ದಿನದ ಅಪರಾಧಗಳ ಪಕ್ಷಿನೋಟ 23 ನೇ ಜೂನ್‌ 2019

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:22.06.2019 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

–ಕನ್ನ ಕಳುವು : 01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಮನೆ ಕಳವು ಪ್ರಕಣ ದಾಖಲಾಗಿರುತ್ತದೆ. ದಿನಾಂಕ 21.06.2019 ರಂದು ದೂರುದಾರರ ಹೆಂಡತಿಯಾದ ವರಲಕ್ಷ್ಮಿರವರು ಚಿಕ್ಕಕಂಬಳಿ ಗ್ರಾಮದ ವಾಸದ ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದು, ಮದ್ಯಾಹ್ನ ಮನೆಗೆ ಬಂದು ನೋಡಲಾಗಿ ಮನೆಯ ಬಾಗಿಲು ತೆಗೆದಿದ್ದು ಮನೆಯಲ್ಲಿದ್ದ ಗಾಡ್ರೇಜ್ ಬೀರುವನ್ನು ಯಾರೋ ಕಳ್ಳರು ನಗದು ಹಣ 19,500/- ರೂ, ಮತ್ತು 8 ಗ್ರಾಂ ತೂಕದ 2 ಜೊತೆ ಚಿನ್ನದ ಕಿವಿ ಓಲೆಗಳು, 4 ಗ್ರಾಂ ತೂಕದ 2 ಉಂಗುರಗಳು, 4 ಗ್ರಾಂ ತೂಕದ 15 ಹಳೇಯ ಚೈನ್ ಪೀಸುಗಳು, 1 ಗ್ರಾಂ ತೂಕದ 2 ಮೂಗನತ್ತುಗಳು, ಎರಡು ಜೊತೆ ಬೆಳ್ಳಿ ಕಾಲು ಚೈನ್ ಗಳು, ಇತರೆ ಬೆಳ್ಳಿ ಸಾಮಾನುಗಳು ಇವುಗಳ ಬೆಲೆ ರೂ 69,500/- ಗಳ ಬಾಳುವುದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ

– ಸಾಧಾರಣ ಕಳ್ಳತನ :01

ಬೆಮೆಲ್‌ ನಗರ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ.20-06-2019 ರಂದು ದೂರದಾರರಾದ ಶ್ರೀ ಶ್ರೀಕುಮಾರ್‌ ಚಾಂಪಿಯನ್‌ ರೀಫ್ಸ್ ರವರು ನೀಡಿದ ದೂರಿನಲ್ಲಿ ದೂರುದಾರರು ಬೆಮಲ್ ಕಾರ್ಖಾನೆಯಲ್ಲಿ 1ನೇ ಪಾಳಿ ಕರ್ತವ್ಯಕ್ಕೆ ಹೋಗಲು ಬೆಮಲ್ ಕಾರ್ಖಾನೆಯ ಮೈನ್ ಗೇಟ್ ಬಳಿ ಇರುವ ಸೈಕಲ್ ಸ್ಟ್ಯಾಂಡ್ ನಲ್ಲಿ ತನ್ನ ಹೀರೋ ಫ್ಯಾಷನ್ ಪ್ರೊ ದ್ವಿಚಕ್ರ ವಾಹನ ಸಂಖ್ಯೆ ಕೆ.ಎ.08-ಯು.0416, ENGINE NO. HA10ETFHA77179 CHASIS NO. MBLHA10BJFHA54607 ನ್ನು ನಿಲ್ಲಿಸಿ ಕೆಲಸಕ್ಕೆ ಹೋಗಿದ್ದು, ಮಧ್ಯಾಹ್ನ ಸುಮಾರು 3-05 ಗಂಟೆಗೆ ಕೆಲಸ ಮುಗಿಸಿಕೊಂಡು ಸೈಕಲ್ ಸ್ಟ್ಯಾಂಡ್ ಗೆ ಬಂದು ನೋಡಲಾಗಿ ತನ್ನ ದ್ವಿಚಕ್ರ ವಾಹನವನ್ನು ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ದ್ವಿಚಕ್ರ ವಾಹನದ ಬೆಲೆ ಸುಮಾರು 20,000/- ರೂ ಬಾಳುವುದಾಗಿರುತ್ತೆ.

–ರಸ್ತೆ ಅಪಘಾತಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.ದಿನಾಂಕ-22-06-2019 ರಂದು ದೂರುದಾರರಾದ ನಿಖಿಲ್‌ ರವರ ತಾತ ರಾಮಕೃಷ್ಣಪ್ಪ ರವರು ಅವರ ದ್ವಿಚಕ್ರ ವಾಹನ SUPER XL NO-KA-08-X-2654 ರಲ್ಲಿ ದೂರುದಾರರನ್ನು ಹಿಂಬದಿಯಲ್ಲಿ ಕುಳ್ಳರಿಸಿಕೊಂಡು ಗೋಪೇನಹಳ್ಳಿ ಗ್ರಾಮಕ್ಕೆ ಹೋಗಲು ಸುಂದರಪಾಳ್ಯ -ಗೋಪೆನಹಳ್ಳಿ ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದಾಗ ಆರೋಪಿ TATA ALTRA NO- AP 03 TK 0272 ನ ಟೆಂಪೋಚಾಲಕನು ಅತಿವೇಗ ಮತ್ತು ಅಜಾಗೂರೂಕತೆ ಯಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಪಡಿಸಿದ್ದರಿಂದ ದೂರುದಾರರು ಮತ್ತು ಅವರ ತಾತ ವಾಹನ ಸಮೇತ ಕೆಳಗೆ ಬಿದ್ದು ರಕ್ತ ಗಾಯಗಳಾಗಿರುತ್ತದೆ.

–ಅಪಹರಣ : 01

ಆಂಡ್ರಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ 17.06.2019 ರಂದು ದೂರುದಾರರಾದ ಮುನಿರತ್ನಂ ಬಾಣಗೇರಿ ಗ್ರಾಮ ರವರು ನೀಡಿದ ದೂರಿನಲ್ಲಿ ದೂರುದಾರ ಮಗ ರೋಹಣ್‌ 13 ವರ್ಷ ರವರನ್ನು ಅವರ ಗ್ರಾಮದಿಂದ ದ್ವಿಚಕ್ರವಾಹನದಲ್ಲಿ ಕರೆದುಕೊಂಡು ಬಂದು ಬೆಳಿಗ್ಗೆ 8.20 ಗಂಟೆಗೆ ಆಂಡ್ರಸನ್‌ಪೇಟೆಯ ಕೆ.ಎಸ್.ಆರ್.ಟಿ.ಸಿ ಬಸ್ ಹತ್ತಿಸಿ ಶಾಲೆಗೆ ಕಳುಹಿಸಿದ್ದು. ಮನೆಗೆ ಬರಬೇಕಾದ ದೂರುದಾರರ ಮಗ ಮನೆಗೆ ವಾಪಸ್ಸು ಬರಲಿಲ್ಲವೆಂದು ಶಾಲೆಯ ಮುಖ್ಯಸ್ಥರಿಗೆ ಸಂಪರ್ಕಿಸಿ ವಿಚಾರ ಮಾಡಲಾಗಿ ನಿಮ್ಮ ಮಗ ಶಾಲೆಗೆ ಬಂದಿಲ್ಲವೆಂದು ತಿಳಿಸಿದರು. ಯಾರೋ ಯಾವುದೋ ಕಾರಣಕ್ಕೆ ಮಗನನ್ನು ಅಪಹರಿಸಿರುತ್ತಾರೆ.

–ಇತರೆ :01

ಆಂಡ್ರಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ಅಕ್ರಮ ಮರಳು ಸಾಗಿಸುತ್ತಿದ್ದ ರವರ ಮೇಲೆ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ 17.06.2019 ರಂದು ದೂರುದಾರರಾದ ರಾಬರ್ಟ್‌‌ಸನ್‌‌ಪೇಟೆ ಸಿಪಿಐ ರವರು ದಿನಾಂಕ 22-06-2019 ರಂದು ರಾತ್ರಿ 08-00 ಗಂಟೆಗೆ ಆಂಡ್ರಸನಪೇಟೆ ಪೊಲೀಸ್ ಠಾಣೆಯ ಪಿ.ಸಿ 219 ಶ್ರೀ ಮಂಜುನಾಥ, ಕೆ.ಜಿ.ಎಫ್ ಡಿ.ಸಿ.ಐ.ಬಿ ಘಟಕದ ಸಿಬ್ಬಂದಿಯವರಾದ ಹೆಚ್.ಸಿ 89 ರಮೇಶ್ ಮತ್ತು ಹೆಚ್.ಸಿ 68 ಶ್ರೀ ಚಂದ್ರಶೇಖರ್ ರವರುಗಳೊಂದಿಗೆ ಆಂಡ್ರಸನಪೇಟೆ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಗಸ್ತಿಗೆ ಹೊರಟು ಅಲಿಕಲ್ಲು, ಕುರೂರು, ಚೊಕ್ಕರಬಂಡೆ ಕಡೆ ಗಸ್ತು ಮಾಡಿಕೊಂಡು ಪೂಜಾರ್ಲಹಳ್ಳಿ ಗ್ರಾಮದ ಬಳಿ ಬಂದಾಗ ಕೆ.ಜಿ.ಎಫ್-ಶಾಂತಿಪುರಂ ರಸ್ತೆಯಲ್ಲಿ ರಾತ್ರಿ ಸುಮಾರು 08-45 ಗಂಟೆಯಲ್ಲಿ ಈ ಕೇಸಿನ ಆರೋಪಿ 01 ರವರು ಒಂದು ಟಿಪ್ಪರ್ ಲಾರಿ ಸಂಖ್ಯೆ KA-08, 7029 ನಲ್ಲಿ ಮರಳನ್ನು ಲೋಡ್ ಮಾಡಿಕೊಂಡು ಕೆ.ಜಿ.ಎಫ್ ಕಡೆಗೆ ಬರುತ್ತಿದ್ದು ಅದನ್ನು ದೂರುದಾರರು ಮತ್ತು ಸಿಬ್ಬಂದಿಯವರು ತಡೆದು ನಿಲ್ಲಿಸಿ ಚೆಕ್ ಮಾಡಿದಾಗ ಟಿಪ್ಪರ್ ಲಾರಿ ತುಂಬಾ ಮರಳು ಇದ್ದುದು ಕಂಡು ಬಂದು, ಆರೋಪಿಯ ಹೆಸರು, ವಿಳಾಸ ಕೇಳುತ್ತಾ, ಮರಳನ್ನು ಟಿಪ್ಪರ್ ಲಾರಿಯಲ್ಲಿ ಸಾಗಿಸಲು ನಿನ್ನ ಬಳಿ ಯಾವುದಾದರೂ ಪರವಾನಿಗೆ, ವಗೈರೆ ಇದೆಯೇ ಎಂದು ಕೇಳಲಾಗಿ, ಆರೋಪಿ ರವಿ ಮತ್ತು ಲಾರಿ ಮಾಲಿಕರು ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು, ಈ ಮರಳನ್ನು ಅಲಿಕಲ್ಲು ಗ್ರಾಮದ ಕೆರೆಯ ಬಳಿಯಿಂದ ತುಂಬಿಸಿಕೊಂಡು ಮಾರಾಟ ಮಾಡಲು ಹೋಗುತ್ತಿದ್ದುದಾಗಿ ತಿಳಿಸಿರುತ್ತಾನೆ. ಲಾರಿಚಾಲಕ ಮತ್ತು ಮಾಲೀಕರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಂಡಿರುತ್ತಾರೆ.

–ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 02

ಬೆಮೆಲ್‌ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣೆಯಾಗಿರುವ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಚಿನ್ನಪ್ಪಯ್ಯ ವಿಜಯನಗರ ಬೆಮೆಲ್‌ ರವರು ನೀಡಿದ ದೂರಿನಲ್ಲಿ ದೂರುದಾರರ ಹೆಂಡತಿ ಎಂ. ಅಂಜಲಿ ರವರು ದಿನಾಂಕ.22-06-2019 ರಂದು ಬೆಳಗಿನ ಜಾವ ಸುಮಾರು 05-00 ಗಂಟೆಯಲ್ಲಿ ಅವರ 2ನೇ ಮಗ ನಿರಂಜನ್ 5 ವರ್ಷ ರವರನ್ನು ಕರೆದುಕೊಂಡು ಎಲ್ಲಿಯೋ ಹೊರಟು ಹೋಗಿರುತ್ತಾರೆ.

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣೆಯಾಗಿರುವ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಚಂದ್ರಪ್ಪ ಕೂಲೂರು ಗ್ರಾಮ ರವರು ನೀಡಿದ ದೂರಿನಲ್ಲಿ ದಿನಾಂಕ:-18.06.2019 ರಂದು ತೋಟದ ಬಳಿ ಕೆಲಸಕ್ಕೆ ಹೋಗಿ ಮನೆಗೆ ಬಂದು ನೋಡಲಾಗಿ ತನ್ನ ಪತ್ನಿ ಶಿರಿಷಾ ಮತ್ತು ತನ್ನ 2 ವರ್ಷದ ಮಗನಾದ ತೇಜ ರವರು ಮನೆಯಲ್ಲಿ ಕಾಣಿಸದೇ ಇದ್ದು ತಮ್ಮ ಎಲ್ಲಾ ನೆಂಟರ ಮನೆಗಳಲ್ಲಿ ಹುಡುಕಾಡಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಕಾಣೆಯಾದ ತನ್ನ ಪತ್ನಿಯಾದ ಶಿರಿಷಾ ಮತ್ತು ಮಗನಾದ ತೇಜ ರವರನ್ನು ಹುಡುಕಿಕೊಡಲು ಕೋರಿರುತ್ತಾರೆ.

–ಅಸ್ವಾಭಾವಿಕ ಮರಣ ಪ್ರಕರಣ : 01

ರಾಬರ್ಟ್‌‌ಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ.22.06.2019 ರಂದು ದೂರುದಾರರಾದ ಶ್ರೀ. ಏಜೇಶ್‌ಪಾಷ ಪಾರಂಡಹಳ್ಳಿ ಗ್ರಮರವರು ನೀಡಿದ ದೂರಿನಲ್ಲಿ ಫಯಾಜ್ ಪಾಷ@ಫಯಾಜ್ 36 ವರ್ಷ ರವರು ಜೀವನದಲ್ಲಿ ಜಿಗುಪ್ಸೆಗೊಂಡು ವಾಸದ ಮನೆಯಲ್ಲಿ ತರಾಯಿಗೆ ಸೀರೆಯಿಂದ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ,

Leave a Reply

Your email address will not be published. Required fields are marked *