ದಿನದ ಅಪರಾಧಗಳ ಪಕ್ಷಿನೋಟ 23ನೇ ಡಿಸೆಂಬರ್ 2020

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 22.12.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

ರಸ್ತೆ ಅಪಘಾತಗಳು : 02

ಬೆಮಲ್ ನಗರ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ.21-12-2020 ರಂದು ಬೆಳಿಗ್ಗೆ ಸುಮಾರು 11-30 ಗಂಟೆಯಲ್ಲಿ ಈ ಕೇಸಿನ ಪಿರ್ಯಾದಿ ನಾಜರೆ ಗೋಪಾಲ್, ಚಿನ್ನಕೋಟೆ ಬಂಗಾರಪೇಟೆ ರವರ  ಮಗನಾದ ಸಂತೋಷ್ ನಾಜರೆ, 38 ವರ್ಷ ರವರು ಬಂಗಾರಪೇಟೆಯಲ್ಲಿ ಕೆಲಸ ಇರುವುದಾಗಿ ಆತನ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ದ್ವಿಚಕ್ರ ವಾಹನದಲ್ಲಿ ಬೆಮಲ್ ನಗರ ಕಾವೇರಿನಗರದಲ್ಲಿರುವ ತಮ್ಮ ಮನೆಯಿಂದ ಹೋಗಿ ಸಂಜೆ ಸುಮಾರು 6-30 ಗಂಟೆಯಲ್ಲಿ ಬಂಗಾರಪೇಟೆ ಕಡೆಯಿಂದ ಕೆ.ಜಿ.ಎಫ್. ಕಡೆಗೆ ಹೋಗಲು ಬಂಗಾರಪೇಟೆ-ಕೆ.ಜಿ.ಎಫ್. ರಸ್ತೆ, ಅಜ್ಜಪ್ಪನಹಳ್ಳಿ ಮಾರ್ಗ, ಮಲ್ಲೆಂಗೂರ್ಕಿ ಕ್ರಾಸ್ ಬಳಿ ಸದರಿ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ದ್ವಿಚಕ್ರ ವಾಹನ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ವಾಹನ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನ ಸಮೇತ ಸಂತೋಷ್ ನಾಜರೆ ರವರು ರಸ್ತೆ ಮೇಲೆ ಬಿದ್ದಾಗ ಆತನ ಬಲಗಣ್ಣಿನ ಕೆಳಭಾಗದಲ್ಲಿ ರಕ್ತಗಾಯ ಮತ್ತು ಇತರೆ ಕಡೆ ಆಗಿರುವ ತೀವ್ರ ಸ್ವರೂಪದ ಮೂಗುಗಾಯಗಳ ದೆಸೆಯಿಂದ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.   ದಿನಾಂಕ 21.12.2020 ರಂದು ಸಂಜೆ ಸುಮಾರು 6.30 ಗಂಟೆಯಲ್ಲಿ ಈ ಕೇಸಿನ ಪಿರ್ಯಾದಿ ಪ್ರವೀಣ್ ಕುಮಾರ್‍,  ಬನಹಳ್ಳಿ ವಾಸಿ ರವರ ತಂದೆಯಾದ ಬಿ. ಎಂ. ವೆಂಕಟೇಶಪ್ಪ ರವರು ಮನೆಗೆ ಬರಲು ದೊಡ್ಡಪ್ಪಯ್ಯ ರವರ ಹೊಲದ ರಸ್ತೆಯ ಬದಿಯಲ್ಲಿ ನಡೆದುಕೊಂಡು ಬರುತ್ತಿರುವಾಗ, ಬಂಗಾರಪೇಟೆ ಕಡೆಯಿಂದ ಬೂದಿಕೋಟೆ ಕಡೆಗೆ ಹೊಗಲು ದ್ವಿಚಕ್ರ ವಾಹನ ಸಂಖ್ಯೆ ಕೆಎ-53-ಇಪಿ-6499 ರ ವಾಹನವನ್ನು ಅದರ ಸವಾರನು ಅತಿವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಬಿ.ಎಂ ವೆಂಕಟೇಶಪ್ಪ ರವರಿಗೆ ಹಿಂಬದಿಯಿಂದ ಡಿಕ್ಕಿ ಪಡಿಸಿದ್ದರಿಂದ ಕೆಳಗೆ ಬಿದ್ದಾಗ ಮೂಗು, ತಲೆಯ ಹಿಂಬಾಗ, ಕಿವಿ ಹಾಗೂ ಎಡಗಾಲಿಗೆ ರಕ್ತಗಾಯ ಹಾಗೂ ಊತಗಾಯಗಳಾಗಿದ್ದು, ಕೂಡಲೇ ಗಾಯಾಳುವನ್ನು ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು, ನಂತರ ಹೆಚ್ಚಿನ ಚಿಕಿತ್ಸೆಗೆ ಕೋಲಾರ ಜಾಲಪ್ಪ ಆಸ್ಪತ್ರೆಗೆ ಹೋಗಿ ಅಲ್ಲಿಂದ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ, ರಾತ್ರಿ ಸುಮಾರು 8.30 ಗಂಟೆಯಲ್ಲಿ ವೆಂಕಟೇಶಪ್ಪ ಬಿ.ಎಂ ರವರು ಮಾರ್ಗ ಮದ್ಯೆ ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *