ದಿನದ ಅಪರಾಧಗಳ ಪಕ್ಷಿನೋಟ 23ನೇ ಏಪ್ರಿಲ್ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 22.04.2020 ರಂದು  ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ಇತರೆ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 22.04.2020 ರಂದು ದೂರುದಾರರಾದ ಡಾ|| ಮೊಹಮ್ಮದ್ ಉಮರ್‌ ಫಾರೂಕ್‌, ವೈದ್ಯಾಧಿಕಾರಿಗಳು, ಸಾರ್ವಜನಿಕರ ಸರ್ಕಾರಿ ಆಸ್ಪತ್ರೆ, ಬಂಗಾರಪೇಟೆ ರವರು ದಿನಾಂಕ 22.04.2020 ರಂದು ಬೆಳಿಗ್ಗೆ 11.00 ಗಂಟೆಯಲ್ಲಿ ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿರುವಾಗ, ಆರೋಪಿ ನವೀನ್‌ ಎಂಬುವರು ಅಸ್ಪತ್ರೆಗೆ ಹೋಗಿ ಒಂದು ತಿಂಗಳ ಹಿಂದೆ ಎಂ.ಎಲ್.ಸಿ ಮಾಡಿರುವ ವಿಚಾರದಲ್ಲಿ ಡಾಕ್ಟರ್‌ನ್ನು ಅನವಶ್ಯಕವಾಗಿ ಮಾತನಾಡುತ್ತಿದ್ದು, ಆರೋಪಿ ನವೀನ್‌ ಎಂಬುವರು ಮಾಸ್ಕ್ ನ್ನು ಧರಿಸದೇ ಹತ್ತಿರ ಬರುತ್ತಿದ್ದ ಕಾರಣ  ದೂರುದಾರರು ಎಂ.ಎಲ್.ಸಿ ಗೆ ಸಂಬಂಧಿಸಿದ ವೈದ್ಯರ ಬಳಿ ಭೇಟಿ ಮಾಡಲು ಹಾಗೂ ಮಾಸ್ಕ್ ನ್ನು ಧರಿಸಿ ಮಾತನಾಡಲು ತಿಳಿಸಿದರೂ ಸಹ ಕೇಳದೇ ಗಲಾಟೆ ಮಾಡಿ, ಬೆದರಿಕೆ ಹಾಕಿ, ರೋಗಿಗಳಿಗೆ ಚಿಕಿತ್ಸೆ ನೀಡಲು ಅವಕಾಶ ನೀಡದೇ  ಸರ್ಕಾರಿ ಕೆಸಲಕ್ಕೆ ಅಡ್ಡಿ ಪಡಿಸಿದ್ದರಿಂದ ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರರಕಣ ದಾಖಲು ಮಾಡಿ ಆರೋಪಿಯ ವಿರುದ್ದ ಕಾನೂನು ಕ್ರಮ ಜರುಗಿಸಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ : 01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಕಿರಣ್ ಬಿನ್ ಬಿಸ್ತವಾಡ್‌‌, 2 ಟೈಪ್‌ ಕ್ವಾಟ್ರಸ್‌, ಬೆಮೆಲ್ ನಗರ, ಕೆ.ಜಿ.ಎಫ್ ರವರ ತಾಯಿ ಶ್ರೀಮತಿ. ರೇಖಾ, 46 ವರ್ಷ ರವರಿಗೆ ಸುಮಾರು 06 ತಿಂಗಳಿಂದ ಮೈ ಕೈ ನೋವು, ಸುಸ್ತು ಸ್ನಾಯುಗಳ ದೌರ್ಬಲ್ಯ ಖಾಯಿಲೆ ಇದ್ದು, ಚಿಕಿತ್ಸೆ ಕೊಡಿಸಿದರೂ ಸಹ ವಾಸಿಯಾಗದೆ ಇದ್ದುದ್ದರಿಂದ ದಿನಾಂಕ.22-04-2020 ರಂದು ಮಧ್ಯಾಹ್ನ 12-30 ಗಂಟೆಯಿಂದ  3-40 ಗಂಟೆಯ ಮದ್ಯೆ ಮನೆಯಲ್ಲಿ ಯಾರೂ ಇಲ್ಲದೇ ಇರುವಾಗ, ಶ್ರೀಮತಿ. ರೇಖಾ ರವರು ಮನೆಯ ಬೆಡ್ ರೂಮಿನ ಫ್ಯಾನಿಗೆ ಒಂದು ನೈಲಾನ್ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *