ದಿನದ ಅಪರಾಧಗಳ ಪಕ್ಷಿನೋಟ 23ನೇ ನವೆಂಬರ್ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಕ 22.11.2020 ರಂದು ಸಂಜೆ 5.00  ಗಂಟೆಯಿಂದ ದಿನಾಂಕ 23.11.2020 ರಂದು ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಕೊಲೆ : ಇಲ್ಲ

– ಕೊಲೆ ಪ್ರಯತ್ನ :  ಇಲ್ಲ

– ಡಕಾಯಿತಿ : ಇಲ್ಲ

– ಸುಲಿಗೆ : ಇಲ್ಲ

ಕನ್ನ ಕಳುವು : ಇಲ್ಲ

– ಸಾಧಾರಣ ಕಳ್ಳತನ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವಿಶ್ವನಾಥ್‌ ಬಿನ್ ಸೀನಪ್ಪ, ಕುಪ್ಪಸ್ವಾಮಿ ಮೊದಲಿಯಾರ್‌ ಲೇಔಟ್‌, ಬಂಗಾರಪೇಟೆ ರವರು ದಿನಾಂಕ 22.11.2020 ರಂದು ಬೆಳಿಗ್ಗೆ 9.30 ಗಂಟೆಯಿಂದ 10.00 ಗಂಟೆ ಮಧ್ಯೆ ಬಂಗಾರಪೇಟೆ ಪಟ್ಟಣದಲ್ಲಿರುವ ಶ್ರೀ. ಚಂದ್ರಮೌಳೇಶ್ವರ ದೇವಾಲಯದಲ್ಲಿದ್ದಾಗ, ಅಪರಿಚಿತ ವ್ಯಕ್ತಿಯು ದೇವಾಲಯದೊಳಗೆ ಪ್ರವೇಶಿಸಿ ಪೂಜೆ ಮಾಡಲು ತಿಳಿಸಿ, ನಂತರ ಮಂಗಳಾರತಿಯನ್ನು ಸ್ವೀಕರಿಸಿ ತೀರ್ಥ ತೆಗೆದುಕೊಳ್ಳುವ ಸಮಯದಲ್ಲಿ ಆತನ ಜೇಬಿನಿಂದ ಕರವಸ್ತ್ರವನ್ನು ತೆಗೆದು ದೂರುದಾರರ ಮುಖಕ್ಕೆ ಹಾಕಿ, ದೂರುದಾರರ ಕತ್ತಿನಲ್ಲಿದ್ದ ಸುಮಾರು 22 ಗ್ರಾಂ ತೂಕದ 66,000/- ರೂ ಬೆಲೆಬಾಳುವ ಬಂಗಾರದ ಸರವನ್ನು ತೆಗೆದುಕೊಂಡು ಹೋಗಿರುತ್ತಾನೆ.

ಮೋಸ/ವಂಚನೆ : ಇಲ್ಲ

ರಸ್ತೆ ಅಪಘಾತಗಳು : ಇಲ್ಲ

ದೊಂಬಿ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೊಂಬಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಮಂಜುಳಾ ಕೊಂ ಶ್ರೀನಿವಾಸ, ಚಿಕ್ಕಹೊಸಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮಕ್ಕಳಾದ ಸುಷ್ಮಿತಾ, ಸಹನಾ, ಸವ್ಯ, ಗಗನ್ ರವರು ದಿನಾಂಕ 20.11.2020 ರಂದು ಚೌಡಪ್ಪ ರವರ ಹೊಲದಲ್ಲಿ ಅಲಸಂದೆ ಕಾಯಿಗಳು ಕಿತ್ತಿರುವ ವಿಚಾರದಲ್ಲಿ ಮದ್ಯಾಹ್ನ 1.00 ಗಂಟೆಗೆ ಚೌಡಪ್ಪ, ವೆಂಕಟಲಕ್ಷ್ಮಮ್ಮ, ಚೌಡಮ್ಮ, ವೆಂಕಟಗಿರಿಯಪ್ಪ ಮತ್ತು ಶ್ರಾವಣಿ  ರವರು ದೂರುದಾರರೊಂದಿಗೆ ಮತ್ತು ಅವರ ಮಕ್ಕಳೊಂದಿಗೆ ಜಗಳ ಕಾದು ಕೆಟ್ಟ ಮಾತುಗಳಿಂದ ಬೈದು, ಕೈ, ಕಾಲು ಮತ್ತು ಕುಡುಗೋಲಿನಿಂದ ಹೊಡೆದು ರಕ್ತಗಾಯ ಪಡಿಸಿ, ಪ್ರಾಣ ಬೆದರಿಕೆ ಹಾಕಿರುತ್ತಾರೆ.

– ಜೂಜಾಟ ಕಾಯ್ದೆ : ಇಲ್ಲ

– ಅಪಹರಣ :  ಇಲ್ಲ

– ಹಲ್ಲೆ : ಇಲ್ಲ

ಮಹಿಳೆ ಮೇಲೆ ನಡೆದ ದೌರ್ಜನ್ಯ ಪ್ರಕರಣ : ಇಲ್ಲ

– ಅಕ್ರಮ ಮದ್ಯ ಮಾರಾಟ : ಇಲ್ಲ

 ಎನ್‌.ಡಿ.ಪಿ.ಎಸ್‌  ಕಾಯ್ದೆ : ಇಲ್ಲ

ಇತರೆಇಲ್ಲ

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : ಇಲ್ಲ

ಅಸ್ವಾಭಾವಿಕ ಮರಣ ಪ್ರಕರಣ :  01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಪ್ರದೀಪ್ ಬಿನ್ ಯಲ್ಲಪ್ಪ, ಐನೋರಹೊಸಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 21.112020 ರಂದು ರಾತ್ರಿ 9-30 ಗಂಟೆಗೆ ತಡವಾಗಿ ಮನೆಗೆ ಹೋದಾಗ ದೂರುದಾರರ ಹೆಂಡತಿ ಶ್ರೀಮತಿ. ಲಕ್ಷ್ಮೀ, 28 ವರ್ಷ ರವರು ದೂರುದಾರರಿಗೆ ಏಕೆ ತಡವಾಗಿ ಬಂದೆ ಎಂದು ಕೇಳಿದಾಗ ಮನಸ್ತಾಪಗಳುಂಟಾಗಿದ್ದು, ನಂತರ ರಾತ್ರಿ ಲಕ್ಷ್ಮಿ ರವರು ಕಬ್ಬಿಣದ ಪೈಪಿಗೆ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *