಡುತ್ತಿದ್ದಾಗ, ನಿಂಬೆಹಣ್ಣಿನ ದೀಪದ ಬೆಂಕಿಯು ನಯನಾ ಧರಿಸಿದ್ದ ಫ್ರಾಕ್ ಗೆ ಆಕಸ್ಮಿಕವಾಗಿ ಅಂಟಿಕೊಂಡಿದ್ದರಿಂದ ಸುಟ್ಟುಗಾಯಗಳಾಗಿದ್ದು, ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು,  ದಿನಾಂಕ 23.04.2020 ರಂದು ಬೆಳಗಿನ ಜಾವ 02.30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ನಯನಾ ರವರು ಮೃತಪಟ್ಟಿರುತ್ತಾರೆ.

 

Leave a Reply

Your email address will not be published. Required fields are marked *