ದಿನದ ಅಪರಾಧಗಳ ಪಕ್ಷಿನೋಟ 23ನೇ ಸೆಪ್ಟೆಂಬರ್ 2020

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 22.09.2020 ರಂದು ಸಂಜೆ 5.00 ಗಂಟೆಯಿಂದ ದಿನಾಂಕ 23.09.2020 ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

– ಜೂಜಾಟ ಕಾಯ್ದೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಜೂಜಾಟ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.   ದಿನಾಂಕ:22.09.2020 ರಂದು ಸಂಜೆ 3-45 ಗಂಟೆಯಲ್ಲಿ ಬೇತಮಂಗಲ ಕರೆಯ ಅಂಗಳದಲ್ಲಿ ಹರೀಶ್‌, ಜಯಮಂಗಲ ಗ್ರಾಮ, ನಾಗೇಶ್ ಬಾಬು, ನಲ್ಲೂರು ಗ್ರಾಮ, ವಿಜಯಕುಮಾರ್‌ ಮತ್ತು ಚೆನ್ನೇಗೌಡ ಇಬ್ಬರು ವಾಸ. ಬೇತಮಂಗಲ ಗ್ರಾಮ ರವರು ಜೂಜಾಟ ಆಡುತ್ತಿದ್ದು, ಆರೋಪಿಗಳನ್ನು ಮತ್ತು ಸ್ಥಳದಲ್ಲಿದ್ದ 52 ಇಸ್ಪೀಟ್ ಎಲೆಗಳು ಹಾಗೂ 1,800/- ರೂ ಹಣವನ್ನು ವಶಪಡೆದುಕೊಂಡು ಪ್ರಕರಣ ದಾಖಲಿಸಿರುತ್ತಾರೆ.

 

 ಎನ್‌.ಡಿ.ಪಿ.ಎಸ್‌  ಕಾಯ್ದೆ : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ಈ ದಿನ ದಿನಾಂಕ 22.09.2020 ರಂದು ಸಂಜೆ 7.15 ಗಂಟೆಯಲ್ಲಿ ಕಾಡುಕದಿರೇನಹಳ್ಳಿ ರಸ್ತೆಯ ಮೂಲಕ ನಾಗನಹಳ್ಳಿ ಗ್ರಾಮದ ಬ್ರಿಡ್ಜ್ ಬಳಿ ನಾಗನಹಳ್ಳಿ ಕಡೆಯಿಂದ  ಟಿ.ವಿ.ಎಸ್ ವಿಗೋ ದ್ವಿ ಚಕ್ರ ವಾಹನದಲ್ಲಿ 1.ಸಾಧಿಕ್ ಪಾಷ.ಹೆಚ್ ಬಿನ್ ಎಸ್.ಹಮೀದ್, ಟಿಪ್ಪುನಗರ, ಬಂಗಾರಪೇಟೆ ಮತ್ತು 2.ತೌಸೀಪ್ ಬಿನ್ ಮುಕ್ತಿಯಾರ್, ವಿಜಯನಗರ, ಬಂಗಾರಪೇಟೆ ರವರು ಒಂದು ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್ ನಲ್ಲಿ 45 ಗ್ರಾಂ ಗಾಂಜಾ ಮಾದಕ ವಸ್ತುವನ್ನು ಇಟ್ಟುಕೊಂಡಿದ್ದು ಆರೋಪಿಗಳನ್ನು ಮತ್ತು ಗಾಂಜಾವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

Leave a Reply

Your email address will not be published. Required fields are marked *