ದಿನದ ಅಪರಾಧಗಳ ಪಕ್ಷಿನೋಟ 23 ನೇ ಆಗಸ್ಟ್‌ 2019

–ಹಲ್ಲೆ : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಗಲಾಟೆ ಮಾಡಿರುವ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 22.08.2019 ರಂದು ದೂರುದಾರರಾದ ಶ್ರೀ. ದಯಾನಂದ ಬಿನ್‌ ರಾಮಚಂದ್ರರೆಡ್ಡಿ ಪರವನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದೂರುದಾರರು ಬಂಗಾರಪೇಟೆಯಿಂದ ಪರವನಹಳ್ಳಿ ಗ್ರಾಮಕ್ಕೆ ಹೋಗಲು ದ್ವಿಚಕ್ರ ವಾಹನ ಸಂಖ್ಯೆ ಕೆಎ-07-ವೈ-6187 ನ್ನು ಚಲಾಯಿಸಿಕೊಂಡು ಕಾಮಸಮುದ್ರಂ ರಸ್ತೆಯ ರಾಮಲಿಂಗಾಪುರ ಗ್ರಾಮದ ಹಾಲು ಡೈರಿ ಸಮೀಪ ರಸ್ತೆಯಲ್ಲಿ ಹೋಗುತ್ತಿದ್ದಾಗ ಆರೋಪಿಗಳಾದ ವಿಜಯಕುಮಾರ್‍ ಮತ್ತು ಮುನಿರಾಜು ರವರು ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಹೋಗುತ್ತಿದ್ದವರು, ದೂರುದಾರರನ್ನು ಏಕೆ ವಾಹನ ಹಾರನ್ ಮಾಡುವುದಕ್ಕೆ ಆಗುವುದಿಲ್ವಾ. ಎಂದು ಹೇಳಿ ವಾಹನವನ್ನು ನಿಲ್ಲಿಸಿ, ಜಗಳ ಮಾಡಿ ಕೈಗಳಿಂದ ಹೊಡೆದು ರಕ್ತ ಗಾಯಗಳಾಗಿರುತ್ತದೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ಹೆಂಗಸ್ಸು ಕಾಣೆಯಾಗಿರುವ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ :22.08.2019 ರಂದು ದೂರುದಾರರಾದ ಶ್ರೀ. ರವೀಂದ್ರ ಬಿನ್‌ ಮುನಿಸ್ವಾಮಿ ದಾಸರಹೊಸಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದಿನಾಂಕ:19-08-2019 ರಂದು ದೂರುದಾರರ ಮಗಳಾದ ಕು: ಶ್ವೇತಾಶ್ರೀ, 25 ವರ್ಷ ರವರು ಅಂಗಡಿಗೆ ಹೋಗಿಬರುತ್ತೇನೆಂದು ಹೇಳಿ ಮನೆಯಿಂದ ಹೋದವಳು ಸಂಜೆಯಾದರೂ ಮನೆಗೆ ವಾಪಸ್ಸು ಬರದೆ ಕಾಣೆಯಾಗಿರುತ್ತಾರೆ.
– ಸುಲಿಗೆ : 01

ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ಸುಲಿಗೆ ಪ್ರಯತ್ನ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ.22-08-2019 ರಂದು ದೂರುದಾರರಾದ ಶ್ರೀ ಮೂರ್ತಿ ಬಿನ್‌ ಗಂಗಾಧರಂ ಆರ್‌ಟಿಓ ಕಛೇರಿಯ ಪಕ್ಕ ಬೆಮೆಲ್‌ ನಗರ ರವರು ನೀಡಿದ ದೂರಿನಲ್ಲಿ ದಿನಾಂಕ.21-08-2019 ರಂದು ರಾತ್ರಿ ಸುಮಾರು 10-00 ಗಂಟೆಯಲ್ಲಿ ದೂರುದಾರರು ಮನೆಯ ಗೇಟ್ ಮತ್ತು ಮುಂಭಾಗಿಲಿನ ಬಾಗಿಲನ್ನು ಲಾಕ್ ಮಾಡಿಕೊಂಡು, ದೂರುದಾರರು ಆತನ ಹೆಂಡತಿ ಚಂದ್ರ ಮತ್ತು ಮಗ ಶ್ಯಾಮ್ ಕುಮಾರ್ ರವರು ಮನೆಯಲ್ಲಿ ಮಲಗಿದ್ದು, ರಾತ್ರಿ ಸುಮಾರು 2-45 ಗಂಟೆಯಲ್ಲಿ ಯಾರೋ ಇಬ್ಬರು ಅಪರಿಚಿತ ಆಸಾಮಿಗಳು ಬಂದು ಮನೆಯ ಕಾಲಿಂಗ್ ಬೆಲ್ ಹೊಡೆದಿದ್ದು, ದೂರುದಾರರು ಎದ್ದು ಯಾರು ಎಂದು ಕೇಳಿದಾಗ, ಆಸಾಮಿಗಳು ತಮಿಳು ಬಾಷೆಯಲ್ಲಿ ನಿಮ್ಮ ಸಂಬಂದಿಕರು ತೀರಿಕೊಂಡಿದ್ದಾರೆ ಎಂದು ಹೇಳಿದ್ದು, ಆಗ ದೂರುದಾರರು ಮನೆಯ ಬಾಗಿಲನ್ನು ತೆಗೆದಾಗ ಸದರಿ ಆಸಾಮಿಗಳು ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ, ದೂರುದಾರರ ಕೈಗಳಿಂದ ಹಿಡಿದುಕೊಂಡಿದ್ದು, ಮತ್ತೊಬ್ಬ ಆಸಾಮಿಯು ಮುಖಕ್ಕೆ ಬಟ್ಟೆಯಿಂದ ಹಾಕಿ ಅದುಮಿ ಮನೆಯ ಹಾಲ್ ಗೆ ತಳ್ಳಿಕೊಂಡು ಬಂದು, ಕೈಯಲ್ಲಿದ್ದ ಚಾಕುವಿನಿಂದ ಕತ್ತಿನ ಬಳಿ ಹೊಡೆಯಲು ಬಂದಾಗ, ಎಡಕೈಯನ್ನು ಅಡ್ಡ ಇಟ್ಟಾಗ, ಹೆಬ್ಬೆರಳಿಗೆ ರಕ್ತಗಾಯವಾಗಿದ್ದು, ಅಷ್ಟರಲ್ಲಿಮನೆಯಲ್ಲಿವರು ಜೋರಾಗಿ ಕಿರುಚಿಕೊಂಡಾಗ ಮನೆಯ ರೂಮಿನಲ್ಲಿ ಮಲಗಿದ್ದ ಶ್ಯಾಮ್ ಕುಮಾರ್ ರವರು ಎದ್ದು ಬರುವಷ್ಟರಲ್ಲಿ ಅಪರಿಚಿತ ಆಸಾಮಿಗಳು ಮನೆಯ ಹಿಂಬಾಗಲಿನಿಂದ ಓಡಿ ಹೋಗಿರುತ್ತಾರೆ. ಸದರಿ ಆಸಾಮಿಗಳ ವಯಸ್ಸು ಸುಮಾರು 25-30 ವರ್ಷಗಳಾಗಿರುತ್ತೆ. ಸದರಿ ಅಪರಿಚಿತ ಆಸಾಮಿಗಳು ಬೆಲೆ ಬಾಳುವ ವಸ್ತುಗಳನ್ನು ಸುಲಿಗೆ ಮಾಡುವ ಉದ್ದೇಶದಿಂದ ಮನೆಯ ಒಳಗೆ ಅತಿಕ್ರಮ ಪ್ರವೇಶ ಮಾಡಿರುತ್ತಾರೆ.

– ಸಾಧಾರಣ ಕಳ್ಳತನ : 01

ರಾಬರ್ಟ್‌‌ಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ಬಂಗಾರದ ಸರವನ್ನು ಕಳೆದುಕೊಂಡಿರುವ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ. 22.08.2019 ರಂದು ದೂರುದಾರರಾದ ಶ್ರೀಮತಿ ರಂಗನಾಯಕಿ ಕೋಂ ಸತ್ಯಮೂರ್ತಿ ಕಾಮಸಮುದ್ರಂ ರವರು ನೀಡಿದ ದೂರಿನಲ್ಲಿ ದಿನಾಂಕ: 21.08.2019 ರಂದು ದೂರುದಾರರು ರಾಬರ್ಟ್ ಸನ್ ಪೇಟೆ ಎಂ.ಜಿ ಮಾರುಕಟ್ಟೆಗೆ ಬಂದು ಕೆಲಸ ಮುಗಿಸಿಕೊಂಡು ಕಾಮಸಮುದ್ರಂ ಊರಿಗೆ ವಾಪಸ್ಸು ಹೋಗಲು ಬಸ್ಸು ಹತ್ತಿ ಸೀಟ್ ನಲ್ಲಿ ಕುಳಿತುಕೊಂಡು ಕತ್ತನ್ನು ಸವರಿಕೊಂಡಿದ್ದು ದೂರುದಾರರು ಧರಿಸಿದ್ದ 2 ಬಂಗಾರದ ಕತ್ತಿನ ಸರವನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ ಸುಮಾರು 2,40,000/- ರೂ. ಗಳಾಗಿರುತ್ತೆ.

– ರಸ್ತೆ ಅಪಘಾತಗಳು : 02

ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:22-08-2019 ರಂದು ದೂರುದಾರರಾದ ಶ್ರೀ , ಗಿರೀಶ್‌ ಬಿನ್‌ ಶ್ರೀನಿವಾಸ ದೊಡ್ಡೂರು ಕರಪನಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದೂರುದಾರರ ತಂದೆ ಶ್ರೀನಿವಾಸ್, ವಯಸ್ಸು 58 ವರ್ಷ ರವರು ಟಿ.ವಿ.ಎಸ್. ಸೂಪರ್ ಎಕ್ಸೆಲ್ ದ್ವಿಚಕ್ರ ವಾಹನ ಸಂಖ್ಯೆ ಕೆ.ಎ.08-ಹೆಚ್.1114 ನ್ನು ದಾಸರಹೊಸಹಳ್ಳಿ ಬಸ್ ನಿಲ್ದಾಣದ ಕಡೆಯಿಂದ ಆಲದಮರದ ಕಡೆಗೆ ಹೋಗಲು ದಾಸರಹೊಸಹಳ್ಳಿ ಭಾರತ್ ಪೆಟ್ರೋಲ್ ಬಂಕ್ ಮುಂಭಾಗ ರಸ್ತೆಯ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಆಲದಮರದ ಕಡೆಯಿಂದ ಆರೋಪಿ-ನಂದೀಶ್ ಎಂಬುವರು ಗುರುರಾಜ ಬಸ್ ನಂ ಕೆ.ಎ.08-ಎ.0179 ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶ್ರೀನಿವಾಸ್ ರವರು ಚಲಾಯಿಸಿಕೊಂಡು ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಪಡಿಸಿಡಿಸಿರುವ ಕಾರಣ ಪರಿಣಾಮ ಶ್ರೀನಿವಾಸ್ 58 ವರ್ಷರವರು ವಾಹನ ಸಮೇತ ರಸ್ತೆಯ ಮೇಲೆ ಬಿದ್ದಾಗ ಆತನಿಗೆ ತಲೆಗೆ, ಬಲಗಾಲಿಗೆ, ಬಲಕೈಗೆ ಹಾಗೂ ಇತರೆ ಕಡೆಗಳಲ್ಲಿ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:-22.08.2019 ರಂದು ದೂರುದಾರರಾದ ಶ್ರೀ. ಮೀನಾಸಾಬ್‌ ಬಿನ್‌ ಉಮ್ಮಾನ್‌ಸಾಬ್‌ ತೋಟಕನಮಹಳ್ಳಿ ಅಂದ್ರ ಪ್ರದೇಶ್‌ ರವರು ನೀಡಿದ ದೂರಿನಲ್ಲಿ ಅಪ್ಪಯ್ಯ ರವರು ಮಗಳನ್ನು ನೋಡಿಕೊಂಡು ಬರಲು ಬಡಮಾಕನಹಳ್ಳಿಗೆ ಹೋಗಿ ಬರಲು ದ್ವಿಚಕ್ರವಾಹನ ಸಂಖ್ಯೆ: ಎಪಿ-03-ಸಿಜೆ-6478 ರಲ್ಲಿ ಅಪ್ಪಯ್ಯ ರವರನ್ನು ದ್ವಿಚಕ್ರವಾಹನದ ಹಿಂಬದಿಯಲ್ಲಿ ಕುಳ್ಳರಿಸಿಕೊಂಡು ವಾಹನದಲ್ಲಿ ಬೇತಮಂಗಲದಲ್ಲಿ ಬರುತ್ತಿದ್ದಾಗ ಬಂಗಾರಪೇಟೆ ಕಡೆಯಿಂದ ಲಾರಿ ಸಂಖ್ಯೆ:-ಕೆಎ-07-ಡಿ-980 ರ ಚಾಲಕ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಬಂದು ದೂರುದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ರಕ್ತ ಗಾಯಗಳಾಗಿರುತ್ತದೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 22.08.2019 ರಂದು ದೂರುದಾರರಾದ ಶ್ರೀ. ಶಿವರಾಜ್‌ ಬಿನ್‌ ಕೃಷ್ಣಪ್ಪ ಮಾವಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದಿನಾಂಕ 15.02.2019 ರಂದು ಮುಳಬಾಗಿಲು ತಾಲ್ಲೂಕು, ಊರುಕುಂಟೆ ಗ್ರಾಮದ ವಾಸಿಯಾದ ಶೋಭ ಎಂಬುವರನ್ನು ಮದುವೆ ಮಾಡಿಕೊಂಡಿದ್ದು, ದಿನಾಂಕ 21.08.2019 ರಂದು ದೂರುದಾರರ ಹೆಂಡತಿಯಾದ ಶ್ರೀಮತಿ ಶೋಭ, ವಯಸ್ಸು ಸುಮಾರು 25 ವರ್ಷ ರವರು ಮದ್ಯಾಹ್ನ ಮನೆಯಿಂದ ಹೊರಗಡೆ ಹೋದವರು ಪುನಃ ಮನೆಗೆ ವಾಪಸ್ಸು ಬರದೇ ಕಾಣೆಯಾಗಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ :01

ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 22.08.2019 ರಂದು ದೂರುದಾರರಾದ ಶ್ರೀಮತಿ ಅಂಜಲಿ ಎಂ.ವಿ ನಗರ ಬೆಮೆಲ್‌ ರವರು ನೀಡಿದ ದೂರಿನಲ್ಲಿ ದಿನಾಂಕ.21-08-2019 ರಂದು ರಾತ್ರಿ ಸುಮಾರು 7-30 ಗಂಟೆಯಲ್ಲಿ ದೂರುದಾರರ ಮಗ ಅಜಯ್, ವಯಸ್ಸು ಸುಮಾರು 11 ವರ್ಷ ರವರು ಪಾರ್ಕ್ ನಲ್ಲಿ ಆಟ ಆಡಲು ಹೋಗುತ್ತೇನೆಂದು ತಾಯಿಗೆ ಹೇಳಿದ್ದು, ಕತ್ತಲಾಗಿದೆ, ಆಟ ಆಡಲು ಹೋಗಬೇಡವೆಂದು ಮನೆಯಲ್ಲಿಯೇ ಇರಲು ತಿಳಿಸಿದ್ದು, ಅಜಯ್ ಕೋಪ ಮಾಡಿಕೊಂಡು ರೂಮಿನೊಳಗೆ ಹೋಗಿ ಬಾಗಿಲಿನ ಚಿಲಕ ಹಾಕಿಕೊಂಡಿದ್ದು, ಮೇಲ್ಚಾವಣಿಯ ಹುಕ್ ಗೆ ವೇಲ್ ನಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *