ದಿನದ ಅಪರಾಧಗಳ ಪಕ್ಷಿನೋಟ 24ನೇ ಡಿಸೆಂಬರ್‌ 2019

 – ಸುಲಿಗೆ :  01

ಚಾಂಪಿಯನ್‌ರೀಫ್ಸ್‌ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ತಿಮ್ಮರಾಯಪ್ಪ ಬಿನ್ ಚಿಕ್ಕವೆಂಕಟರಾಮಪ್ಪ, ಮಾರಿಕುಪ್ಪಂ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ಆಟೋರಿಕ್ಷಾ ಸಂಖ್ಯೆ ಕೆ.ಎ-08-7559 ನ್ನು ದಿನಾಂಕ:23-12-2109 ರಂದು ರಾತ್ರಿ 9-30 ಗಂಟೆಯಲ್ಲಿ ಆಂಡ್ರಸನ್ ಪೇಟೆಯಿಂದ  ಗೌತಮ್ ನಗರದ 7 ನೇ ಕ್ರಾಸ್ ಬಳಿ ಹೋಗುತ್ತಿದ್ದಾಗ, ಸುಮಾರು 20-23 ವಯಸ್ಸಿನ ನಾಲ್ಕು ಗಂಡಸರು ಆಟೋ ನಿಲ್ಲಿಸಿ, ಆಟೋ ಹತ್ತಿ ಶಿವರಾಜ ನಗರದಿಂದ ಕೆ.ಎಸ್.ಆರ್.ಟಿ.ಸಿ. ಡಿಪ್ಪೋ ಕಡೆಗೆ ಹೋಗುವ ಮಣ್ಣಿನ ರಸ್ತೆಯಲ್ಲಿರುವ ಮಾರಿಯಮ್ಮ ದೇವಸ್ಥಾನದ ಬಳಿ ರಾತ್ರಿ 9-45 ಗಂಟೆಗೆ ಕರೆದುಕೊಂಡು ಹೋಗಿ, ಆಟೋವನ್ನು ನಿಲ್ಲಿಸಿ ಆಟೋದಲ್ಲಿದ್ದ ನಾಲ್ಕು ಜನರ ಪೈಕಿ ಒಬ್ಬ ಆಸಾಮಿ ಆಟೋದಿಂದ ಕೆಳಗೆ ಇಳಿದು ದೂರುದಾರರ ಮುಖಕ್ಕೆ  ಕೈಯಿಂದ ಗುದ್ದಿದ್ದು, ಇಬ್ಬರು ದೂರುದಾರರ ಕೈಗಳನ್ನು ಮತ್ತು ಕುತ್ತಿಗೆಯನ್ನು ಹಿಡಿದುಕೊಂಡಿದ್ದು, ಇನ್ನೊಬ್ಬ ವ್ಯಕ್ತಿ ದೂರುದಾರರ ಜೇಬಿಗೆ ಕೈ ಹಾಕಿ 1,500/- ರೂಗಳನ್ನು ಕಿತ್ತುಕೊಂಡಿದ್ದು, ದೂರುದಾರರು ಬಿಡಿಸಿಕೊಳ್ಳುವ ಪ್ರಯತ್ನದಲ್ಲಿ ಆಟೋದಿಂದ ಕೆಳಗೆ ಬಿದ್ದಾಗ ನಾಲ್ಕು ಜನರು ದೂರುದಾರರನ್ನು ಹಿಡಿದುಕೊಂಡು, ಕಾಲುಗಳಿಂದ ಒದ್ದು, ಶರ್ಟ್ ಜೇಬಿನಲ್ಲಿದ್ದ ಮೊಬೈಲ್ ಅನ್ನು ಕಿತ್ತುಕೊಂಡಿರುತ್ತಾರೆ. ದೂರುದಾರರು ಆರೋಪಿಗಳಿಂದ ತಪ್ಪಿಸಿಕೊಂಡು ಇ.ಡಿ.ಆಸ್ಪತ್ರೆ ಕಡೆ ಓಡಿ ಹೋಗಿ ಸ್ವಲ್ಪ ಸಮಯದ ನಂತರ ಹಿಂತಿರುಗಿ ಹೋಗಿ ನೋಡಿದಾಗ ಆರೋಪಿಗಳು ದೂರುದಾರರ ಆಟೋವನ್ನು ಚಲಾಯಿಸಿಕೊಂಡು ಹೋಗಿರುತ್ತಾರೆ.

 

ಹಲ್ಲೆ : 02

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮನಮೋಹನ್‌ ಬಿನ್ ಸುಬ್ರಮಣಿ, ಡಬ್ಲ್ಯೂ.ಟಿ ಬ್ಲಾಕ್, ಚಾಂಪಿಯನ್‌ರೀಫ್ಸ್‌, ಕೆ.ಜಿ.ಎಫ್ ರವರು ದಿನಾಂಕ 14.12.2019 ರಂದು ಬೆಳಿಗ್ಗೆ 10.30 ಗಂಟೆಯಲ್ಲಿ ನೇರೆಳೆಕೆರೆ  ದೇವಾಲಯಕ್ಕೆ ಬಂದಿದ್ದಾಗ ಅಲ್ಲಯೇ ಇದ್ದ ಸೌಂದರ್ ರಾಜ್ ರವರು ಏಕಾಏಕಿ ದೂರುದಾರರನ್ನು ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಗುದ್ದಿ ಕೆಳಗೆ ತಳ್ಳಿ ಕಾಲುಗಳಿಂದ ಒದ್ದು, ಪ್ರಾಣ ಬೆದರಿಕೆ ಹಾಕಿರುತ್ತಾರೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸುಂದರ್‌ರಾಜ್‌ ಬಿನ್ ಗೋವಿಂದರಾಜ್‌, ಡಬ್ಲ್ಯೂ.ಟಿ ಬ್ಲಾಕ್, ಚಾಂಪಿಯನ್‌ರೀಫ್ಸ್‌, ಕೆ.ಜಿ.ಎಫ್ ರವರು ದಿನಾಂಕ 14.12.2019 ರಂದು ಬೆಳಿಗ್ಗೆ 10.30 ಗಂಟೆಯಲ್ಲಿ ನೇರೆಳೆಕೆರೆ  ದೇವಾಲಯದ ಬಳಿ ಇದ್ದಾಗ, ಮನಮೋಹನ್ ರವರು ಏಕಾಏಕಿ ದೂರುದಾರರಿಗೆ ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಹೊಡೆದಿರುತ್ತಾರೆ.

 

ಅಸ್ವಾಭಾವಿಕ ಮರಣ ಪ್ರಕರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸಂತೋಷ್ ಬಿನ್ ಮೂರ್ತಿ, ಶಿವರಾಜನಗರ, ಬಂಗಾರಪೇಟೆ ರವರು ನೀಡಿದ ದೂರಿನಲ್ಲಿ,  ಸುಮಾರು 45 ರಿಂದ 50 ವರ್ಷ ವಯಸ್ಸುಳ್ಳ ಯಾರೋ ಒಬ್ಬ ಅನಾಮಧೇಯ ಹೆಂಗಸು ಈಗ್ಗೆ ಸುಮಾರು ದಿನಗಳಿಂದ ಬಂಗಾರಪೇಟೆ ಪಟ್ಟಣದ ಅಂಗಡಿಗಳ ಬಳಿ ಬಿಕ್ಷೆಯನ್ನು ಬೇಡಿಕೊಂಡು ಇರುತ್ತಿದ್ದು, ಯಾವುದೋ ಖಾಯಿಲೆಯಿಂದ ನರಳಿ/ ಊಟವಿಲ್ಲದೇ ಸುಸ್ತಾಗಿ ದಿನಾಂಕ 22.12.2019 ರಂದು ಸಂಜೆ 5.30 ಗಂಟೆಯಲ್ಲಿ ಹುಣಸನಹಳ್ಳಿ ಕಡೆಯಿಂದ ಅತ್ತಿಗಿರಿಕೊಪ್ಪ ಗ್ರಾಮದ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ನಿಶ್ಯಕ್ತಳಾಗಿ ಮಲಗಿದ್ದು, ಆಕೆಯನ್ನು ಚಿಕಿತ್ಸೆಗಾಗಿ ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೇ ರಾತ್ರಿ 9.15 ಗಂಟೆಗೆ ಮೃತಪಟ್ಟಿರುತ್ತಾರೆ.

 

Leave a Reply

Your email address will not be published. Required fields are marked *