ದಿನದ ಅಪರಾಧಗಳ ಪಕ್ಷಿನೋಟ 23ನೇ ಮಾರ್ಚ್ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 22.03.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಅಬಕಾರಿ ಕಾಯ್ದೆ : 01

 ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 22.03.2021 ರಂದು  ಸಂಜೆ 5.00  ಗಂಟೆಯಲ್ಲಿ ಕಾಮಸಮುದ್ರಂ ಕಡೆಯಿಂದ ಕೇತಗಾನಹಳ್ಳಿ ಕಡೆಗೆ ಹೋಗುವ ರಸ್ತೆಯ ಕಡೆ  ಸಾರ್ವಜನಿಕರು ಸಂಚರಿಸುವ ರಸ್ತೆಯಲ್ಲಿ ಅರುಣ್‌ಕುಮಾರ್‌ ಬಿನ್ ಹನುಮಪ್ಪ, ಕೇತಗಾನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ಮದ್ಯಪಾನ ಸೇವನೆ ಮಾಡುತ್ತಿದ್ದರನ್ನು   ಮತ್ತು  ಸ್ಥಳದಲ್ಲಿದ್ದ  1. Haywards Deluxe Whisky 90 ml  ನ 02  ಮದ್ಯದ ಖಾಲಿ ಪಾಕೇಟ್ ಗಳು, 2) 01  ಪ್ಲಾಸ್ಟಿಕ್ ಖಾಲಿ ಲೋಟ  3) 02 ಖಾಲಿ ವಾಟರ್ ಪ್ಯಾಕೆಟ್ ಗಳನ್ನು ಎ.ಎಸ್.ಐ ಶ್ರೀ. ಜನಾರ್ಧನ್‌ ರವರು ವಶಕ್ಕೆ ಪಡೆದು ಪ್ರಕರಣ ದಾಖಲಸಿರುತ್ತಾರೆ.

– ಸಾಧಾರಣ ಕಳ್ಳತನ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ.  ರಾಘವೇಂದ್ರ ರಾಜ್‌ಕುಮಾರ್‌ ಬಿನ್ ಗಂಗಾಧರಪ್ಪ, ಬೂಚೇಪಲ್ಲಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ದಿನಾಂಕ 20.03.2021 ರಂದು ಮದ್ಯಾಹ್ನ 1-00 ಗಂಟೆಯಲ್ಲಿ ರಾಮರದೇವಾಲಯ ಹತ್ತಿರ ದ್ವಿಚಕ್ರ ವಾಹನ Splendr Pro ಸಂಖ್ಯೆ ಕೆ.ಎ-08 ಯು-4260 ಅನ್ನು ನಿಲ್ಲಿಸಿ ವಿಜಯಾ ಹೋಟೆಲ್ ನಲ್ಲಿ ಊಟ ಮಾಡಲು ಹೋಗಿ ಊಟ ಮಾಡಿಕೊಂಡು ಬಂದು ನೋಡಲಾಗಿ ದ್ವಿಚಕ್ರವಾಹನ ಕಾಣದೇ ಇದ್ದು, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಇದರ ಬೆಲೆ 45,000/- ರೂ ಬಾಳುವುದಾಗಿರುತ್ತದೆ.

ರಸ್ತೆ ಅಪಘಾತಗಳು : 01

 ಅಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮುನಿರೆಡ್ಡಿ ಬಿನ್ ರಾಮರೆಡ್ಡಿ, ಬಿ ಕೊತ್ತೂರು ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಮಗ ಸುನೀಲ್ ರೆಡ್ಡಿ ರವರು  TVS STAR CITY ದ್ವಿಚಕ್ರ ವಾಹನವನ್ನು ದಿನಾಂಕ 22.03.2021 ರಂದು ಬೆಳಗ್ಗೆ 7.45 ಗಂಟೆಯಲ್ಲಿ ಕ್ಯಾಸಂಬಳ್ಳಿ -ಕೆ.ಜಿ.ಎಪ್ ಮುಖ್ಯ ರಸ್ತೆಯ ಅರಳಿ ಕುಂಟೆಯ ಕೆರೆಯ ಬಳಿ ಹೋಗುತ್ತಿದ್ದಾಗ, ಎದುರುಗಡೆಯಿಂದ ಬಂದಂತಹ HERO SPLENDER  PLUS ದ್ವಿ-ಚಕ್ರ ವಾಹನ ಸಂಖ್ಯೆ ಕೆ.ಎ 07 ಇಡಿ-3632 ನ್ನು ಅದರ ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ಮಗ ಸುನೀಲ್ ರೆಡ್ಡಿ ರವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಸುನೀಲ್‌ ರೆಡ್ಡಿ ರವರಿಗೆ ರಕ್ತಗಾಯಗಳಾಗಿದ್ದು, ಆರೋಪಿ ಪ್ರಕಾಶ ಬಿನ್ ಗೋವಿಂದಸ್ವಾಮಿ ರವರಿಗೆ  ಹಾಗೂ ದ್ವಿಚಕ್ರ ವಾಹನದ  ಹಿಂಬಂದಿಯಲ್ಲಿ ಕುಳಿತ್ತಿದ್ದ ಪ್ರಶಾಂತ್ ರವರಿಗೆ ರಕ್ತಗಾಯಗಳಾಗಿರುತ್ತದೆ.

– ಜೂಜಾಟ ಕಾಯ್ದೆ : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಜೂಜಾಟ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 22.03.2021 ರಂದು ಸಂಜೆ 5.30 ಗಂಟೆಯಲ್ಲಿ ಕಾಮಸಮುದ್ರಂ ಧರ್ಮರಾಯಸ್ವಾಮಿ ದೇವಸ್ಥಾನದ ಮೈದಾನದ ಬಳಿ ಮರದ ಕೆಳಗೆ ಹಣವನ್ನು ಪಣವಾಗಿಟ್ಟುಕೊಂಡು ಹುಣಸೆ ಬೀಜಗಳ ಜೂಜಾಟವನ್ನು  ಆಡುತ್ತಿದ್ದ ವರದರಾಜು, ಅಸ್ಲಾಂ, ಶಿವಕುಮಾರ್‌, ಕಿರಣ್‌ ರವರನ್ನು ಶ್ರೀ.ದಯಾನಂದ, ಪಿ.ಎಸ್.ಐ  ಮತ್ತು ಸಿಬ್ಬಂದಿಯವರು ವಶಕ್ಕೆ ಪಡೆದು ಸ್ಥಳದಲ್ಲಿ ಜೂಜಾಟಕ್ಕೆ ಉಪಯೋಗಿಸಿ  ಬಿದಿದ್ದ  4 ಹುಣಸೆ ಬೀಜಗಳು ಮತ್ತು 650/- ರೂಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.

Leave a Reply

Your email address will not be published. Required fields are marked *