ದಿನದ ಅಪರಾಧಗಳ ಪಕ್ಷಿನೋಟ 23ನೇ ಏಪ್ರಿಲ್ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 22.04.2018 ರಂದು ದಾಖಲಾಗಿರುವ ಪ್ರಕರಣಗಳ ವಿವರಗಳು.

– ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಅಶ್ವಿನಿ ಕೊಂ ಸುಬ್ರಮಣಿ, ದೊಡ್ಡಕಾರಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ  ಗಂಡ ಸುಬ್ರಮಣಿ ರವರು ಮೃತರಾಗಿದ್ದು, ದೂರುದಾರರು ಗಾರೆ ಕೆಲಸಕ್ಕೆ ಹೋಗುತ್ತಿದ್ದ ಕಡೆ  ಆರೋಪಿ ರಘು ಬಿನ್ ನಾರಾಯಣಸ್ವಾಮಿ ರವರು ಸಹ ಹೋಗುತ್ತಿದ್ದು, ಅಲ್ಲಿ ರಘು ರವರು ದೂರುದಾರರಿಗೆ ಲೈಂಗಿಕ ಕಿರುಕುಳ ನೀಡುತ್ತಿರುತ್ತಾನೆ.  ದಿನಾಂಕ-22-04-2018 ರಂದು ಸಂಜೆ 4.00 ಗಂಟೆಯಲ್ಲಿ ದೂರುದಾರರು ಸುಂದ್ರಪಾಳ್ಯ ಕಾಲೇಜು ಬಳಿ  ಪಿರ್ಯಾದಿ ಕೆಲಸ ಮಾಡುತ್ತಿರುವ ಆರೋಪಿ ಅಲ್ಲಿಗೆ ಹೋಗಿ ಲೈಂಗಿಕ ಕಿರುಕುಳ ನೀಡಿದ್ದು, ದೂರುದಾರರು ಕಿರುಚಿ ಕೊಂಡಾಗ  ಸುಬ್ರಮಣಿ ಮತ್ತು ಇತರರು ಬಂದು ದೂರುದಾರರನ್ನು ರಕ್ಷಿಸಲು ಹೋದಾಗ ಅವರ ಮೇಲೆ ಸಹ ಜಗಳ ಮಾಡಿ ಆರೋಪಿ ಸುಬ್ರಮಣಿ ರವರಿಗೆ ಕಾಲಿನಿಂದ ಒದ್ದು ಕೈಗಳಿಂದ ಹೊಡೆದು ಅಲ್ಲಿಯೇ ಬಿದ್ದಿದ್ದ ಕಬ್ಬಿಣದ ರಾಡಿನಿಂದ ದೂರುದಾರರಿಗೆ ಮತ್ತು ಸುಬ್ರಮಣಿ ರವರಿಗೆ ಹೊಡೆದಿರುತ್ತಾನೆ.

– ಹಲ್ಲೆ : 01

ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ದಿವಾಕರ್ ಬಿನ್ ಹರಿ, ಎಫ್ ಬ್ಲಾಕ್, ಚಾಂಪಿಯನ್‌ರಿಫ್ಸ್‌, ಕೆ.ಜಿ.ಎಫ್ ರವರ ಸ್ನೇಹಿತ ಶರ್ಮಾ ರವರು ಆರೋಪಿ  ನದೀಮ್, ಎನ್‌.ಟಿ ಬ್ಲಾಕ್, ಉರಿಗಾಂ, ಕೆ.ಜಿ.ಎಫ್ ರವರಿಗೆ ಮಿಸ್ಸಡ್ ಕಾಲ್ ಕೊಟ್ಟಿದ್ದ ಕಾರಣ ದಿನಾಂಕ 22-04-2018 ರಂದು ಶರ್ಮಾ ರವರಿಗೆ ಆರೋಪಿಯು ಪೋನ್ ಮಾಡಿ ಬೈಯ್ಯುತ್ತಿರುವಾಗ ದೂರುದಾರರು ಪೋನ್ ತೆಗೆದುಕೊಂಡು  ಅಕಸ್ಮಿಕವಾಗಿ ಮಿಸ್ಸಡ್‌ ಕಾಲ್ ಬಂದಿದೆ ಎಂದು ಹೇಳಿದರೂ ಆರೋಪಿ ಕೇಳದೆ ಕೆಟ್ಟಮಾತುಗಳಿಂದ ಬೈದಿದ್ದು, ನಂತರ ದೂರುದಾರರು ಮತ್ತು ಶರ್ಮಾ ರವರು ಉರಿಗಾಂ ನ ಎನ್.ಟಿ ಬ್ಲಾಕ್ ಮಸೀದಿ ಬಳಿ ಸಂಜೆ 6-30 ಗಂಟೆಗೆ ಬಂದಾಗ  ಆರೋಪಿಯು ಕೆಟ್ಟಮಾತುಗಳಿಂದ ಬೈದು, ಕೈಗಳಿಂದ ಹೊಡೆದು ಚಾಕುವಿನಿಂದ ದೂರುದಾರರಿಗೆ ಹೊಡೆದು ರಕ್ತಗಾಯಪಡಿಸಿ  ಪ್ರಾಣ ಬೆದರಿಕೆ ಹಾಕಿರುತ್ತಾನೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ ನಾರಾಯಣಮ್ಮ ಕೊಂ ವೆಂಕಟರಮಣಪ್ಪ, ಮಂಗಾಪುರ ಗ್ರಾಮ, ಮಲೂರು ತಾಲ್ಲೂಕು ರವ ಮಗಳಾದ ಮಮತ ಕೊಂ ಮಂಜುನಾಥ್, ಅಪ್ಪನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ.19-04-2018 ರಿಂದ ದಿನಾಂಕ.22-04-2018 ರ ಮದ್ಯೆ  ಮನೆಯಲ್ಲಿ ಹೇಳದೇ ಎಲ್ಲಿಯೋ ಹೋಗಿದ್ದು, ಮನೆಗೆ ವಾಪಸ್ಸು ಬರದೆ ಕಾಣೆಯಾಗಿರುತ್ತಾಳೆ.

 

– ರಸ್ತೆ ಅಪಘಾತಗಳು :‍ 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಗೋಪಾಲರೆಡ್ಡಿ ಬಿನ್ ತಿಮ್ಮಾರೆಡ್ಡಿ, ರಾತೇನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 20.04.2018 ರಂದು ಸಂಜೆ 5.00 ಗಂಟೆಯಲ್ಲಿ  ದ್ವಿಚಕ್ರ ವಾಹನ TVS super XL Heavy Duty KA-08-U-0752 ರಲ್ಲಿ ತೊಪ್ಪನಹಳ್ಳಿ ಕಡೆಯಿಂದ  ಮಿಟ್ಟಹಳ್ಳಿ ಗೇಟ್ ಬಳಿ ಬರುತ್ತಿದ್ದಾಗ, ಕಾಮಸಮುದ್ರಂ ಕಡೆಯಿಂದ ಆರೋಪಿಯು ಮಹೀಂದ್ರ ಬುಲೋರೋ ಟೆಂಪೋವನ್ನು ಅತಿವೇಗ ಮತ್ತು ನಿರ್ಲಕ್ಷತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದೂರುದಾರರಿಗೆ ರಕ್ತಗಾಯಗಳಾಗಿರುತ್ತೆ.

ಅಸ್ವಾಭಾವಿಕ ಮರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮಂಜುನಾಥ ಬಿನ್ ವೆಂಕಟರಮಣಪ್ಪ, ಹಳೇ ಮಾಸ್ತಿ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಮಾಲೂರು ರವರು ಬಂಗಾರಪೇಟೆ ರೈಲ್ವೆ ನಿಲ್ದಾಣದ  ಪಾರ್ಕಿಂಗ್ ಸ್ಟ್ಯಾಂಡ್ ನಲ್ಲಿ ಕೆಲಸಮಾಡುತ್ತಿದ್ದು, ಅದರ ಪಕ್ಕದಲ್ಲಿ ಒಂದು ಹಳೆ ಓಮಿನಿ ಕಾರು ನಂ-KA-01, M-3520 ನಿಂತಿದ್ದು, ಸುಮಾರು ದಿನಗಳಿಂದ 70 ವರ್ಷ ವಯಸ್ಸಿನ ಒಬ್ಬ ಬಿಕ್ಷುಕಿ ಅದರಲ್ಲಿ ಮಲಗುತ್ತಿದ್ದು, ದಿನಾಂಕ 22.04.2018 ರಂದು ಬೆಳಿಗ್ಗೆ 8.00 ಗಂಟೆ ಸಮಯದಲ್ಲಿ ಹೋಗಿ ನೋಡಲಾಗಿ ಸದರಿ ಮುದುಕಿ ಯಾವುದೋ ಖಾಯಿಲೆಯಿಂದ ಅಥವಾ ಊಟವಿಲ್ಲದೆ ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *