ದಿನದ ಅಪರಾಧಗಳ ಪಕ್ಷಿನೋಟ 23 ನೇ ಜನವರಿ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:22.01.2020 ರಂದು    ದಾಖಲಾಗಿರುವ   ಅಪರಾಧ ಪ್ರಕರಣಗಳ ವಿವರಗಳು.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು :01

ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ದೂರುದಾರರಾದ ಮುರಳಿಧರ ರಾವ್ , ಕಾಮಸಮುದ್ರ ವಾಸ ರವರ ತಂಗಿಯ ಮಗಳಾದ ಕು.ಹರಿತಾ ಬಿನ್ ದಶರಥರಾವ್, ವಯಸ್ಸು 20 ವರ್ಷ ರವರು ಪ್ರಥಮ ಪಿ.ಯು.ಸಿ ವರೆಗೆ ವ್ಯಾಸಂಗ ಮಾಡಿ ಮನೆಯಲ್ಲಿದ್ದು ,ದಿನಾಂಕ 20.01.2020 ರಂದು ರಾತ್ರಿ 10.30 ಗಂಟೆಯ ಸಮಯದಲ್ಲಿ ದೂರುದಾರರು ಮನೆಯ ಒಳಗಿದ್ದು, ಹರಿತಾ ರವರು ಮನೆಯಿಂದ ಹೊರಗಡೆ ಹೋದವಳು ಮನೆಗೆ ವಾಪಸ್ ಬಾರದೇ ಇದ್ದು, ಈ ಬಗ್ಗೆ ಸಂಬಂದಿಕರ ಹಾಗೂ ಸ್ನೇಹಿತರ ಮನೆಗಳಲ್ಲಿ ಹುಡುಕಾಡಲಾಗಿ ಪತ್ತೆಯಾಗದ ಕಾರಣ ಈ ದಿನ ಬಂದು ತಡವಾಗಿ ದೂರು ನೀಡುತ್ತಿದ್ದು, ಕಾಣೆಯಾಗಿರುವ ತನ್ನ ತಂಗಿಯ ಮಗಳಾದ ಹರಿತಾ ರವರನ್ನು ಪತ್ತೆ ಮಾಡಿಕೊಡಬೇಕೆಂದು ದೂರು ನೀಡಿರುತ್ತಾರೆ.

Leave a Reply

Your email address will not be published. Required fields are marked *