ದಿನದ ಅಪರಾಧಗಳ ಪಕ್ಷಿನೋಟ 23ನೇ ಮಾರ್ಚ್ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 22.03.2020 ರಂದು  ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 

– ದೊಂಬಿ : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ದೊಂಬಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಮಂಗಮ್ಮ ಕೊಂ ವೆಂಕಟೇಶಪ್ಪ, ಭೀಮಗಾನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರಿಗೂ ಮತ್ತು ಆರೋಪಿಗಳಾದ 1. ನಾಗಯ್ಯ, 2.ಕಲಾವತಿ, 3.ಗೌರಮ್ಮ, 4.ಉಮಾ, 5. ರಾಮಕೃಷ್ಣಪ್ಪ, 6.ಶಾಂತಕುಮಾರ್, 7.ನಾರಾಯಣಪ್ಪ, 8.ವೆಂಕಟೇಶಪ್ಪ, 9. ಮುರುಗೇಶ್ ಮತ್ತು 10 ದೇವರಾಜ ರವರಿಗೂ ಜಮೀನಿನಲ್ಲಿ ದಾರಿ ಮಾಡುವ ವಿಚಾರದಲ್ಲಿ ವಿವಾದವಿದ್ದು, ದಿನಾಂಕ 22.03.2020 ರಂದು ಬೆಳಿಗ್ಗೆ 6.00 ಗಂಟೆಗೆ ದೂರುದಾರರು ಮತ್ತು ಆಕೆಯ ಗಂಡ ವೆಂಕಟೇಶಪ್ಪ ರವರು ಜಮೀನು ಸರ್ವೆ ನಂ 237/2 ರಲ್ಲಿ ಜೋಳ ಚೆಲ್ಲುತ್ತಿದ್ದಾಗ,  1. ನಾಗಯ್ಯ, 2.ಕಲಾವತಿ, 3.ಗೌರಮ್ಮ, 4.ಉಮಾ, 5. ರಾಮಕೃಷ್ಣಪ್ಪ, 6.ಶಾಂತಕುಮಾರ್, 7.ನಾರಾಯಣಪ್ಪ, 8.ವೆಂಕಟೇಶಪ್ಪ, 9. ಮುರುಗೇಶ್ ಮತ್ತು 10 ದೇವರಾಜ ರವರು ಅಕ್ರಮ ಗುಂಪುಕಟ್ಟಿಕೊಂಡು  ಕೈಗಳಲ್ಲಿ ದೊಣ್ಣೆಗಳನ್ನು ಹಿಡಿದುಕೊಂಡು ಬಂದು ದೂರುದಾರರಿಗೆ ಮತ್ತು ಆಕೆಯ ಗಂಡ ವೆಂಕಟೇಶಪ್ಪ ರವರಿಗೆ ಕೆಟ್ಟಮಾತುಳಿಂದ ಬೈದು,  ದೊಣ್ಣೆಗಳಿಂದ ಹೊಡೆದು ಗಾಯಪಡಿಸಿದ್ದು,  ಜಗಳ ಬಿಡಿಸಲು  ಬಂದ ಪ್ರಕಾಶ್ ರವರಿಗೆ ದೊಣ್ಣೆಗಳಿಂದ  ಹೊಡೆದು ಗಾಯಪಡಿಸಿ, ಪ್ರಾಣ ಬೆದರಿಕೆ ಹಾಕಿರುತ್ತಾರೆ.

 

– ಹಲ್ಲೆ : 02

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ನಾರಾಯಣಮ್ಮ ಕೊಂ ಗಂಟ್ಲಪ್ಪ, ಬಲ್ಲಗಿರಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ಆನಂದ ರವರನ್ನು ಎರಡನೇಯ ಮದುವೆಯಾಗಿದ್ದು, ಅಂದಿನಿಂದ ಈ ವಿಚಾರದಲ್ಲಿ ಆನಂದ ರವರು ಬೈಯುವುದು ಮತ್ತು ಹೊಡೆಯುವುದು ಮಾಡುತ್ತಿದ್ದು, ದಿನಾಂಕ: 22.03.2020 ರಂದು ಬೆಳಿಗ್ಗೆ 09:00 ಗಂಟೆಯಲ್ಲಿ ದೂರುದಾರರು ಮನೆಯ ಮುಂದೆ ಇದ್ದಾಗ, ಆನಂದ ರವರು ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಹೊಡೆದು, ಪ್ರಾಣ ಬೆದರಿಕೆ ಹಾಕಿರುತ್ತಾರೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನವೀನ್‌ಕುಮಾರ್‌ ಬಿನ್ ರಾಜಣ್ಣ, ವಿಜಯನಗರ, ಬಂಗಾರಪೇಟೆ ರವರು ದಿನಾಂಕ 22.03.2020 ರಂದು ಸಂಜೆ 7-00 ಗಂಟೆಯಲ್ಲಿ ಜಮೀನಿನ ಬಳಿ ಇರುವ ಪಂಪ್ ಹೌಸ್ ನ್ನು ಸ್ವಚ್ಚ ಮಾಡುತ್ತಿದ್ದಾಗ ಜಯದೇವಪ್ಪ, ನಂದೀಶ್‌ ಮತ್ತು ಬಸವರಾಜಪ್ಪ, ಅತ್ತಿಗಿರಿಕೊಪ್ಪ ಗ್ರಾಮದವರು ಅಲ್ಲಿಗೆ ಬಂದು ಕೆಟ್ಟ ಮಾತುಗಳಿಂದ ಬೈದು, ಕಲ್ಲಿನಿಂದ ಮತ್ತು ರಾಡ್ ನಿಂದ ಹೊಡೆದು ರಕ್ತಗಾಯ ಪಡಿಸಿರುತ್ತಾರೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಜಯದೇವಪ್ಪ ಬಿನ್ ರುದ್ರಪ್ಪ, ಅತ್ತಿಗಿರಿಕೊಪ್ಪ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 22.03.2020 ರಂದು ಸಂಜೆ 7-00 ಗಂಟೆಯಲ್ಲಿ ತೋಟದ ಬಳಿ ಇದ್ದಾಗ, ನವೀನ್‌ ಕುಮಾರ್‌ ಎಂಬುವರು ಪಂಪ್ ಹೌಸ್ ಬಳಿ ಬಂದು ಬೀಗವನ್ನು ಕಿತ್ತು ಸ್ವಚ್ಚ ಮಾಡುತ್ತಿದ್ದು, ಅದನ್ನು ದೂರುದಾರರು ಕೇಳಿದಕ್ಕೆ,  ಜಗಳ ಮಾಡಿ, ಕೆಟ್ಟಮಾತುಗಳಿಂದ ಬೈದು, ಕೈಗಳಿಂದ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾನೆ.

– ಅಕ್ರಮ ಮದ್ಯ ಮಾರಾಟ : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಕ್ರಮ ಮದ್ಯ ಮಾರಟ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ.22.03.2020 ರಂದು ಬೆಳಗ್ಗೆ 7-15 ಗಂಟೆಯಲ್ಲಿ ಸಂಜಯ್ ಗಾಂಧಿ ನಗರದ ಆರೋಪಿ ಶಿವ ಎಂಬುವನು ಸರ್ಕಾರಿ ಆಸ್ವತ್ರೆ ಹಿಂಭಾಗದ ಕಾಂಪೌಂಡ್ ಬಳಿ ಇರುವ ತಮ್ಮ ಚಿಲ್ಲರೆ ಅಂಗಡಿಯಲ್ಲಿ ಆಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದವನ ಮೇಲೆ ಪಿ.ಎಸ್.ಐ. ಶ್ರೀ. ನವೀನ್‌ ಮತ್ತು ಸಿಬ್ಬಂದಿ ದಾಳಿ ಮಾಡಿ  (1) BANGALORE WHISKY 90 ML 10 ಟೆಟ್ರಾ ಪ್ಯಾಕೇಟ್ ಗಳು (2) ORIGINAL CHOICE 90 ML 13 ಟೆಟ್ರಾ ಪ್ಯಾಕೇಟ್ ಗಳು (3) HAYWARDS CHEERS WHISKY 90 ML 12 ಟೆಟ್ರಾ ಪ್ಯಾಕೇಟ್ ಗಳು  (4) HIGHWAY DELUXE WHISKY 90 ML 14 ಟೆಟ್ರಾ ಪ್ಯಾಕೇಟ್ ಗಳು   ಮತ್ತು (5) LEGACY XXX RUM 90 ML 11 ಟೆಟ್ರಾ ಪ್ಯಾಕೇಟ್ ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

 

– ಅಸ್ವಾಭಾವಿಕ ಮರಣ ಪ್ರಕರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ ಗಂಗಮ್ಮ, ಹನುಮಂತರಾಯನದಿನ್ನೆ, ಬಂಗಾರಪೇಟೆ ತಾಲ್ಲೂಕು ರವರ ಜಮೀನಿನಲ್ಲಿ ಹಾಕಿರುವ ಬೋರ್ ವೆಲ್ ನಲ್ಲಿ ನೀರು ನಿಂತು ಹೋಗಿದ್ದು, ಇದರಿಂದ ದೂರುದಾರರ ಗಂಡ ಚಿಕ್ಕವೆಂಕಟೇಶಪ್ಪ, 50 ವರ್ಷ ರವರು ಮನಸ್ಸಿಗೆ ಬೇಸರವನ್ನುಂಟು ಮಾಡಿಕೊಂಡಿದ್ದು, ದಿನಾಂಕ 20.03.2020 ರಂದು ಬೆಳಿಗ್ಗೆಯಿಂದ ಸಂಜೆ 4.00 ಗಂಟೆ ಮಧ್ಯೆ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಚಿಕ್ಕವೆಂಕಟೇಶಪ್ಪ ರವರು ಯಾವುದೋ ಕೀಟ ನಾಶಕವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *