ದಿನದ ಅಪರಾಧಗಳ ಪಕ್ಷಿನೋಟ 23 ನೇ ಜೂನ್‌ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿದಿನಾಂಕ  22.06.2020 ರಂದು ದಾಖಲಾಗಿರುವಅಪರಾಧಪ್ರಕರಣಗಳವಿವರಗಳು.

 

– ಹಲ್ಲೆ :  01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ- 22-06-2020 ರಂದು ದೂರುದಾರರಾದ ಶ್ರೀ. ನಾಗರಾಜ್‌ ಬಿನ್‌ ವೆಂಕಟೇಶಪ್ಪ ಐಯಪಲ್ಲಿ ಗ್ರಾಮ ರವರು  ನೀಡಿದ ದೂರಿನಲ್ಲಿ ದೂರುದಾರರು ಮತ್ತು ಆರೋಪಿ ಗೀತಾ ರವರಿಗೆ ಸಂಸಾರಿಕ ವಿಚಾರದಲ್ಲಿ ಗಲಾಟೆಗಳು ಆಗಿದ್ದು, ಇದೇ ವಿಚಾರವಾಗಿ ಆರೋಪಿ ರವರು ಅವರ ಸ್ವಂತ ಗ್ರಾಮವಾದ  ಮಾಲೂರು ತಾಲ್ಲೂಕು ಮಾಸ್ತಿ ಹೋಬಳಿ ನಟೋರಹಳ್ಳಿ ಗ್ರಾಮಕ್ಕೆ ಹೊರಟು ಹೋಗಿರುತ್ತಾರೆ. ದೂರುದಾರರು ದಿನಾಂಕ 25-05-2020 ರಂದು ಕೆಲಸಕ್ಕೆ ಹೋಗಿದ್ದಾಗ ಆರೋಪಿಗಳು ದೂರುದಾರರ ಮನೆಗೆ ಬಂದು ತಂದೆ ವೆಂಕಟೇಶಪ್ಪ ರವರನ್ನು ಬೈದು, ಕೈಗಳಿಂದ ಹೊಡೆದು, ಮೈನೋವುಂಟು ಮಾಡಿರುತ್ತಾರೆಂದು ದೂರು.

Leave a Reply

Your email address will not be published. Required fields are marked *