ದಿನದ ಅಪರಾಧಗಳ ಪಕ್ಷಿನೋಟ 24ನೇ ಫೆಬ್ರವರಿ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:23.02.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 

– ಹಲ್ಲೆ : 02

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಪ್ರಕಾಶ್‌ ಬಿನ್ ಮುನಿವೆಂಕಟಸ್ವಾಮಿ, ಮುತ್ತೇನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರಿಗೂ ಮತ್ತು ಸೊಂಟಿಗಾನಹಳ್ಳಿ ಗ್ರಾಮದ ವಾಸಿ ನಾರಾಯಣಪ್ಪ ರವರಿಗೂ ಜಮೀನಿನ ವಿಚಾರದಲ್ಲಿ ವಿವಾದಗಳಿದ್ದು, ದಿನಾಂಕ:23.02.2020 ರಂದು ಸಂಜೆ 5-00 ಗಂಟೆಯಲ್ಲಿ ಮರಾಠಹೊಸಹಳ್ಳಿಯ ಹನುಮಂತ ರವರ ಜಮೀನಿನ ಬಳಿ ದೂರುದಾರರು ಬರುತ್ತಿದ್ದಾಗ, ನಾರಾಯಣಪ್ಪ ರವರು ದೂರುದಾರರಿಗೆ ಕೆಟ್ಟಮಾತುಗಳಿಂದ ಬೈದು, ಕಲ್ಲು ಮತ್ತು ದೊಣ್ಣೆಯಿಂದ ಹೊಡೆದು ಗಾಯಪಡಿಸಿರುತ್ತಾನೆ.

ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸರವಣ, ವೆಸ್ಲಿನ್‌ ಬ್ಲಾಕ್, ಉರಿಗಾಂ, ಕೆ.ಜಿ.ಎಫ್ ರವರು ದಿನಾಂಕ:23.02.2020 ರಂದು ಮದ್ಯಾಹ್ನ 3.00 ಗಂಟೆಯಲ್ಲಿ ಕೃಷ್ಣಾವರಂ ಕಡೆಗೆ ಹೋಗುವ ಸ್ಮಶಾನದ ಕಡೆಯಿಂದ ಸ್ಕೂಲ್ ಆಫ್ ಮೈನ್ಸ್ ಕಡೆಗೆ ಹೋಗುವ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ, ಗೌತಮ್, ಕಾರ್ತಿಕ್ ಮತ್ತು ಸ್ವಿಮ್ಮಿಂಗ್ ಭಾತ್ ಲೈನ್ ವಾಸಿಯೊಬ್ಬ ದ್ವಿಚಕ್ರವಾಹನದಲ್ಲಿ ದೂರುದಾರರ ಬಳಿ ಬಂದು ಯಾಕೋ ಗುರಾಯಿಸುತ್ತೀಯಾ ಎಂದು ಕೇಳಿ  ಕೈಗಳಿಂದ ಮತ್ತು ಚಾಕುವಿನಿಂದ ಹೊಡೆದು ರಕ್ತ ಗಾಯಮಾಡಿರುತ್ತಾರೆ.

Leave a Reply

Your email address will not be published. Required fields are marked *