ದಿನದ ಅಪರಾಧಗಳ ಪಕ್ಷಿನೋಟ 23ನೇ ಜುಲೈ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿದಿನಾಂಕ  22.07.2020 ರಂದು ಸಂಜೆ 5.00  ಗಂಟೆಯಿಂದ ದಿನಾಂಕ 23.07.2020 ರಂದು ಬೆಳಿಗ್ಗೆ 10.00ಗಂಟೆಯವರೆಗೆ ದಾಖಲಾಗಿರುವಅಪರಾಧಪ್ರಕರಣಗಳವಿವರಗಳು.

 

– ಕೊಲೆ ಪ್ರಯತ್ನ :  01

 

     ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 22.07.2020 ರಂದು ಸಂಜೆ 5.00 ಗಂಟೆಯಲ್ಲಿ ಈ ಕೇಸಿನ ಪಿರ್ಯಾದಿದಾರರಾದ ಕಿರಣ್ ಕುಮಾರ್‌, ಅಂಬೇಡ್ಕರ್‍ ನಗರ, ಕೋಲಾರ ಮತ್ತು ರೇಣುಕಾ ಪ್ರಸಾದ್ ರವರುಗಳು   ತನ್ನ ಕಾರಿನಲ್ಲಿ  ಬಂಗಾರಪೇಟೆ-ಕೋಲಾರ ಮುಖ್ಯ ರಸ್ತೆಯಲ್ಲಿರುವ ಪ್ರೊಪೆಲ್ ಗ್ಯಾಸ್ ಸ್ಟೇಷನ್ ಬಳಿ ಬರುತ್ತಿದ್ದಾಗ ಆರೋಪಿ ಶ್ರೀರಾಮ್, ಅಂಬೇಡ್ಕರ್‍ ನಗರ ಕೋಲಾರ ರವರು ದ್ವಿಚಕ್ರ ವಾಹನದಲ್ಲಿ ಪಿರ್ಯಾದಿಯ ಎದುರಿಗೆ ಬಂದಿದ್ದು, ಪಿರ್ಯಾದಿಯು ಕಾರ್ ನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ, ಪಿರ್ಯಾದಿ ಮತ್ತು ರೇಣುಕಾಪ್ರಸಾದ್ ರವರು  ಕೆಳಗೆ ಇಳಿದಾಗ, ಆರೋಪಿಯು ಪಿರ್ಯಾದಿಗೆ ಕೆಟ್ಟ ಮಾತುಗಳಿಂದ ಬೈದು ಏಕಾಏಕಿ ಕೈಯಿಂದ ಪಿರ್ಯಾದಿಯ ಎಡಗೆನ್ನೆಗೆ ಹೊಡೆದು ನೋವುಂಟು ಮಾಡಿ, ಒಂದು ಕಲ್ಲಿನಿಂದ ಪಿರ್‍ಯಾದಿಯ ಕಾರ್ ನ ಮುಂಭಾಗದ ಗಾಜು, ಎರಡೂ ಡೋರ್ ನ ಗಾಜನ್ನು ಹಾಗೂ ಕಾರ್ ನ ಡೋರ್ ಗಳನ್ನು ಹೊಡೆದು ಜಕ್ಕಂ ಮಾಡಿ, ಯಾವುದೋ ಕಾರಣವನ್ನು ಮನಸ್ಸಿನಲ್ಲಿಟ್ಟುಕೊಂಡು ಪಿರ್ಯಾದಿಯನ್ನು ಕೊಲೆ ಮಾಡುವ ಉದ್ದೇಶದಿಂದ ಒಂದು ಚಾಕುವಿನಿಂದ ಪಿರ್ಯಾದಿಯ ಹೊಟ್ಟೆಯ ಬಳಿ ತಿವಿದು ರಕ್ತಗಾಯಪಡಿಸಿ, ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ.

– ಕನ್ನ ಕಳುವು : 01

ಚಾಂಪಿಯನ್‌ರೀಫ್ಸ್‌ ಪೊಲೀಸ್‌ ಠಾಣೆಯ ಸರಹದ್ದಿನ “ಜಿ” ಬ್ಲಾಕ್‌, ಚಾಂಪಿಯನ್‌ರೀಫ್ಸ್‌ನಲ್ಲಿ ಕನ್ನ ಕಳವು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:22.07.2020 ರಂದು ದೂರುದಾರರಾದ ಶ್ರೀ. ಸುಂದರ್‌ ಬಿನ್‌ ಗಣೇಶ್‌ ರವರು ನೀಡಿದ ದೂರಿನಲ್ಲಿ ದೂರುದಾರರು ಸುಮಾರು 3-4 ತಿಂಗಳುಗಳಿಂದ ಬೆಂಗೂರಿನಲ್ಲಿ ವಾಸವಿದ್ದು ಮನೆಯನ್ನು ನೋಡಿಕೊಳ್ಳಲು ಜಿ ಬ್ಲಾಕ್‌ನ ಇಸೈ ಎಂಬುವರಿಗೆ ನೇಮಿಸಿದ್ದು ಇಸೈರವರು ಪ್ರತಿ ದಿನ ಮನೆಯಲ್ಲಿ ಹೋಗಿ ಮಲಗಿಕೊಳ್ಳುತ್ತಿದ್ದು ದಿನಾಂಕ: 19.07.2020 ರಂದು ರಾತ್ರಿ ಮನೆಯಲ್ಲಿ ಮಲಗಿದ್ದು, ಮರುದಿನ ದಿನಾಂಕ:20.07.2020 ರಂದು ಬೆಳಗ್ಗೆ 7.00 ಗಂಟೆಗೆ ಮನೆಯಿಂದ ಎದ್ದು ವಾಪಸ್ಸು ಹೋಗಿರುತ್ತಾರೆ. ನಂತರ ದಿನಾಂಕ-20.07.2020  ರಂದು ರಾತ್ರಿ ಹೆಚ್ಚಾಗಿ ಮಳೆ ಬಿದ್ದುದರಿಂದ ಅಂದಿನ ರಾತ್ರಿ ಇಸೈ ಎಂಬುವುರ ಮಲಗಲು ಮನೆಗೆ ಹೋಗಿರುವುದಿಲ್ಲ. ನಂತರ  ದಿನಾಂಕ:21.07.2020  ರಂದು ಸುಮಾರು ರಾತ್ರಿ 9-00 ಗಂಟೆಗೆ ಮನೆಯಲ್ಲಿ ಮಲಗಿಕೊಳ್ಳಲು ಹೋದಾಗ ಮನೆಯ ಬಾಗಿಲಿಗೆ ಅಳವಡಿಸಿದ್ದ ಡೋರ್‌ಲಾಕ್ ಅನ್ನು ಯಾರೋ ಕಳ್ಳರು ಮುರಿದು ಒಳಗೆ ಪ್ರವೇಶ್ ಮಾಡಿ ಬೀರುಗಳೆಲ್ಲ ಓಪನ್ ಮಾಡಿ ಕಳ್ಳತನ ಮಾಡಿರುವುದು ತಿಳಿದು ಬಂದಿದ್ದು ಇಸೈ ಎಂಬುವರು ದೂರುದಾರರಿಗೆ ಪೋನ್‌ ಮೂಲಕ ತಿಳಿದ ಕಾರಣ ದೂರುದಾರರು ದಿನಾಂಕ:22.07.2020  ರಂದು ಬೆಳಿಗ್ಗೆ ಸುಮಾರು 7.00  ಗಂಟೆಗೆ ಬಂದು ನೋಡಲಾಗಿ ಯಾರೊ ಕಳ್ಳರು  ಮನೆಯಲ್ಲಿದ್ದ 1) ಎಲ್.ಜಿ ಟಿ.ವಿ- 2)ಎರಡು ಎಲೆಗಳ ಚಿನ್ನದ ಸರ-3) ಒಂದು ಚಿನ್ನದ ನೆಕ್ ಚೈನ್-4) ಎರಡು ಚಿನ್ನದ ಬಳೆಗಳು-5) ಚಿನ್ನದ ಓಲೆ ಮತ್ತು ಮಾಟಿ ಒಟ್ಟು 106 ಗ್ರಾಂಗಳು ಆಗಿದ್ದು. ಬಂಗಾರದ ಆಭರಣಗಳ ಒಟ್ಟು ಅಂದಾಜು ಬೆಲೆ ರೂ.3.18.000/- ಗಳು ಆಗಿರುತ್ತದೆ. ಈ ಮೇಲ್ಕಂಡ ಎಲ್ಲಾ ವಸ್ತುಗಳ ಮೌಲ್ಯ ರೂ 3.38.000/-ಗಳಾಗಿರುತ್ತದೆ ಆರೋಪಿಗಳ ಪತ್ತೆಗಾಗಿ ಚಾಂಪಿಯನ್‌ರೀಫ್ಸ್‌‌ ಪೊಲೀಸ್‌ ಠಾಣೆಯ ಅಪರಾಧ ಪತ್ತೆಸಿಬ್ಬಂದಿಯನ್ನು ನೇಮಿಸಲಾಗಿರುತ್ತದೆ.

Leave a Reply

Your email address will not be published. Required fields are marked *