ದಿನದ ಅಪರಾಧಗಳ ಪಕ್ಷಿನೋಟ 23ನೇ ಫೆಬ್ರವರಿ 2021

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 22.02.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣ ದಾಖಲಾಗಿರುತ್ತದೆ. ದೂರುದರರಾದ ಶ್ರೀ. ಮೋಹನ್ ಬಿನ್ ಕೃಷ್ಣಪ್ಪ, ಬಂಗಾರಪೇಟೆ ರವರ ತಂದೆ ಕೃಷ್ಣಪ್ಪ, 40 ವರ್ಷ ರವರು ದಿನಾಂಕ 20.02.2021 ರಂದು ಮನೆಯಿಂದ ಹೋದವರು ಮನೆಗೆ ವಾಪಸ್ ಬರದೇ ಕಾಣೆಯಾಗಿರುತ್ತಾರೆ.

– ಜೂಜಾಟ ಕಾಯ್ದೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಜೂಜಾಟ ಕಾಯ್ದೆ ಅಡಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ-22-02-2021 ರಂದು ಮದ್ಯಾಹ್ನ 2:45 ಗಂಟೆಯಲ್ಲಿ ಮಹದೇವಪುರ ಗ್ರಾಮದ ಬಳಿ ರಾಮಸಾಗರ ಕೆರೆಯ ಅಂಗಳದಲ್ಲಿ ವೆಂಗಸಂದ್ರ ಗ್ರಾಮದ ದೀಪೇಶ್ ಕುಮಾರ್‌, ಗೋಪೇನಹಳ್ಳಿ ಗ್ರಾಮದ ಕರ್ಣಕುಮಾರ್‌, ಮಹದೇವಪುರ ಗ್ರಾಮದ ಅಜಿತ್‌ ಮತ್ತು ಗೋಪೇನಹಳ್ಳಿ ಗ್ರಾಮದ ಮೋಹನ್ ರವರು ಕಾನೂನು ಬಾಹಿರವಾಗಿ ಅಂದರ್-ಬಾಹರ್ ಜೂಜಾಟ ಆಡುತ್ತಿದ್ದವರನ್ನು ಪಿ.ಎಸ್.ಐ ಶ್ರೀ. ನವೀನ್‌ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಸ್ಥಳದಲ್ಲಿದ್ದ 52 ಇಸ್ಪೀಟ್ ಎಲೆಗಳು ಹಾಗೂ 4,250/- ರೂಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.

Leave a Reply

Your email address will not be published. Required fields are marked *